ಬೆಂಗಳೂರು: ಜೂನ್ 24ರ ಮಂಗಳವಾರದಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಖರೀದಿಸಲು ಉತ್ಸುಕರಾಗಿರುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯು ನಿರಂತರ ಇಳಿಕೆಯಾಗುತ್ತಿದ್ದು, ಇದೀಗ ಮತ್ತಷ್ಟು ಇಳಿಕೆಯಾಗಿದೆ.
ಚಿನ್ನದ ಬೆಲೆ ಏಕೆ ಇಳಿಯುತ್ತಿದೆ?
ವಿಶ್ವದಾದ್ಯಂತ ನಡೆಯುತ್ತಿರುವ ಯುದ್ಧ ಭೀತಿ ಇದ್ದರೂ, ಷೇರುಮಾರುಕಟ್ಟೆಯ ಸ್ಥಿತಿಸ್ಥಾಪನೆಯು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಜೊತೆಗೆ, ಈ ತಿಂಗಳು ಪ್ರಮುಖ ವೈವಾಹಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳು ಕಡಿಮೆ ಇರುವ ಕಾರಣ ಖರೀದಿ ಒತ್ತಡವೂ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಚಿನ್ನದ ಬೇಡಿಕೆ ಇಳಿದು ಬೆಲೆಯ ಕುಸಿತವಾಗಿದೆ.
ಇಂದಿನ ಚಿನ್ನದ ದರಗಳು (ಜೂನ್ 24):
- 18 ಕ್ಯಾರೆಟ್ ಚಿನ್ನ:
- ಪ್ರತಿ ಗ್ರಾಂ: ₹7,491 (61 ರೂ. ಇಳಿಕೆ)
- 10 ಗ್ರಾಂ: ₹74,910 (610 ರೂ. ಇಳಿಕೆ)
- 22 ಕ್ಯಾರೆಟ್ ಚಿನ್ನ:
- ಪ್ರತಿ ಗ್ರಾಂ: ₹9,155 (75 ರೂ. ಇಳಿಕೆ)
- 10 ಗ್ರಾಂ: ₹91,550 (750 ರೂ. ಇಳಿಕೆ)
- 24 ಕ್ಯಾರೆಟ್ ಚಿನ್ನ:
- ಪ್ರತಿ ಗ್ರಾಂ: ₹9,987
- 10 ಗ್ರಾಂ: ₹99,870 (820 ರೂ. ಇಳಿಕೆ)
ಇದನ್ನು ಓದಿ –ಪಡಿತರದಾರರಿಗೆ ಆಹಾರ ಕಿಟ್ ನೀಡಲು ಸರ್ಕಾರ ಚಿಂತನೆ
ಬೆಳ್ಳಿಯ ಇಂದಿನ ಬೆಲೆ:
- ಪ್ರತಿ ಗ್ರಾಂ: ₹109
- 10 ಗ್ರಾಂ: ₹1,090
- 100 ಗ್ರಾಂ: ₹10,900