ಅನಧಿಕೃತ ಬೆಟ್ಟಿಂಗ್ ಆ್ಯಪ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಪ್ರಸಿದ್ಧ ನಟ ಪ್ರಕಾಶ್ ರಾಜ್ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ನೀಡಿದೆ.
ಈ ಪ್ರಕರಣದಲ್ಲಿ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ ಮತ್ತು ಪ್ರಕಾಶ್ ರಾಜ್ ಅವರನ್ನು ವಿಚಾರಣೆಗಾಗಿ ಬಗ್ಗಲಾಗಿದ್ದು, ಇಡೀ ಚಿಕ್ಕುತಿದಂತೆ ದಿನಾಂಕಗಳನ್ನು ನಿಗದಿ ಮಾಡಲಾಗಿದೆ. ಜುಲೈ 23ರಂದು ರಾಣಾ ದಗ್ಗುಬಾಟಿಯನ್ನು, ಜುಲೈ 30ರಂದು ಪ್ರಕಾಶ್ ರಾಜ್ ಅವರನ್ನು, ಆಗಸ್ಟ್ 6ರಂದು ವಿಜಯ್ ದೇವರಕೊಂಡ ಅವರನ್ನು ಹಾಗೂ ಆಗಸ್ಟ್ 13ರಂದು ಮಂಚು ಲಕ್ಷ್ಮಿ ಅವರನ್ನು ವಿಚಾರಣೆಗಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ದಾಖಲಿಸಿದ ಕನಿಷ್ಠ ಐದು ಎಫ್‌ಐಆರ್‌ಗಳ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳು ಕೋಟ್ಯಂತರ ರೂ. ಅಕ್ರಮ ಆದಾಯ ಗಳಿಸಿರುವ ಆರೋಪದಲ್ಲಿವೆ.ಇದನ್ನು ಓದಿ –ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ
ಈ ಪ್ರಕರಣದಲ್ಲಿ ಒಟ್ಟು 29 ಸೆಲೆಬ್ರಿಟಿಗಳ ಹೆಸರುಗಳನ್ನು ಇ.ಡಿ ಪಟ್ಟಿ ಮಾಡಿದ್ದು, ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇವರಲ್ಲಿ ನಟ ನಟಿಯರಾದ ನಿಧಿ ಅಗರ್ವಾಲ್, ಪ್ರಣೀತಾ ಸುಭಾಷ್, ಅನನ್ಯಾ ನಾಗಲ್ಲ ಹಾಗೂ ಟಿವಿ ನಿರೂಪಕಿ ಶ್ರೀಮುಖಿ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ಹೆಸರುಗಳೂ ಸೇರಿವೆ.