ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ 32 ವಿಮಾನ ನಿಲ್ದಾಣಗಳನ್ನು ಮತ್ತೆ ಕಾರ್ಯಾರಂಭ ಮಾಡಲು ಭಾರತೀಯ ವಾಯುಪಡೆಯಿಂದ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಹಿಂದೆ ಭಾರತ-ಪಾಕ್ ನಡುವಿನ ಸಂಘರ್ಷ ತೀವ್ರಗೊಂಡ ಕಾರಣದಿಂದ, ದೇಶದ ಪಶ್ಚಿಮ ಮತ್ತು ಉತ್ತರ ಭಾಗದಲ್ಲಿರುವ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಮೇ 15ರವರೆಗೆ ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಸೂಚನೆ ನೀಡಿತ್ತು.
ಈ ವಿಮಾನ ನಿಲ್ದಾಣಗಳಲ್ಲಿ ಪಂಜಾಬ್‌ನ ಅಮೃತಸರ, ಲುಧಿಯಾನಾ, ಪಟಿಯಾಲಾ, ಬಟಿಂಡಾ, ಹಲ್ವಾರಾ, ಪಠಾಣ್‌ಕೋಟ್, ಹಿಮಾಚಲ ಪ್ರದೇಶದ ಭುಂತರ್, ಶಿಮ್ಲಾ, ಗಗ್ಗಲ್ (ಕಾಂಗ್ರಾ), ಚಂಡೀಗಢ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಜಮ್ಮು, ಲಡಾಖ್‌ನ ಲೇಹ್, ರಾಜಸ್ಥಾನದ ಕಿಶೆಂಗಢ, ಜೈಸಲ್‌ಮೇರ್, ಜೋಧ್‌ಪುರ, ಬಿಕಾನೇರ್ ಮತ್ತು ಗುಜರಾತ್‌ನ ಮುಂದ್ರಾ, ಜಾಮ್‌ನಗರ್ ಸೇರಿವೆ.ಇದನ್ನು ಓದಿ –ರಾಜ್ಯದಲ್ಲಿ ಮೇ 13ರಿಂದ ಗುಡುಗು ಸಹಿತ ಮಳೆಯ ಸಾಧ್ಯತೆ
ಈಗ ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಭಾರತೀಯ ವಾಯುಪಡೆ 32 ವಿಮಾನ ನಿಲ್ದಾಣಗಳನ್ನು ಕಾರ್ಯಾರಂಭಕ್ಕೆ ಅವಕಾಶ ನೀಡಿ ಸೂಚನೆ ನೀಡಿದ್ದು, ಅಂತರ್ ರಾಜ್ಯ ವಿಮಾನಯಾನ ಮತ್ತೆ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ.