ವಾಷಿಂಗ್ಟನ್/ನವದೆಹಲಿ: ಪರಮಾಣು ಶಸ್ತ್ರಸಜ್ಜಿತ ಭಾರತ-ಪಾಕಿಸ್ತಾನ ನಡುವಿನ ಯುದ್ಧ ಸಂಘರ್ಷ ತಾರಕಕ್ಕೇರುತ್ತಿರುವ ನಡುವೆಯೇ, ಭಾರತ ಮತ್ತು ಪಾಕಿಸ್ತಾನ ಈ ಕ್ಷಣದಿಂದಲೇ ಕದನ ವಿರಾಮ ಘೋಷಿಸಲು ಸಮ್ಮತಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ (ಮೇ 10) ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಟ್ವೀಟ್ ನಲ್ಲೇನಿದೆ?
ಅಮೆರಿಕದ ಮಧ್ಯಸ್ಥಿಕೆಯಲ್ಲಿ ರಾತ್ರಿಯಿಡೀ ನಡೆದ ದೀರ್ಘಾವಧಿಯ ಮಾತುಕತೆ ನಂತರ, ಭಾರತ ಮತ್ತು ಪಾಕಿಸ್ತಾನ ಪೂರ್ಣ ಪ್ರಮಾಣದ ಹಾಗೂ ತಕ್ಷಣದಿಂದಲೇ ಕದನ ವಿರಾಮ ಘೋಷಿಸಲು ಸಮ್ಮತಿಸಿರುವುದಾಗಿ ಘೋಷಿಸಲು ಸಂತೋಷವಾಗಿದೆ. ಸಾಮಾಜ್ಯ ಜ್ಞಾನ, ಬುದ್ದಿವಂತಿಕೆ ಪ್ರದರ್ಶಿಸಿರುವ ಉಭಯ ದೇಶಗಳಿಗೂ ಅಭಿನಂದನೆಗಳು.
ಕದನ ವಿರಾಮಕ್ಕೆ ಸಂಬಂಧಿಸಿದಂತೆ ಭಾರತದ ನಿಲುವು ಇನ್ನಷ್ಟೇ ಘೋಷಣೆಯಾಗಬೇಕಿದೆ. ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂದು ವರದಿ ತಿಳಿಸಿದೆ.ಇದನ್ನು ಓದಿ –ಆಪರೇಷನ್ ಸಿಂಧೂರ್: ಪಾಕಿಸ್ತಾನದ 8 ಏರ್‌ಬೇಸ್‌ಗಳನ್ನುಧ್ವಂಸಗೊಳಿಸಿದ ಭಾರತೀಯ ಸೇನೆ
ಪಾಕ್ ಹೇಳಿದ್ದೇನು:
ಡೊನಾಲ್ಡ್ ಟ್ರಂಪ್ ಟ್ವೀಟ್ ಬೆನ್ನಲ್ಲೇ ತಕ್ಷಣದ ಕದನವಿರಾಮಕ್ಕೆ ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿರುವ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.