ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕಠಿಣ ಕ್ರಮ ಕೈಗೊಂಡಿದ್ದು, ‘ಆಪರೇಷನ್ ಸಿಂಧೂರ್’ ಮೂಲಕ ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿದೆ. ಇದಾದ ಬಳಿಕವೂ ಭಾರತ ಪಾಕಿಸ್ತಾನ ವಿರುದ್ಧದ ದಾಳಿಯನ್ನು ಮುಂದುವರೆಸಿದ್ದು, ಇದೀಗ ಭಾರತೀಯ ವಾಯು ಸೇನೆ (IAF) ಪಾಕಿಸ್ತಾನದ ಎಂಟು ಪ್ರಮುಖ ವಾಯು ನೆಲೆಗಳನ್ನು ಧ್ವಂಸಗೊಳಿಸಿದೆ.
ಭಾರತೀಯ ವಾಯು ಸೇನೆಯ ಏರ್‌ಸ್ಟ್ರೈಕ್‌ನಲ್ಲಿ ಧ್ವಂಸಗೊಂಡ ಪಾಕಿಸ್ತಾನದ 8 ಪ್ರಮುಖ ವಾಯುನೆಲೆಗಳು ಈವು:
- ನೂರ್ ಖಾನ್ ವಾಯುನೆಲೆ
- ಮುರಿದ್ ವಾಯುನೆಲೆ
- ರಫೀಕಿ ಏರ್ ಬೇಸ್
- ರಹ್ಮ್ ಯಾರ್ ಖಾನ್ ವಾಯುನೆಲೆ
- ಸರಗೋದಾ ಏರ್‌ಬೇಸ್
- ಸುಕ್ಕೂರು ವಾಯುನೆಲೆ
- ಚೂನಿಯನ್ ವಾಯುನೆಲೆ
- ಸಿಯಾಲ್‌ಕೋಟ್ ವಾಯುನೆಲೆ
ಇದನ್ನು ಓದಿ –ಆಪರೇಷನ್ ಸಿಂದೂರ್‌ನಲ್ಲಿ ಮೋಸ್ಟ್ ವಾಂಟೆಂಡ್ ಉಗ್ರರು ಫಿನಿಶ್: ಇಲ್ಲಿದೆ ಭಾರತೀಯ ಸೇನೆ ಹತ್ಯೆಗೈದವರ ಲೀಸ್ಟ್
ಈ ದಾಳಿಯಿಂದ ಪಾಕಿಸ್ತಾನದ ವಾಯು ಭದ್ರತೆಗೆ ತೀವ್ರ ಆಘಾತವಾಗಿದೆ. ಭಾರತೀಯ ವಾಯು ಸೇನೆಯ ದಾಳಿಯಲ್ಲಿ ಹಲವು ಉಗ್ರ ನೆಲೆಗಳು ಹಾಗೂ ಗೂಡಂಗಡಿಗಳೂ ನಾಶಗೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸುತ್ತಿವೆ. ಭಾರತ ಎಚ್ಚರಿಕೆಯೊಂದಿಗೆ ಉಗ್ರರ ವಿರುದ್ಧ ತೀವ್ರ ತಾಕಾತು ತೋರಿಸುತ್ತಿದ್ದು, ರಾಷ್ಟ್ರದ ಭದ್ರತೆಗೆ ಭಂಗವನ್ನೇನು ಸಹಿಸದೆ ಪ್ರತೀ ಕ್ರಮವನ್ನು ಕೈಗೊಳ್ಳುತ್ತಿದೆ.