- – ಆಗಸ್ಟ್ 10ರೊಳಗೆ ಅರ್ಜಿ ಸಲ್ಲಿಸಿ
ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧೀನದ ಗುಪ್ತಚರ ಇಲಾಖೆ (Intelligence Bureau – IB) ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO) ಗ್ರೇಡ್-II / ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗೆ ಅರ್ಜಿ ಪ್ರಕ್ರಿಯೆ ಜುಲೈ 19, 2025ರಿಂದ ಆರಂಭಿಸಿದೆ. ಒಟ್ಟು 3717 ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದ್ದು, ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 10, 2025ರೊಳಗೆ ಅಧಿಕೃತ ವೆಬ್‌ಸೈಟ್ www.mha.gov.in ಮೂಲಕ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
- ಹುದ್ದೆಗಳ ಸಂಖ್ಯೆ: 3717
- ಹುದ್ದೆ: ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ ದರ್ಜೆ–2 / ಕಾರ್ಯನಿರ್ವಾಹಕ (ACIO Grade-II/Executive)
ಶೈಕ್ಷಣಿಕ ಅರ್ಹತೆ:
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಜೊತೆಗೆ ಮೂಲಭೂತ ಕಂಪ್ಯೂಟರ್ ಜ್ಞಾನ ಅವಶ್ಯಕ.
ವಯೋಮಿತಿ:
- ಕನಿಷ್ಠ: 18 ವರ್ಷ
- ಗರಿಷ್ಠ: 27 ವರ್ಷ (ಆಗಸ್ಟ್ 10, 2025ದನ್ನೇ ಆಧಾರವಾಗಿ ಪರಿಗಣಿಸಲಾಗುತ್ತದೆ)
- ನಿಯಮಾನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ.
ಅರ್ಜಿ ಶುಲ್ಕ:
- ಸಾಮಾನ್ಯ/ಓಬಿಸಿ/ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳು: ₹650
- ಇತರೆ ಎಲ್ಲಾ ವರ್ಗಗಳು (ಸ್ಟಿ/ಎಸ್‌ಸಿ/ಮಹಿಳೆಯರು): ₹550
ಆಯ್ಕೆ ಪ್ರಕ್ರಿಯೆ – ಮೂರು ಹಂತಗಳು:
- ಶ್ರೇಣಿ–I (Objective Test):
- 100 ಅಂಕಗಳು
- ಸಾಮಾನ್ಯ ಅರಿವು, ಪರಿಮಾಣಾತ್ಮಕ ಸಾಮರ್ಥ್ಯ, ಲಾಜಿಕ್, ಇಂಗ್ಲಿಷ್, ಸಾಮಾನ್ಯ ಅಧ್ಯಯನ
- ಅವಧಿ: 60 ನಿಮಿಷ
- ಶ್ರೇಣಿ–II (Descriptive Test):
- 50 ಅಂಕಗಳು
- ಪ್ರಬಂಧ (30 ಅಂಕ) + ಇಂಗ್ಲಿಷ್ ಗ್ರಹಿಕೆ/ಸಾರಾಂಶ (20 ಅಂಕ)
- ಶ್ರೇಣಿ–III (ಸಂದರ್ಶನ):
- 100 ಅಂಕಗಳು
ವೇತನ ವಿವರ:
- Pay Level-7: ₹44,900 – ₹1,42,400
- ಕೇಂದ್ರ ಸರ್ಕಾರದ ಇತರೆ ಭತ್ಯೆಗಳೂ ಲಭ್ಯ.
ಅರ್ಜಿ ಸಲ್ಲಿಸುವ ವಿಧಾನ:
ಇದನ್ನು ಓದಿ –ಮಂಡ್ಯ: ವೈದ್ಯಕೀಯ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು
Contents
ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧೀನದ ಗುಪ್ತಚರ ಇಲಾಖೆ (Intelligence Bureau – IB) ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO) ಗ್ರೇಡ್-II / ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗೆ ಅರ್ಜಿ ಪ್ರಕ್ರಿಯೆ ಜುಲೈ 19, 2025ರಿಂದ ಆರಂಭಿಸಿದೆ. ಒಟ್ಟು 3717 ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದ್ದು, ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 10, 2025ರೊಳಗೆ ಅಧಿಕೃತ ವೆಬ್‌ಸೈಟ್ www.mha.gov.in ಮೂಲಕ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಹುದ್ದೆಗಳ ವಿವರ:ಶೈಕ್ಷಣಿಕ ಅರ್ಹತೆ:ವಯೋಮಿತಿ:ಅರ್ಜಿ ಶುಲ್ಕ:ಆಯ್ಕೆ ಪ್ರಕ್ರಿಯೆ – ಮೂರು ಹಂತಗಳು:ವೇತನ ವಿವರ:ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್ www.mha.gov.in ಗೆ ಭೇಟಿ ನೀಡಿ
- “IB ACIO Recruitment 2025” ಲಿಂಕ್ ಕ್ಲಿಕ್ ಮಾಡಿ
- ನೋಂದಣಿ ಮಾಡಿ ಮತ್ತು ಲಾಗಿನ್ ಆಗಿ
- ಅರ್ಜಿ ನಮೂನೆ ತುಂಬಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಅರ್ಜಿ ಸಲ್ಲಿಸಿ ಮತ್ತು ಮುದ್ರಿತ ಪ್ರತಿಯನ್ನು ಉಳಿಸಿಕೊಳ್ಳಿ