ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟಾಟಾ ಐಪಿಎಲ್ 2025ರ ಉಳಿದ ಪಂದ್ಯಗಳನ್ನು ಒಂದು ವಾರದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, ಮುಂದಿನ ಹಂತದ ಕಾರ್ಯಕ್ರಮಗಳು ಶೀಘ್ರದಲ್ಲೇ ತಿಳಿಸಲಿದ್ದಾರೆ.
ಬಿಸಿಸಿಐ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಆಡಳಿತ ಮಂಡಳಿಯಿಂದ ಕೇಳುವ ವಿನಂತಿಗೆ ಸ್ಪಂದನೆಯಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಐಪಿಎಲ್ 2025ರ ಉಳಿದ ಭಾಗವನ್ನು ಆತಿಥ್ಯ ನೀಡಲು ಸಿದ್ಧತೆಯಿದೆ. ಆದರೆ, ಅಂತರರಾಷ್ಟ್ರೀಯ ಹಾಗೂ ಸ್ಥಳೀಯ ಕ್ರಿಕೆಟ್ ವೇಳಾಪಟ್ಟಿಗಳ ನಡುವಣ ಒತ್ತಡದಿಂದಾಗಿ ಪಂದ್ಯಗಳನ್ನು ಇಂಗ್ಲೆಂಡಿಗೆ ಸ್ಥಳಾಂತರಿಸುವುದು ಸುಲಭವಲ್ಲವೆಂದು ವರದಿ ತಿಳಿಸಿದೆ.
ಈ ಬೆಳವಣಿಗೆಯ ಕುರಿತು ಹೇಳಿಕೆ ನೀಡಿದ ಐಪಿಎಲ್ ಮಾಧ್ಯಮ ಸಲಹೆಯಲ್ಲಿ ಹೀಗೆ ಹೇಳಲಾಗಿದೆ:
“ಟಾಟಾ ಐಪಿಎಲ್ 2025ರ ಉಳಿದ ಪಂದ್ಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವಾರದವರೆಗೆ ಅಮಾನತುಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನದ ನಂತರ, ಸಂಬಂಧಿತ ಅಧಿಕಾರಿಗಳು ಹಾಗೂ ಮಧ್ಯಸ್ಥರೊಂದಿಗೆ ಸಮಾಲೋಚಿಸಿ ಪಂದ್ಯಾವಳಿಯ ಹೊಸ ವೇಳಾಪಟ್ಟಿ ಮತ್ತು ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು.”
ಇದಾದ ಮುಂಚೆ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಅವರು ಐಪಿಎಲ್‌ನ ಉಳಿದ ಹಂತವನ್ನು ಯುಕೆಯಲ್ಲಿ ಮುಗಿಸಲು ಸಲಹೆ ನೀಡಿದ್ದರು.ಇದನ್ನು ಓದಿ –ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧಾರ ?
ಈ ನಿರ್ಧಾರವನ್ನು ಎಲ್ಲಾ ಪ್ರಮುಖ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ನಂತರ IPL ಆಡಳಿತ ಮಂಡಳಿ ಕೈಗೊಂಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.