ಬೆಂಗಳೂರು : ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿನಗರದಲ್ಲಿರುವ ಫೋಥಿಸ್ ಬಟ್ಟೆ ಶೋ ರೂಮ್ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚೆನ್ನೈನಿಂದ ಬಂದ ಸುಮಾರು 30 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಶೋ ರೂಮ್‌ಗೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಟೆಂಬರ್ ಲೇಔಟ್‌ನಲ್ಲಿರುವ ಈ ಶೋ ರೂಮ್ ಮೇಲೆ ಆದಾಯ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಇದನ್ನು ಓದಿ –ನೇಪಾಳದ ಮೊದಲ ಮಹಿಳಾ ಪ್ರಧಾನಿ ಆಗಲಿರುವ ಸುಶೀಲಾ ಕರ್ಕಿ
ತಮಿಳುನಾಡಿನ ಒಬ್ಬ ಉದ್ಯಮಿಗೆ ಸೇರಿದ ಈ ಬಟ್ಟೆ ಶೋ ರೂಮ್‌ನಲ್ಲಿ ಅಧಿಕಾರಿಗಳು ಇನ್ನೂ ಪರಿಶೀಲನೆ ಮುಂದುವರಿಸಿದ್ದಾರೆ.