ಬೆಂಗಳೂರು: ಇದೇ ಜನವರಿ 22ರಿಂದ 31ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸಲು ತುರ್ತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರಜಾ ದಿನಗಳನ್ನು ಹೊರತುಪಡಿಸಿ ಎಷ್ಟು ದಿನ ಅಧಿವೇಶನ ನಡೆಯಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಎರಡು ಗಂಟೆಗಳಿಗೂ ಅಧಿಕ ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ಮನ್ರೇಗಾ ಮತ್ತು ವಿಕಸಿತ ಭಾರತ್ ಯೋಜನೆಗಳಿಗೆ ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಈ ಹಿನ್ನೆಲೆಯಲ್ಲಿ ಮನ್ರೇಗಾ ಯೋಜನೆಯ ಸಮರ್ಥನೆಗಾಗಿ ಐವರು ಸಚಿವರ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ತಂಡದಲ್ಲಿ ಹೆಚ್.ಕೆ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ಶರಣಪ್ರಕಾಶ್ ಪಾಟೀಲ್ ಹಾಗೂ ಲಾಡ್ ಸೇರಿದ್ದಾರೆ. ಸದನದಲ್ಲಿ ಇವರ ಕಡ್ಡಾಯ ಹಾಜರಾತಿಗೂ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಕೈಗೊಳ್ಳುವ ಕುರಿತು ಸರ್ಕಾರ ತಂತ್ರ ರೂಪಿಸಿದ್ದು, ಈ ವಿಷಯವೂ ಕ್ಯಾಬಿನೆಟ್‌ನಲ್ಲಿ ವಿಶ್ದವಾಗಿ ಚರ್ಚೆಗೆ ಬಂದಿತು. ಒಟ್ಟಾರೆ ತುರ್ತು ಸಚಿವ ಸಂಪುಟ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿ ಅಧಿವೇಶನ ದಿನಾಂಕವನ್ನು ಅಧಿಕೃತಗೊಳಿಸಲಾಗಿದೆ.ಇದನ್ನು ಓದಿ –ಜ.15ರಿಂದ ನಮ್ಮ ಮೆಟ್ರೋದಲ್ಲಿ QR ಆಧಾರಿತ ಪಾಸ್
ತುರ್ತು ಕ್ಯಾಬಿನೆಟ್‌ನ ಮೂರು ಪ್ರಮುಖ ನಿರ್ಣಯಗಳು:
- ಜ.22ರಂದು ಬೆಳಿಗ್ಗೆ 11ಕ್ಕೆ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಕರೆಯಲು ತೀರ್ಮಾನ; ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ.
- ರಾಜ್ಯಪಾಲರ ಜಂಟಿ ಭಾಷಣದ ಅನುಮೋದನೆಗೆ ಮುಖ್ಯಮಂತ್ರಿ ಅವರಿಗೆ ಪರಮಾಧಿಕಾರ.
- ವಿಬಿಜಿ ರಾಮ್ ಜಿ ಕಾಯ್ದೆ–2025 ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ಜಂಟಿ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ತೀರ್ಮಾನ.








