-ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ವಿವಾದ
- ಬಳ್ಳಾರಿಯಲ್ಲಿ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ, ದೇವರ ದಾರ ಬಿಚ್ಚಿಸಿದ ಸಿಬ್ಬಂದಿ.
- ಅಭ್ಯರ್ಥಿಗಳಿಂದ ಅಸಮಾಧಾನ ವ್ಯಕ್ತ; “ಮಾಂಗಲ್ಯ, ಮೂಗುತಿ ನಮ್ಮ ಗುರುತು” ಎಂದು ಪ್ರತಿಕ್ರಿಯೆ.
ಬಳ್ಳಾರಿ: ರಾಜ್ಯದಾದ್ಯಂತ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಕೆಇಎ ಮತ್ತೊಂದು ಎಡವಟ್ಟು ನಡೆದಿದೆ. ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ ಹಾಗೂ ದೇವರ ದಾರವನ್ನೇ ಪರೀಕ್ಷಾ ಸಿಬ್ಬಂದಿಗಳು ಬಿಚ್ಚಿಸಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.
ಈ ಬಾರಿ ರಾಜ್ಯದ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಒಟ್ಟು 1.36 ಲಕ್ಷ ಅಭ್ಯರ್ಥಿಗಳು 33 ವಿಷಯಗಳಿಗೆ ಕೆ-ಸೆಟ್ ಪರೀಕ್ಷೆ ಬರೆದರು.
ಬಳ್ಳಾರಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಕಿವಿಯೋಲೆ ಮತ್ತು ಮೂಗುತಿ ತೆಗೆಯಲು ಸಿಬ್ಬಂದಿ ಒತ್ತಾಯಿಸಿದ್ದು, ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವರು ಪರೀಕ್ಷಾ ಕೇಂದ್ರದ ಹೊರಗೆ ಬೇಸರ ವ್ಯಕ್ತಪಡಿಸಿ, “ಮಾಂಗಲ್ಯ, ಕಾಲುಂಗರದಂತೆ ಮೂಗುತಿಗೂ ಧಾರ್ಮಿಕ ಮಹತ್ವ ಇದೆ. ನಿಯಮಕ್ಕಾಗಿ ಅದನ್ನು ಬಿಚ್ಚಿಸುವುದು ನೋವು ತಂದಿದೆ” ಎಂದು ಹೇಳಿದರು.ಇದನ್ನು ಓದಿ –ಜಮೀನಿನ ವಿದ್ಯುತ್ ಬೇಲಿಗೆ ಬಲಿಯಾದ ಎರಡು ಕಾಡಾನೆಗಳು
ಆದರೂ ಅನೇಕರು ಪರೀಕ್ಷೆಯನ್ನು ಬರೆದಿದ್ದು, ಈ ಘಟನೆ ಕೆಇಎ ನಡೆಸುವ ಪರೀಕ್ಷಾ ಕ್ರಮದ ಕುರಿತು ಪ್ರಶ್ನೆ ಹುಟ್ಟಿಸಿದೆ.








