- KIADB ಭೂ ಹಂಚಿಕೆ ಕೇಸ್‌ಗೆ ಸಂಬಂಧಿಸಿದಂತೆ ಮತ್ತೊಂದು ಖಾಸಗಿ ದೂರು ದಾಖಲೆ
ಬೆಂಗಳೂರು (ಆ.2): ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕಾನೂನುಬಾಹಿರವಾಗಿ 5 ಎಕರೆ ಜಮೀನು ಮಂಜೂರಾದ ಪ್ರಕರಣಕ್ಕೆ ಸಂಬಂಧಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ವಿರುದ್ಧ ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶಿಸಬೇಕೆಂದು ಖಾಸಗಿ ದೂರು ದಾಖಲಾಗಿದೆ.
ಲಂಚಮುಕ್ತ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ವಿಜಯರಾಘವ ಮರಾಠೆ ಅವರು ಈ ಖಾಸಗಿ ದೂರು ದಾಖಲಿಸಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದನ್ನು ಸ್ವೀಕರಿಸಿದೆ. ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ದೂರುದಾರರ ಪರವಾಗಿ ವಾದ ಮಂಡಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಆ.5ಕ್ಕೆ ಮುಂದೂಡಿದೆ.
Contents
ಬೆಂಗಳೂರು (ಆ.2): ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕಾನೂನುಬಾಹಿರವಾಗಿ 5 ಎಕರೆ ಜಮೀನು ಮಂಜೂರಾದ ಪ್ರಕರಣಕ್ಕೆ ಸಂಬಂಧಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ವಿರುದ್ಧ ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶಿಸಬೇಕೆಂದು ಖಾಸಗಿ ದೂರು ದಾಖಲಾಗಿದೆ.ಏನಿದು ಪ್ರಕರಣ?ಆರೋಪಿಗಳ ಪಟ್ಟಿ:ಮತ್ತೊಂದು ಖಾಸಗಿ ದೂರು:
ಏನಿದು ಪ್ರಕರಣ?
- 2024ರ ಫೆಬ್ರವರಿ 7ರಂದು, ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ R&D ಸೆಂಟರ್ ಮತ್ತು ಟ್ರೈನಿಂಗ್ ಸೆಂಟರ್ ಸ್ಥಾಪನೆಗಾಗಿ ಸಿದ್ದಾರ್ಥ ವಿಹಾರ ಟ್ರಸ್ಟ್ ವತಿಯಿಂದ ಸಿಎ (Civic Amenities) ನಿವೇಶನಕ್ಕಾಗಿ KIADBಗೆ ಅರ್ಜಿ ಸಲ್ಲಿಸಲಾಗಿತ್ತು.
- 2024ರ ಮೇ 30ರಂದು, 5 ಎಕರೆ ಜಮೀನು ಮಂಜೂರಾತಿ ನೀಡಲಾಗಿದೆ.
- ದೂರಿನ ಪ್ರಕಾರ, ಅಪೂರ್ಣ ದಾಖಲೆಗಳನ್ನು ಹೊಂದಿರುವ ಅರ್ಜಿಗೆ, ಯೋಜನೆ ಪರಿಶೀಲನೆ ಇಲ್ಲದೆ ತರಾತುರಿಯಲ್ಲಿ ಭೂ ಮಂಜೂರಾತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
- ಇದರೊಂದಿಗೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 314, 316, 61 ಅಡಿಯಲ್ಲಿ FIR ದಾಖಲಿಸಿ ತನಿಖೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ.
ಆರೋಪಿಗಳ ಪಟ್ಟಿ:
- ಮಲ್ಲಿಕಾರ್ಜುನ ಖರ್ಗೆ
- ಅವರ ಪತ್ನಿ ರಾಧಾಬಾಯಿ ಎಂ. ಖರ್ಗೆ
- ಅಳಿಯ ರಾಧಾಕೃಷ್ಣ
- ಪುತ್ರರು: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಹುಲ್ ಎಂ. ಖರ್ಗೆ
- ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್
- KIADB ಅಧಿಕಾರಿಗಳು
ಇದನ್ನು ಓದಿ –ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು
ಮತ್ತೊಂದು ಖಾಸಗಿ ದೂರು:
- 2014ರಲ್ಲಿ, BTM ಲೇಔಟ್‌ನ 4ನೇ ಹಂತ 2ನೇ ಬ್ಲಾಕ್‌ನಲ್ಲಿ ಬಿಎಡಿಎ ವ್ಯಾಪ್ತಿಯ 2 ಎಕರೆ ಸಿಎ ನಿವೇಶನವನ್ನು ಅಕ್ರಮವಾಗಿ ಪರಭಾರೆಗೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಖರ್ಗೆ ಕುಟುಂಬದ ವಿರುದ್ಧ ಮತ್ತೊಂದು ಖಾಸಗಿ ದೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದಾಖಲಾಗಿದೆ.