ಮಂಡ್ಯ: ಕೆಆರ್‌ಎಸ್ (KRS) ಅಣೆಕಟ್ಟೆ ಜೂನ್ ತಿಂಗಳಲ್ಲಿಯೇ ಸಂಪೂರ್ಣ ಭರ್ತಿಯಾಗಿದ್ದರೂ, ಇದುವರೆಗೆ ಕಾಲುವೆ ಮೂಲಕ ನೀರು ಹರಿಸಲಾಗಿರಲಿಲ್ಲ. ಆದರೆ ರೈತರ ತೀವ್ರ ಅಸಮಾಧಾನ ಹಾಗೂ ಹೋರಾಟದ ಎಚ್ಚರಿಕೆಯ ಬಳಿಕ ಇದೀಗ ನಾಲೆಗಳಿಗೆ ನೀರು ಬಿಡಲಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗಿದ್ದು, ಪರಿಣಾಮವಾಗಿ ಕನ್ನಂಬಾಡಿ ಕೆಆರ್‌ಎಸ್ ಡ್ಯಾಂ ಪೂರ್ಣವಾಗಿ ತುಂಬಿತ್ತು. ಆದರೆ ಮಂಡ್ಯ ಭಾಗದಲ್ಲಿ ಮುಂಗಾರು ಮಳೆ ಚುರುಕು ಇಲ್ಲದ ಕಾರಣದಿಂದಾಗಿ ಬೆಳೆಗಳು ಒಣಗತಾರಂಭಿಸಿವೆ.
ಇದೇ ಸಂದರ್ಭದಲ್ಲಿ, ಡ್ಯಾಂನಲ್ಲಿ ನೀರು ಇರುವುದರಲ್ಲೂಾ ಕೂಡಾ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು “ನಾಲೆಯ ಕಾಮಗಾರಿ” ಎಂಬ ನೆಪ ಹೇಳಿ ನೀರು ಬಿಡಲು ವಿಳಂಬ ಮಾಡುತ್ತಿದ್ದರು.
ಇದನ್ನು ಓದಿ –ರಾಜ್ಯದಲ್ಲಿ 15,000 ಪೊಲೀಸ್ ಹುದ್ದೆಗಳಿಗೆ ಶೀಘ್ರ ನೇಮಕಾತಿ
ಈ ಕುರಿತು ರೈತ ಸಂಘಟನೆಗಳು ಕಠಿಣ ಎಚ್ಚರಿಕೆ ನೀಡಿದ ಬಳಿಕ, ಇಂದು ಬೆಳ್ಳಂಬೆಳಿಗ್ಗೆ ವಿಸಿ ನಾಲೆಯ ಮೂಲಕ ನಾಲೆಗಳಿಗೆ ನೀರು ಹರಿಸಲಾಗಿದೆ.