ಉಡುಪಿ: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಮಕ್ಕಳಿಗೆ ತ್ವರಿತ ನೆರವು ಒದಗಿಸುವ ಉದ್ದೇಶದಿಂದ ‘ಅಕ್ಕ’ ಪಡೆ ರೂಪಿಸಲಾಗಿದೆ.
ಈ ಹೊಸ ಯೋಜನೆಗೆ ನವೆಂಬರ್ 19ರಂದು ಬೆಂಗಳೂರಿನಲ್ಲಿ ಅಧಿಕೃತ ಚಾಲನೆ ನೀಡಲಾಗುವುದು ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಪ್ರಾರಂಭವಾದ ನಂತರ ಮೈಸೂರು, ಉಡುಪಿ, ಮಂಗಳೂರು ಹಾಗೂ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಅಕ್ಕ’ ಪಡೆ ಕಾರ್ಯನಿರ್ವಹಣೆ ಪ್ರಾರಂಭಿಸಲಿದೆ” ಎಂದರು.ಇದನ್ನು ಓದಿ –ಪ್ರವಾಸ ದುರಂತ: 4 ಮಕ್ಕಳು ನಾಲೆಯಲ್ಲಿ ಬಿದ್ದು ದುರ್ಮರಣ
ಅದೇ ದಿನ ರಾಜ್ಯದ ಅಂಗನವಾಡಿ ಯೋಜನೆಗೆ 50 ವರ್ಷಗಳು ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಬೆಂಗಳೂರಿನಲ್ಲಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಚಿವರು ತಿಳಿಸಿದರು.








