ಬೆಂಗಳೂರು, ಏಪ್ರಿಲ್ 30: ಮದ್ಯಪಾನಿಗಳಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಶಾಕ್ ಕಾದಿದೆ. ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಮದ್ಯದ ಬೆಲೆ ಹೆಚ್ಚಿಸಿದ್ದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ, ಈಗ ಮತ್ತೆ ಮೌಲ್ಯವರ್ಧಿತ ಸುಂಕ ಹೆಚ್ಚಿಸುವ ಮೂಲಕ ಮದ್ಯದ ಬೆಲೆ ಏರಿಸಲು ನಿರ್ಧರಿಸಿದೆ.
ಈ ಬಾರಿ ಮದ್ಯದ ಬೆಲೆ ಪ್ರತಿ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) 10 ರಿಂದ 15 ರೂಪಾಯಿ ಹೆಚ್ಚಳಗೊಳ್ಳಲಿದೆ. ಇದರ ಜೊತೆಗೆ ಬಿಯರ್ ಬೆಲೆಯೂ ಶೇಕಡಾ 10ರಷ್ಟು ಹೆಚ್ಚಳಗೊಳ್ಳಲಿದೆ ಎಂಬ ಮಾಹಿತಿ ದೊರಕಿದೆ. ಮದ್ಯದ ಬೆಲೆ ಏರಿಕೆ ಸಂಬಂಧ ಮಂಗಳವಾರ ಸಂಜೆ ಅಬಕಾರಿ ಇಲಾಖೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ.
ಯಾವ ಮದ್ಯಗಳ ಬೆಲೆ ಏರಿಕೆಯಾಗಲಿದೆ ?
ಹೊಸ ಅಧಿಸೂಚನೆಯ ಪ್ರಕಾರ, ಈ ಕೆಳಗಿನ ಮದ್ಯಗಳ ಬೆಲೆಗೆ ಏರಿಕೆ ಅನ್ವಯವಾಗಲಿದೆ:
- ವಿಸ್ಕಿ
- ಜಿನ್
- ರಮ್
ಬಿಯರ್, ಟಾಡಿ ಹಾಗೂ ವೈನ್‌ಗಳ ಬೆಲೆ ಈಗಿನಂತೆ ಇರಲಿದೆ.
ಏಕೆ ಬೆಲೆ ಏರಿಕೆ?
ರಾಜ್ಯ ಸರ್ಕಾರ ಈ ಬಾರಿ ಅಬಕಾರಿ ಇಲಾಖೆಗೆ ₹40,000 ಕೋಟಿ ರೂ. ಆದಾಯ ಗುರಿ ನಿಗದಿ ಮಾಡಿರುವುದರಿಂದ, ಈ ಗುರಿ ತಲುಪಿಸಲು ಮದ್ಯದ ಬೆಲೆಯಲ್ಲಿ ಏರಿಕೆಯನ್ನು ಅನಿವಾರ್ಯವನ್ನಾಗಿ ಮಾಡಲಾಗಿದೆ. ಹಿಂದಿನ ಬಜೆಟ್‌ನಲ್ಲಿ ಮದ್ಯದ ಮೇಲಿನ ಯಾವುದೇ ತೆರಿಗೆ ಬದಲಾವಣೆ ಘೋಷಿಸಲಿಲ್ಲ. ಆದರೆ ಇದೀಗ ಶಾಂತವಾಗಿ ಈ ಪ್ರಸ್ತಾವನೆ ಮುಂದಿಟ್ಟು, ಹಂತ ಹಂತವಾಗಿ ಬೆಲೆ ಹೆಚ್ಚಿಸಲು ಉದ್ದೇಶಿಸಲಾಗಿದೆ.ಇದನ್ನು ಓದಿ –ಮೇ 1ರಿಂದ ಎಟಿಎಂ ವಹಿವಾಟು ಶುಲ್ಕ ಹೆಚ್ಚಳ
ಪ್ರತಿಕ್ರಿಯೆ ಮತ್ತು ವಿರೋಧ:
ಮದ್ಯ ಮಾರಾಟ ಕಂಪನಿಗಳು ಈ ಕ್ರಮವನ್ನು ವಿರೋಧಿಸಿದ್ದು, ಈಗಾಗಲೇ ಮದ್ಯ ಮಾರಾಟದಲ್ಲಿ ಕುಸಿತವಿದ್ದು, ಹೆಚ್ಚುವರಿ ಬೆಲೆ ಗ್ರಾಹಕರನ್ನು ಇನ್ನಷ್ಟು ದೂರ ಮಾಡಲಿದೆ ಎಂದು ಅಭಿಪ್ರಾಯಪಟ್ಟಿವೆ. ಮದ್ಯ ಪ್ರಿಯರೂ ಕೂಡ ಹೆಚ್ಚಿದ ಬೆಲೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.