By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ನೇರವಾಗಿ ಮಾತನಾಡೋರು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವೇ….?
    April 4, 2026
    “ಈ ಸಮಯ ಕಳೆದು ಹೋಗುತ್ತದೆ”
    March 29, 2026
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
    ರಾಮ ನಾಮ ಜಪದ ಮಹಿಮೆ
    March 27, 2026
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
  • Sports
  • National
  • International
  • Crime
Reading: ಶುದ್ಧ ಪ್ರೀತಿಯಿರದ ಪ್ರೇಮ…… ಅದು ಪ್ರೇಮವೇ….?
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಶುದ್ಧ ಪ್ರೀತಿಯಿರದ ಪ್ರೇಮ…… ಅದು ಪ್ರೇಮವೇ….?
Articles

ಶುದ್ಧ ಪ್ರೀತಿಯಿರದ ಪ್ರೇಮ…… ಅದು ಪ್ರೇಮವೇ….?

Team Varthaman
Last updated: February 13, 2026 5:48 PM
Team Varthaman
Published: February 14, 2026
Share
SHARE
  • (ಪ್ರೇಮಿಗಳ ದಿನದಂದು‌ ಹೀಗೊಂದು ಪ್ರೀತಿಯ ಪುರಾಣ )

“ಪ್ರೀತಿ ” ಅನ್ನೋ ಎರಡಕ್ಷರಕ್ಕೆ ಏನೆಲ್ಲಾ ಅರ್ಥ ಅನರ್ಥ, ವಿಶಾಲಾರ್ಥ, ಮಹತ್ವದರ್ಥ, ಗೂಡಾರ್ಥ, ಗಹನಾರ್ಥ ಇದೆಯಲ್ಲವೇ..? ಈ ಜಗತ್ತಿನ‌ ಎಲ್ಲಾ‌ ಜೈವಿಕ ಸಂಬಂಧಗಳ ಮೂಲ ಸೆಲೆಯೇ ಪ್ರೀತಿ ! ಪರಸ್ಪರರಲ್ಲಿ ನಂಬಿಕೆ, ಆತ್ಮೀಯತೆ, ವಿಶ್ವಾಸ, ಅಭಿಮಾನ, ಹೆಮ್ಮೆ‌ ಮೂಡಲು ಮೂಲತಃ‌ ಪ್ರೀತಿ ಇರಲೇಬೇಕು. ಸಿಂಪಲ್ಲಾಗಿ ಹೇಳಬೇಕೆಂದರೆ ಪ್ರೀತಿಯಿಲ್ಲದ‌ ಜೀವನ ‌ಚಂದ್ರ- ತಾರೆಗಳಿಲ್ಲದ‌ ಬಾನಿನಂತೆ ಅಲ್ಲವೇ‌….! ಇನ್ನೂ ಒಂದು‌ ಹೆಜ್ಜೆ ಮುಂದೆ ಹೋಗಿ ಹೇಳಬೇಕಾದರೆ ‌”ಪ್ರೀತಿ ನೀ‌ ಇಲ್ಲದೆ ನಾನು‌ ಹೇಗಿರಲಿ ” ಎಂಬಂತೆ ಪ್ರೀತಿಯಿಲ್ಲದೆ‌ ಜೀವನದ ಸಾರವೇ ಇಲ್ಲ.! ಸೋ…. ಪ್ರೀತಿಯೇ ಎಲ್ಲಾ… ಅದಿಲ್ಲದೇ ಜೀವನವಿಲ್ಲ, ಇದ್ದರೂ ಅದರಲ್ಲಿ ಸಾರವಿಲ್ಲ. ಹೀಗಾಗಿ ಪ್ರೀತಿ ನಮ್ಮೊಳಗಿನ ಒಂದು ಪವರ್ ಫ಼ುಲ್ ಟೂಲ್ ಇದ್ದಂತೆ .

Join WhatsApp Group

ನಿಮ್ಮಲ್ಲಿ‌ ಕೋಟ್ಯಾಂತರ ಹಣ ,ಆಸ್ತಿ ,ಒಡವೆ- ವಸ್ತು ಕಾರು, ಬಂಗಲೆ, ಆಳು- ಕಾಳು ಎಲ್ಲವೂ ಇರಬಹುದು .ಆದರೆ ಮನೆಯಲ್ಲಿ ನಿಮ್ಮನ್ನು ಹೃದಯದಿಂದ ಪ್ರೀತಿಸುವ ಮನಸೊಂದಿಲ್ಲದಿದ್ದರೆ ಅವೆಲ್ಲವೂ ಜಸ್ಟ್ ವೇಸ್ಟ್ ! ಸಂತಸದ ಕ್ಷಣಗಳಲ್ಲಿ ಪ್ರೀತಿಯಿಂದ ಸಂಭ್ರಮಿಸುವ ಮನಸು , ಕಷ್ಟದ ಸಮಯದಲ್ಲಿ ಅಷ್ಟೇ ಪ್ರೀತಿಯಿಂದ ಸಾಂತ್ವನ‌ ಹೇಳಿ ಸಂತೈಸುವ ಹೃದಯಗಳಿದ್ದಲ್ಲಿ ಮಿಕ್ಕೆಲ್ಲವೂ ಸೆಕೆಂಡರಿ ಕಣ್ರೀ….. ! ಸೋಲಲ್ಲೂ- ಗೆಲುವಲ್ಲೂ ನೋವಲ್ಲೂ- ನಲಿವಲ್ಲೂ, ಬಡತನದಲ್ಲೂ- ಸಿರಿತನದಲ್ಲೂ ಹಂಚಿಕೊಳ್ಳಲು ‌ಬೇಕಾದದ್ದು‌ ಪ್ರೀತಿ‌ಭರಿತ ಭಾವನೆಗಳೇ‌ ಹೊರತು ಕೋಟಿ ಕೋಟಿ ಬೆಲೆಯಿರುವ ನಿರ್ಭಾವುಕ ವಸ್ತುಗಳಲ್ಲ. ಹಾಗಾದರೆ ಇಷ್ಟೆಲ್ಲಾ ಮೌಲ್ಯವುಳ್ಳ ಈ ಪ್ರೀತಿಯನ್ನು‌ ಸಂಪಾದಿಸುವುದು ಅಷ್ಟು ಕಷ್ಟವೇ..?

ನೋ ವೇ……‌‌! ಖಂಡಿತಾ ಅದು ನಿಮ್ಮಲ್ಲೇ ಸುಪ್ತವಾಗಿದೆ. ಮೊಗೆದಷ್ಟೂ ಮುಗಿಯದ ನಿಧಿಯಂತೆ ! ನೀಡಿದಷ್ಟೂ ಉದ್ಭವಿಸುವ ಅಕ್ಷಯದಂತೆ ! ಹಂಚಿದಷ್ಟೂ ದ್ವಿಗುಣವಾಗುವ ವಿಸ್ಮಯದಂತೆ ! ಇಷ್ಟೆಲ್ಲಾ ಫ಼್ರೀಯಾಗಿ ಅದು ನಮ್ಮಲ್ಲೇ ಸುಪ್ತವಾಗಿದ್ದರೂ ಎಲ್ಲರೂ ಅದನ್ನು ಹಂಚಿಕೊಂಡು ಬಾಳಲು ಜಿಪುಣತನವೇಕೆ ? ಎಂಬ ಪ್ರಶ್ನೆ ಲಾಗಾಯ್ತಿನಿಂದಲೂ ಪ್ರಶ್ನೆಯಾಗಿಯೇ ಕಾಡುತ್ತಿದೆ..! ಕಾರಣ ಸಿಂಪಲ್….ನಾವು ಈ ಪ್ರಶ್ನೆಯನ್ನು ನಮಗೆ ನಾವೇ ಪ್ರಾಮಾಣಿಕವಾಗಿ ಕೇಳಿಕೊಂಡು ಅದಕ್ಕೆ ಬದ್ದತೆಯಿಂದ ಉತ್ತರಿಸಲು ಹೋಗಿಲ್ಲ ಅಷ್ಟೇ. ! ಪ್ರೀತಿಯ ಅನಂತತೆಯನ್ನು ಲವ್ ನ ಸಂಕುಚಿತತೆಯೊಂದಿಗೆ ಸಮೀಕರಿಸಿ ನೋಡುವ ಸಾಮಾನ್ಯ ವ್ಯಾಪ್ತಿಯಿಂದ ಕೊಂಚ ಆಚೆ ಬಂದಾಗಲಷ್ಟೇ ಪ್ರೀತಿಯ ಆಳ-ಅಗಲ-ಹರಿವು…. ಅರಿವಿಗೆ ಬಂದೀತು !

ಈ ಪ್ರೀತಿ ಅನ್ನೋದು ಜೀವವಿರುವ ಎಲ್ಲಾ ಸಂಬಂಧಗಳಲ್ಲೂ ಒಂದಲ್ಲಾ ಒಂದು ರೂಪದಲ್ಲಿ ಬೆಸೆದುಕೊಂಡಿರುತ್ತೆ. ಪ್ರೀತಿ ಸಾಮಾನ್ಯವಾಗಿ ಸಂತಸವನ್ನೇ ಹರಿಸಿದರೂ ಕೆಲವು ಸಂಧರ್ಭದಲ್ಲಿ
ಪ್ರೀತಿ ತಂದೊಡ್ಡುವ ನಿರಾಶೆಯನ್ನು ಅನುಭವಿಸಿದ ಕೆಲವರಲ್ಲಿ ಪ್ರೀತಿಯಲ್ಲಿನ ದೋಷವೂ, ಆಕ್ರೋಷವೂ ಕಂಡಿದ್ದಿರಬಹುದು. ಹೀಗಾಗಿಯೇ ಒಮ್ಮೊಮ್ಮೆ ಪ್ರೀತಿ ಕಡಿಮೆಯಾದರೂ ಕಷ್ಟ, ಹೆಚ್ಚಾದರೂ ಕಷ್ಟ.

ವಿಶೇಷವೆಂದರೆ ತಾಯಿ- ಮಕ್ಕಳ ಪ್ರೀತಿಯಲ್ಲಿ ಮಾತ್ರ ಕಳಂಕ, ಕೃತಕ, ಕಲ್ಮಷ, ಕೆಡುಕು, ಇರಲಾರದು . ಅದೊಂದು ಪದಗಳಿಗೆ‌ ನಿಲುಕಲಾರದ ದಿವ್ಯಾನುಬಂಧ , ಅಮೋಘ ‌ಅನುಭೂತಿ ಹಾಗೂ ನಿಸ್ವಾರ್ಥ ಪ್ರೀತಿಯ ಪರಾಕಾಷ್ಠೆ. ತಾಯಿ ಮಗುವಿನ‌ ಪ್ರೀತಿಗೆ ಜಗತ್ತಿನ‌ ಬೇರಾವುದೇ , ಬೇರೆ ಯಾರ ಪ್ರೀತಿಯ ತೂಕವೂ ಸರಿದೂಗಲಾರದು.ತಾಯಿ ಮಗುವಿನ ಪ್ರೀತಿಯ ಈ ಅನುಬಂಧ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಧಾರಾಳವಾಗಿ ಕಾಣಬಹುದು.

ವಿಷಾದವೆಂದರೆ ಅದೇ ಮಟ್ಟದ ಈ ಪ್ರೀತಿಯ ನಿರಂತರ ಭಾವ ಇನ್ನಿತರೆ ಸಂಬಂಧಗಳಲ್ಲಿ‌ ಸಲೀಸಾಗಿ ಕಾಣಸಿಗುವುದಿಲ್ಲ . ಗಂಡ- ಹೆಂಡತಿ, ಅಣ್ಣ ತಮ್ಮ, ಅಕ್ಕ ತಂಗಿ, ಅಜ್ಜ ಅಜ್ಜಿ, ಅತ್ತೆ- ಸೊಸೆ, ಮಾವ ಅಳಿಯ, ಗೆಳೆಯ ಗೆಳತಿ, ಸಂಬಂಧಿಕರು, ಬಂಧುಗಳು ಇತ್ಯಾದಿ ಈ ಎಲ್ಲಾ ಸಂಬಂಧಗಳಲ್ಲಿನ ಪ್ರೀತಿಗೆ ಆಗಾಗ್ಗೆ‌ ಬಿರುಕು, ಕಸ ಕಡ್ಡಿ ಧೂಳು ಸೇರುತ್ತಲೇ ಇರುತ್ತವೆ. ಬಹುಶಃ ‌ಮಾನವ ಸಂಬಂಧಗಳೇ ಹಾಗೆ ಅನ್ಸುತ್ತೆ‌. ಹಾಗಂತ ಅಂತಹಾ ಧೂಳನ್ನೊರೆಸಿ ಮುಂದಡಿಯಿಡುವ ಪ್ರಯತ್ನವೂ ನಮ್ಮಲ್ಲೇ ಇದೆಯಲ್ಲವೇ…? ಏನೇ ಅಡೆತಡೆ ಬಂದರೂ ಪರಸ್ಪರ ಪ್ರೀತಿಯ ಬಂಧ ಸ್ಟ್ರಾಂಗ್ ಆಗಿದ್ದಾಗ ಯಾವ ಸಂಬಂಧಗಳೂ ಅಷ್ಟು ಸುಲಭಕ್ಕೆ ಕಳಚಿ ಬೀಳೋಲ್ಲ, ಹಾಗೆಯೇ ಇಸ್ಫೀಟ್ ಎಲೆಗಳಂತೆ ಉದುರುವ ಸಂಬಂಧಗಳಿಗೆ ಪ್ರೀತಿಯ ಬೆಲೆ ಗೊತ್ತೇ ಇರೋಲ್ಲ.

ಪ್ರೀತಿ ಹೃದಯದಿಂದ‌ ಹೊಮ್ಮಿದಾಗಲಷ್ಟೇ ಅದಕ್ಕೆ ಮಿಲಿಯನ್ ಗಟ್ಟಲೆ ಮೌಲ್ಯವಿರಲು ಸಾಧ್ಯ. ಮನದೊಳಗೆ ಹುಸಿಪ್ರೀತಿ ತುಂಬಿಕೊಂಡು ಕೇವಲ‌ ಬಾಯಿ ಮಾತಿಗೆ ಅಥವಾ ತೋರಿಕೆಗೆ ಪ್ರೀತಿ ವ್ಯಕ್ತಪಡಿಸಿದಲ್ಲಿ ಅದು ಪ್ರೀತಿಯಾಗಲಾರದು, ಬದಲಿಗೆ ಅದು ಸ್ವಾರ್ಥ ಸಾಧನೆಯ ತೋರಿಕೆಯ ಪ್ರೀತಿ. ಹೀಗಾಗಿಯೇ ನಿಜವಾದ ಪ್ರೀತಿಯೆನ್ನುವುದು ಅನಂತದಷ್ಟು‌ ಆಳವಾದರೆ, ನಕಲಿ ಪ್ರೀತಿಯಿದೆಯಲ್ಲಾ, ಅದು ಕಾಲದಷ್ಟೇ ಕ್ಷಣಿಕ. !

ನೈಜ ಪ್ರೀತಿ ಹೊರಬರುವುದು ಪರಸ್ಪರ ಮನಸುಗಳು ಪರಿಶುದ್ಧವಾಗಿದ್ದಾಗ ಮಾತ್ರವೇ. ! ಮನಸುಗಳು ಬಗ್ಗಡವಿರದ ತಿಳಿನೀರಿನಂತೆ‌ ಪಾರದರ್ಶಕವಾಗಿದ್ದಾಗ ಮಾತ್ರ ಮೌಲ್ಯಯುತವಾದ ಪ್ರೀತಿ ತಾನೇತಾನಾಗಿ‌ ಉಕ್ಕುತ್ತದೆ. ಇಷ್ಟೆಲ್ಲಾ ಪ್ರೀತಿಗೆ ಮಹತ್ವವಿದ್ದರೂ, ಅದೊಂದು ಬಹುಮೌಲ್ಯಯುತವಾದ ಭಾವನೆ ಎಂದು‌ ತಿಳಿದಿದ್ದರೂ ಅದನ್ನು ಪರಸ್ಪರ ಹಂಚಿಕೊಳ್ಳಲು ಏಕೆ ಚೌಕಾಸಿ ಮಾಡುತ್ತೇವೆ‌? ಬಹುತೇಕ ಸಂಬಂಧಗಳಲ್ಲಿ ಬಾಲ್ಯದಲ್ಲಿರುವ ಪ್ರೀತಿಯ ಅಗಾಧತೆ ದೊಡ್ಡವರಾದಂತೆ ಕಳೆಗುಂದಲು ಕಾರಣವೇನು ?

ಎಂಬ ಸಂಕೀರ್ಣ ಪ್ರಶ್ನೆಗೆ…..

” ಮನುಷ್ಯನಿಗೆ ನೆಮ್ಮದಿ ಸುಖ ದಕ್ಕುವುದು ಭೌತಿಕ ವಸ್ತುಗಳ ಮೇಲಾಟ ಬಯಲಾಟಗಳ ಹಾರಾಟಗಳಿಂದಲ್ಲ! ಬದಲಿಗೆ ಜೈವೀಕ ಸಂಬಂಧಗಳ ಮಧುರ ಭಾವನೆಗಳ ಹುಡುಕಾಟದಿಂದ ಅಥವಾ ಪ್ರೀತಿಯೆಂಬ‌ ಜೋಕಾಲಿಯಲ್ಲಿ ಮನದುಂಬಿ ಜೀಕುವುದರಿಂದ..”.

ಎಂಬ ಈ ಸಾಲುಗಳ ಸಾರ ಸರಿಯಾಗಿ ಅರ್ಥಮಾಡಿಕೊಳ್ಳದಿರುವುದೇ ಅದಕ್ಕೆ ಉತ್ತರವಿದ್ದೀತೇ….?

ಸಿಂಪಲ್ಲಾಗಿ ಹೇಳೋದಾದರೆ ತನ್ನದಲ್ಲದ ವಸ್ತುಗಳಿಗೆ ಬಾಯಿ ಬಿಡುವ ಮನುಷ್ಯ , ತನ್ನಲ್ಲಿಯೇ ಅಗಾಧವಾಗಿರುವ ಪ್ರೀತಿಯನ್ನು ಪಡೆಯಲು- ಕೊಡಲು ತಿಣುಕಾಡುತ್ತಾನೇಕೆ ಎಂಬ ಸರಳ ಆತ್ಮವಿಮರ್ಶೆ ಈ ಹೊತ್ತಿನ ಆದ್ಯತೆಯಾಗಬೇಕಿದೆ. ನಮಗೆ ಕಾರು, ಬಂಗಲೆ, ಹಣ, ಒಡವೆ, ಐಶ್ವರ್ಯ ಅಧಿಕಾರ ,ಪದವಿ, ಸಾಧನೆಗಳಷ್ಟೆ ಮುಖ್ಯವಾಗಿ ಅಥವಾ ಅದಕ್ಕಿಂತಲೂ ಮಿಗಿಲಾಗಿ ನಮ್ಮನ್ನು‌ ಮನಸಾರೆ ಪ್ರೀತಿಸುವ ನಿಷ್ಕಲ್ಮಶ ಮನಸುಗಳು,‌ ನಿರ್ಮಲಂತಃಕರಣದಿಂದ ಆರಾಧಿಸುವ ‌ಹೃದಯಗಳ ಕೊರತೆ ದಿನೇ ದಿನೇ ಹೆಚ್ಚುತ್ತಲೇ ಇವೆ. ಹಾಗೆಯೇ ನಾವೂ ಸಹಾ ಇತರರನ್ನು ಪ್ರೀತಿಯಿಂದಲೇ ನೋಡುವ ಹೃದಯ ವೈಶಾಲ್ಯತೆಗೂ ಸ್ವಪ್ರತಿಷ್ಠೆಯ, ಸ್ವಾರ್ಥದ, ಅಸೂಯೆಯ, ಅಧಿಕಾರ ಅಂತಸ್ತಿನ ವಿನಾಶದ ಗರ ಬಡಿಯುತ್ತಲೇ ಇರುತ್ತದೆ…. !

ಅಲ್ಲಿಗೆ ಮನುಷ್ಯನೊಳಗಿನ ಬಹುತೇಕ ಎಲ್ಲಾ ರೀತಿಯ ಅಶಾಂತಿ, ಅಸಮಾಧಾನ, ಅವಿವೇಕದ ಉಗಮಕ್ಕೆ ಪ್ರೀತಿಯ ಕೊರತೆಯೂ ಬಹು ಮುಖ್ಯ ಕಾರಣ ಎಂಬುದು ಅರಿವಿಗೆ ಬಂದಲ್ಲಿ ಮಾತ್ರ ಪ್ರೀತಿಯ ಬೆಲೆ ಅರ್ಥವಾದೀತು … !

ನಮ್ಮಲ್ಲೇ ಅಗಾಧವಾಗಿ ಸಿಕ್ಕು, ಬದುಕಿನುದ್ದಕ್ಕೂ ಹಂಚಿದರೂ ಖಾಲಿಯಾಗದ ಪ್ರೀತಿ ಹಂಚಲು ಜಿಪುಣತನವೇಕೆ…?

ಅಂದಹಾಗೆ ಪ್ರೀತಿ ಅಂದಾಕ್ಷಣ ಅದರರ್ಥ ಕೇವಲ‌ ಹರೆಯದ ಹುಡುಗ ಹುಡುಗಿಯರ ನಡುವಿನ‌ ಲವ್ ಎಂದಷ್ಟೇ ಸಂಕುಚಿತಗೊಂಡಿರುವ ಇಂದಿನ‌ ಜ಼ಮಾನಾದಲ್ಲಿ ಪ್ರೀತಿಯನ್ನು ಪಾವಿತ್ರ್ಯತೆ ಅನುಬಂಧ ಬೆಸುಗೆಗಳ ವಿಶಾಲಾರ್ಥದಲ್ಲಿ ‌ನೋಡುವ ನೋಟ‌, ಹುಡುಕಾಟ ಕೂಡಾ ಕಡಿಮೆಯೇ . ಪ್ರೀತಿ ಕೇವಲ ಹರೆಯದ ಮನಸುಗಳ‌ ನಡುವಿನ ಭಾವನೆ ಮಾತ್ರವಲ್ಲ. ಅದು ಪ್ರತಿಯೊಂದು ಜೀವಿಗಳ ನಡುವಿನ ಪವಿತ್ರ ಬಂಧ.

ಪ್ರೀತಿಗೂ ಪ್ರೇಮಕ್ಕೂ ಸೂಕ್ಷ್ಮವಾದ ವ್ಯತ್ಯಾಸವಿದೆ. ಪ್ರೀತಿ ಅನ್ನೋದು ಯೂನಿವರ್ಸಲ್ ಇದ್ದಂತೆ. ಆದರೆ ಪ್ರೇಮಕ್ಕೆ ಇದೇ ಭಾಷ್ಯ ಬರೆಯಲಾಗಲ್ಲ. ಅದೇನಿದ್ದರೂ ಕೆಲವು ಸಂಬಂಧಗಳಿಗೆ ಮಾತ್ರ ಸೀಮಿತ. ಪ್ರೇಮವಿಲ್ಲದ ಪ್ರೀತಿಯನ್ನು‌ ನೋಡಬಹುದು ಆದರೆ ಪ್ರೀತಿಯಿಲ್ಲದ ಪ್ರೇಮ …..ಅಸಲು ಅದು ಪ್ರೇಮವೇ ಅಲ್ಲ. !

ಪ್ರೀತಿಯೆಂಬುದು ನಮ್ಮ ನಿಮ್ಮೆಲ್ಲರ ನಡುವೆ ಸಾಕಷ್ಟು ಕೊಟ್ಟು ತೆಗೆದುಕೊಳ್ಳುವಷ್ಟು ಇದೆ. ನೀವು ಎಷ್ಟು ಪಡೆದು ಎಷ್ಟು ಕೊಡುತ್ತೀರಿ ಅನ್ನೋದು ನಿಮಗೇ ಬಿಟ್ಟದ್ದು. ಸಾಮಾನ್ಯವಾಗಿ ನನ್ನ ಎಲ್ಲಾ ಬರಹಗಳ ಕೊನೆಯಲ್ಲಿ ” ಪ್ರೀತಿಯಿಂದ ” ಎನ್ನುವ ಟ್ಯಾಗ್ ಲೈನ್ ನನಗೆ ಗೊತ್ತಿಲ್ಲದಂತೆಯೇ ಹಾಕುವ ಮೂಲಕ ಪ್ರೀತಿಯೆಂಬ ಭಾವ ತಾನೇ ತಾನಾಗಿ ಸ್ಫುರಿಸಲಿ ಎಂಬ ಆಶಯವೂ ಇದ್ದಿರಬಹುದೇನೋ… !

ಪ್ರೀತಿ ಪ್ರೇಮ ಮುಂತಾದ ಭಾವನೆಗಳು ನಮ್ಮ ಉಸಿರಿನೊಂದಿಗೇ ಬೆರೆತಿರುವ ಅವಿಚ್ಛಿನ್ನ ಭಾವಗಳು. ಅವು ಅನು‌ಕ್ಷಣವೂ ನಮ್ಮೊಂದಿಗೇ ಬೆಸೆದಿರುತ್ತವೆ. ಅದಕ್ಕೇ ಅಂತ ವಿಶೇಷ ಸಮಯ-ದಿನ ಅಂತೇನಿಲ್ಲ. ಪ್ರೀತಿ ಪ್ರೇಮಕ್ಕೇ ಅಂತಾನೇ ಯಾರಾದ್ರೂ ವ್ಯಾಲೆಂಟೈನ್ ಡೆ ಆಚರಿಸಿಕೊಂಡ್ರೆ ಅದು‌ ಅವರವರ ಖುಷಿ‌! ಅದಕ್ಕಾಗಿ ಬೇರಾರೂ ವೈಲೆಂಟ್ ಆಗೋ ಅವಶ್ಯಕತೆಯೂ ಇಲ್ಲ.!

ನೆನಪಿಡಿ….! ಪ್ರೀತಿಯನ್ನು ಹೆಚ್ಚು ಹೆಚ್ಚು ಹಂಚಿದಷ್ಟೂ ಬದುಕಿನ ಅಷ್ಟೂ ಆನಂದದ ಮೌಲ್ಯ ಹೆಚ್ಚೆಚ್ಚು ನಿಮ್ಮಲ್ಲಿ ಡೆಪಾಸಿಟ್ ಆಗುತ್ತಲೇ ಹೋಗುತ್ತದೆ..! ನಿಮ್ಮೆಲ್ಲರ ಪ್ರೇಮಹಣತೆಯಲ್ಲಿ ಪ್ರೀತಿಯ ಜ್ಯೋತಿ ಸದಾ ಬೆಳಗುತಿರಲಿ.

ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸುವ ಪ್ರೀತಿಪಾತ್ರ ಹೃದಯಗಳಿಗೆಲ್ಲಾ ಪ್ರೀತಿಯಿಂದ ಪ್ರೀತಿಯ ಶುಭಾಶಯಗಳು.

ಹಿರಿಯೂರು ಪ್ರಕಾಶ್.

  • ಹರಕೆ ತೀರಿಸಲು ಹೋದ ವಿದ್ಯಾರ್ಥಿಗಳು ಜಲಸಮಾಧಿ
    by Team Varthaman
  • ನೇರವಾಗಿ ಮಾತನಾಡೋರು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವೇ….?
    by Team Varthaman
  • ಬ್ರಾಂಡೆಡ್ ಔಷಧಿಗಳಿಗೆ 100% ಸುಂಕ
    by Team Varthaman
  • 12 ವರ್ಷಗಳ ಬಳಿಕ ಡಾಲರ್ ಎದುರು ರೂಪಾಯಿ ಭಾರೀ ಏರಿಕೆ
    by Team Varthaman
  • ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಐಪ್ಯಾಕ್ ಕಚೇರಿಗಳ ಮೇಲೆ ಇಡಿ ದಾಳಿ
    by Team Varthaman
ಅಹಂ ಅಳಿಸಿ ಬನ್ನಿ ಎನ್ನುವ ದೈವ ಸ್ಥಾನ
ಅದಮ್ಯ ಸ್ಫೂರ್ತಿ ಮತ್ತು ತಂತ್ರಜ್ಞಾನ ನಿಪುಣೆ ಜಿ. ಮಾಧವಿ ಲತಾ
ಪತಂಜಲಿ: ವ್ಯಾಕರಣ ಮತ್ತು ಯೋಗದ ಯುಗಪುರುಷ
ಪೆಟ್ಟು‌ ಬಿದ್ದ ಜಾಗಕ್ಕೇ ಮತ್ತೆಮತ್ತೆ ಪೆಟ್ಟು ಬೀಳೋ ಬದುಕಿನ ವಿಸ್ಮಯ!
ಭಾಗ್ಯದ ಲಕ್ಷ್ಮೀ ಬಾರಮ್ಮಾ(ಬ್ಯಾಂಕರ್ಸ್ ಡೈರಿ)
TAGGED:affectionLovepure loveValentines day
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaLatest NewsTrending

KPSC KAS ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟ

Team Varthaman
Team Varthaman
April 18, 2025
ಆರೋಗ್ಯಕ್ಕೆ ಅಭ್ಯಂಜನ
ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳ ಅನುಮಾನಾಸ್ಪದ ಸಾವು
ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ : 9 ಮಂದಿ ಬಲಿ
ಯುವತಿಗೆ ಕಿರುಕುಳ, ಆಸಿಡ್ ಬೆದರಿಕೆ: FIR ದಾಖಲು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?