ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಆರ್ ಪೇಟೆ ತಾಲೂಕಿನ ಅಂಚೆಬೀರನಹಳ್ಳಿ ಬಳಿ ಬೈಕ್‌ಗೆ KSRTC ಬಸ್ ಡಿಕ್ಕಿಯಾಗಿದ್ದು, ಬೈಕ್ ಸವಾರರಾದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಉಮೇಶ್ (24) ಹಾಗೂ ದಿನೇಶ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಬಸ್ ಚಾಲಕನ ಅಜಾಗರೂಕತೆಯಿಂದಲೇ ಈ ದುರಂತ ಸಂಭವಿಸಿದ್ದು, ಪ್ರಕರಣವನ್ನು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.ಇದನ್ನು ಓದಿ –RTO ಕಚೇರಿ ಮೇಲೆ ಉಪಲೋಕಾಯುಕ್ತ ದಾಳಿ
ಅಪಘಾತದಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕ ಮತ್ತು ವಾಹನ ಸಂಚಾರ ಅಸ್ತವ್ಯಸ್ತತೆ ಉಂಟಾಯಿತು.