ಮಂಡ್ಯ: ಜಿಲ್ಲೆಯ ವೈದ್ಯಕೀಯ ಕಾಲೇಜಿನ ಓದುತ್ತಿದ್ದ ವಿದ್ಯಾರ್ಥಿಯೊಬ್ಬ , ಹಾಸ್ಟೆಲ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳ ಮೂಲದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಭರತ್, ಓದಿನ ಮೇಲೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಮೊದಲ ವರ್ಷದ ಪರೀಕ್ಷೆಗಳಿಗೆ ಗೈರಾಗಿದ್ದನು.
ಭಾನುವಾರ ರಾತ್ರಿ 12 ಗಂಟೆವರೆಗೆ ಹಾಸ್ಟೆಲ್‌ನ ಸಹವಾಸಿಗಳೊಂದಿಗೆ ಮಾತನಾಡಿದ ಬಳಿಕ ತನ್ನ ಕೊಠಡಿಗೆ ಹಿಂತಿರುಗಿದ ಭರತ್, ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈದಿನ ಬೆಳಗ್ಗೆ ಸಹಪಾಠಿಗಳು ಅವನ ಕೊಠಡಿಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.ಇದನ್ನು ಓದಿ – ಸ್ಲೀಪರ್ ಬಸ್ ಹಳ್ಳಕ್ಕೆ ಉರುಳಿ ಭೀಕರ ಅಪಘಾತ – ಓರ್ವ ಸಾವು, 18 ಮಂದಿ ಗಾಯ
ಮಂಡ್ಯ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ.