ಮಂಡ್ಯ : ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ- ಮಗಳು ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ನೆಹರು ನಗರದ ಮನೆಯೊಂದರಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಮೂಲತಃ ಬೆಂಗಳೂರಿನ ರಶ್ಮಿ (28 ) ಹಾಗೂ ಆಕೆ ಮಗಳು ದಿಶಾ (9) ಆತ್ಮಹತ್ಯೆಗೆ ಶರಣಾದವರು.
ಗಂಡನಿಂದ ದೂರವಿದ್ದ ರಶ್ಮಿ ಮಂಡ್ಯದ ಜೈನ್ ಆಪ್ಟಿಕಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಈಕೆ ಒಂಟಿತನದಿಂದ ಜಿಗುಪ್ಸೆಗೊಂಡು ತನ್ನ ಮಗಳೊಂದಿಗೆ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಇದನ್ನು ಓದಿ –5 ವರ್ಷ ನಾನೇ ಸಿಎಂ; ನಮ್ಮ ಸರ್ಕಾರ ಬಂಡೆ ತರ ಇರುತ್ತದೆ: ಸಿದ್ದರಾಮಯ್ಯ
ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.