ಮೈಸೂರು: ಪ್ರೀತಿ ನಿರಾಕರಿಸಿದ್ದಕ್ಕೆ ಕ್ರೂರತೆಯ ಹಾದಿ ಹಿಡಿದ ಯುವಕನೊಬ್ಬ, ಯುವತಿಯ ಮೇಲೆ ಚಾಕು ದಾಳಿ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಗಾಯಗೊಂಡ ಯುವತಿಯು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಮೃತ ಯುವತಿಯ ಹೆಸರು ಪೂರ್ಣಿಮಾ, ಪಾಂಡವಪುರ ತಾಲ್ಲೂಕಿನ ಎಲೆಗೆರೆ ಗ್ರಾಮದ ನಿವಾಸಿ. ಯುವಕನ ಹೆಸರು ಅಭಿಷೇಕ್. ಪೂರ್ಣಿಮಾಳನ್ನು ಪ್ರೀತಿಸುತ್ತಿದ್ದ ಅಭಿಷೇಕ್, ಆಕೆ ತನ್ನ ಪ್ರೀತಿಗೆ ಒಪ್ಪಿಲ್ಲ ಎನ್ನುವ ಕಾರಣಕ್ಕೆ ನಿನ್ನೆ ಸಂಜೆ ಆಕೆಯ ಮೇಲೆ ಚಾಕು ದಾಳಿ ನಡೆಸಿದ್ದ.
ಗಂಭೀರವಾಗಿ ಗಾಯಗೊಂಡ ಪೂರ್ಣಿಮಾಳನ್ನು ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ತಕ್ಷಣ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಪೂರ್ಣಿಮಾ ಕೊನೆಯುಸಿರೆಳೆಡಿದ್ದಾಳೆ.ಇದನ್ನು ಓದಿ –ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅರೆಸ್ಟ್
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೈಸೂರಿನ ಲಕ್ಷ್ಮೀಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.