ಬೆಂಗಳೂರು: ನಮ್ಮ METRO ಕಾಮಗಾರಿ ವೇಳೆ ಸಿಬ್ಬಂದಿಯ ಅಜಾಗರೂಕತೆಯಿಂದ ಭೀಕರ ಅವಘಡ ಸಂಭವಿಸಿದ್ದು, ಹೆಗ್ಗಡೆನಗರ ನಿವಾಸಿ ಆಟೋ ಚಾಲಕ ಖಾಸೀಂ ಅವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಯಲಹಂಕದ ಕೋಗಿಲು ಕ್ರಾಸ್ ಬಳಿ ನಿನ್ನೆ ರಾತ್ರಿ ನಡೆದಿದೆ.
ರಾತ್ರಿ 12.30ರ ಸುಮಾರಿಗೆ , ಮೆಟ್ರೋ ಪಿಲ್ಲರ್‌ಗಾಗಿ ಬಳಸುವ ತಾತ್ಕಾಲಿಕ ತಡೆಗೋಡೆಯಾದ ವಯಾಡೆಕ್ಟ್ ಅನ್ನು ಲಾರಿಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಲಾರಿ ಟರ್ನ್ ತೆಗೆದುಕೊಳ್ಳುತ್ತಿರುವಾಗ, ಲಾರಿ ಚಾಲಕ ನಿರ್ವಹಣೆಯಲ್ಲಿ ಎಡವಿದ್ದು, ವಯಾಡೆಕ್ಟ್ ಚಾರ್ಜಿಗೆ ತಾಕಿ ಏಕಾಏಕಿ ಬಿದ್ದಿದೆ.
ದುರ್ಘಟನೆ ಸಂಭವಿಸುವ ಸಂದರ್ಭದಲ್ಲೇ ಲಾರಿ ಪಕ್ಕದಲ್ಲಿ ಆಟೋ ನಿಂತಿತ್ತು. ಆಟೋದಲ್ಲಿದ್ದ ಪ್ರಯಾಣಿಕರು ಲಾರಿ ಸಹಜವಲ್ಲದ ಚಲನವಲನ ಕಂಡು ಕೂಡಲೇ ಆಟೋದಿಂದ ಇಳಿದಿದ್ದಾರೆ.
ಆದರೆ ಆಟೋ ಚಾಲಕ ಖಾಸೀಂ ಇಳಿಯುವ ಮೊದಲು ವಯಾಡೆಕ್ಟ್ ಅವರ ಆಟೋಮೇಲೆ ಬಿದ್ದುದು, ಇದರಿಂದ ಆಟೋ ಸಂಪೂರ್ಣ ನುಜ್ಜುಗುಜ್ಜಾಗಿ ಚಾಲಕ ಸ್ಥಳದಲ್ಲೇ ಮೃತರಾದ್ದಾರೆ.ಇದನ್ನು ಓದಿ –ರೈಲ್ವೆ ಬೋಗಿಗಳಲ್ಲೇ ATM ಸೇವೆ: ಶೀಘ್ರದಲ್ಲಿ ಆರಂಭಗೊಳ್ಳುವ ಹೊಸ ಸೌಲಭ್ಯ
ಈ ಭೀಕರ ಅವಘಡಕ್ಕೆ ಮೆಟ್ರೋ ಕಾಮಗಾರಿಯ ನಿರ್ಲಕ್ಷ್ಯ ಕಾರಣ ಎನ್ನಲಾಗುತ್ತಿದ್ದು, ಘಟನೆಯಲ್ಲಿ ಪ್ರಾಜೆಕ್ಟ್ ನಿರ್ವಹಣಾ ಪ್ರಮಾಣಿಕೆಗಳ ಲಂಘನೆ ವಿಚಾರವಾಗಿ ಸೂಕ್ತ ತನಿಖೆಗೆ ಆಗ್ರಹ ವ್ಯಕ್ತವಾಗಿದೆ.