ನವದೆಹಲಿ: 2026–27ನೇ ಆರ್ಥಿಕ ವರ್ಷ ಇಂದು (ಏಪ್ರಿಲ್ 1)ದಿಂದ ಆರಂಭವಾಗಿದ್ದು, ಹಣಕಾಸು ಸಂಬಂಧಿತ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬಂದಿವೆ. ಜನರ ದಿನನಿತ್ಯದ ಜೀವನಕ್ಕೂ ಪರಿಣಾಮ ಬೀರುವ ಈ ಬದಲಾವಣೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಫಾಸ್ಟ್ಯಾಗ್ ಶುಲ್ಕ ಏರಿಕೆ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಾರ್ಷಿಕ ಫಾಸ್ಟ್ಯಾಗ್ ಪಾಸ್ ಶುಲ್ಕ ₹3,000ರಿಂದ ₹3,075ಕ್ಕೆ ಹೆಚ್ಚಿಸಲಾಗಿದೆ. ಹೊಸ ದರವು ಇಡೀ 2026–27 ಆರ್ಥಿಕ ವರ್ಷದಲ್ಲಿ ಜಾರಿಯಲ್ಲಿರುತ್ತದೆ.
ಹೊಸ ಆದಾಯ ತೆರಿಗೆ ಕಾಯ್ದೆ:
1961ರ ಆದಾಯ ತೆರಿಗೆ ಕಾಯ್ದೆಯ ಬದಲು ಹೊಸ ಕಾಯ್ದೆ ಜಾರಿಗೆ ಬಂದಿದೆ. ‘ಹಣಕಾಸು ವರ್ಷ’ ಮತ್ತು ‘ಮೌಲ್ಯಮಾಪನ ವರ್ಷ’ ಎಂಬ ಪದಗಳನ್ನು ‘ತೆರಿಗೆ ವರ್ಷ’ ಎಂದು ಪರಿವರ್ತಿಸಲಾಗಿದೆ. ಕಾಯ್ದೆಯ ಭಾಷೆಯನ್ನು ಸರಳಗೊಳಿಸಲಾಗಿದೆ.
ಎಸ್ಟಿಟಿ ಹೆಚ್ಚಳ:
ಫ್ಯೂಚರ್ಸ್ ವಹಿವಾಟಿನ ಎಸ್ಟಿಟಿ 0.02%ರಿಂದ 0.05%ಕ್ಕೆ ಹಾಗೂ ಆಪ್ಷನ್ಸ್ ವಹಿವಾಟಿನ ಎಸ್ಟಿಟಿ 0.1%ರಿಂದ 0.15%ಕ್ಕೆ ಹೆಚ್ಚಿಸಲಾಗಿದೆ.
ವಾಹನ ಬೆಲೆ ಏರಿಕೆ:
ಮರ್ಸಿಡಿಸ್ ಬೆಂಜ್, ಟಾಟಾ ಮೋಟರ್ಸ್, ಜೆಎಸ್ಡಬ್ಲ್ಯು ಎಂ.ಜಿ ಮೋಟರ್ ಸೇರಿದಂತೆ ಹಲವು ಕಂಪನಿಗಳು ವಾಹನಗಳ ಬೆಲೆ ಏರಿಕೆ ಮಾಡಿವೆ. ತಯಾರಿಕಾ ವೆಚ್ಚ ಹಾಗೂ ಕರೆನ್ಸಿ ಏರಿಳಿತ ಇದಕ್ಕೆ ಕಾರಣವಾಗಿದೆ.
ಎಂಎಸ್ಇಗಳಿಗೆ ಸಾಲ ಸೌಲಭ್ಯ:
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಬ್ಯಾಂಕ್ಗಳು ₹25 ಲಕ್ಷದವರೆಗೆ ಅಡಮಾನ ರಹಿತ ಸಾಲ ನೀಡಲು ಅವಕಾಶ ನೀಡಲಾಗಿದೆ.ಇದನ್ನು ಓದಿ –ಇಂದು ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ
ಮೋಟಾರು ಅಪಘಾತ ಕ್ಲೇಮ್ ತೆರಿಗೆ ವಿನಾಯಿತಿ:
ಮೋಟಾರು ಅಪಘಾತ ಪ್ರಕರಣಗಳಲ್ಲಿ ಕ್ಲೇಮ್ ಮೂಲಕ ದೊರೆಯುವ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.








