– ಪೋಷಕರ ಸಂದರ್ಶನ, ಇಚ್ಛೆಯ ಫೀಸ್‌ಗೆ ಬ್ರೇಕ್
ಬೆಂಗಳೂರು: ಖಾಸಗಿ ಶಾಲೆಗಳ ವಿದ್ಯಾರ್ಥಿ ದಾಖಲಾತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇದರಿಂದಾಗಿ ಹಿಂದಿನ ಕೆಲವೊಂದು ವಿವಾದಾಸ್ಪದ ನಿಯಮಗಳಿಗೆ ಕಡಿವಾಣ ಬೀಳಲಿದೆ.
ಇದುವರೆಗೆ ಮಕ್ಕಳನ್ನು ಶಾಲೆಯಲ್ಲಿ ಸೇರಿಸಲು ಪೋಷಕರಿಂದ ಪರೀಕ್ಷೆ ತೆಗೆದುಕೊಳ್ಳುವುದು, ಸಂದರ್ಶನ ಮಾಡುವುದು, ಹಾಗೂ ತಮ್ಮ ಇಚ್ಛೆಗೂ ಮೀರಿ ಶಾಲಾ ಶುಲ್ಕ ವಿಧಿಸುವಂತಹ ಅಕ್ರಮ ಕ್ರಮಗಳು ನಡೆಯುತ್ತಿದ್ದುದು ಸರಕಾರದ ಗಮನಕ್ಕೆ ಬಂದಿತ್ತು. ಇನ್ನು ಮುಂದೆ ಈ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ.
Contents
ಶಿಕ್ಷಣ ಇಲಾಖೆ ಹೊರಡಿಸಿದ ಪ್ರಮುಖ ನಿಯಮಗಳು:
- ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನಾಗಲಿ, ಪೋಷಕರನ್ನಾಗಲಿ ಪರೀಕ್ಷಿಸಲು ಅವಕಾಶವಿಲ್ಲ.
- ಪೋಷಕರಿಗೆ ಅಥವಾ ಮಕ್ಕಳಿಗೆ ಸಂದರ್ಶನ ನಡೆಸುವುದೂ ಅನುಮತಿಯಿಲ್ಲ.
- ಪ್ರತಿಯೊಂದು ಖಾಸಗಿ ಶಾಲೆಯೂ ತಮ್ಮ ಶಾಲಾ ಶುಲ್ಕವನ್ನು ನೋಟಿಸ್ ಬೋರ್ಡ್, ಶಾಲಾ ವೆಬ್‌ಸೈಟ್ ಮತ್ತು ಎಸ್‌ಎಟಿಎಸ್ (SATS) ಪೋರ್ಟಲ್‌ನಲ್ಲಿ ಬಹಿರಂಗವಾಗಿ ಪ್ರಕಟಿಸಬೇಕಾಗುತ್ತದೆ.
- ಶುಲ್ಕದ ಸಂಪೂರ್ಣ ವಿವರಗಳನ್ನು ಶಾಲೆಯ ಮಾಹಿತಿ ಪುಸ್ತಕದಲ್ಲಿ ಕೂಡ ಮುದ್ರಿಸಬೇಕು.
- ಶಾಲಾ ಆಡಳಿತ ಮಂಡಳಿ ಪ್ರಕಟಿಸಿರುವ ಶುಲ್ಕವಲ್ಲದೆ ಇತರ ಯಾವುದೇ ರೂಪದ ಹಣ ಪೋಷಕರಿಂದ ಅಥವಾ ವಿದ್ಯಾರ್ಥಿಗಳಿಂದ ಪಡೆಯಲಾಗುವುದಿಲ್ಲ.
- ಎಲ್ಲಾ ಖಾಸಗಿ ಶಾಲೆಗಳು ಕಡ್ಡಾಯವಾಗಿ 25% ಸ್ಥಾನಗಳನ್ನು ನಿಗದಿತ ಆರ್‌ಟಿಇ (RTE) ಪಾಲನೆಯಡಿಯಲ್ಲಿ ಮೀಸಲಿಡಬೇಕು.
- ಎಸ್‌ಸಿ/ಎಸ್‌ಟಿ ಸಮುದಾಯದವರಿಂದ ನಿರ್ವಹಿಸಲ್ಪಡುವ ಶಾಲೆಗಳಲ್ಲಿ 50% ಸ್ಥಾನಗಳು ಅವರ ಸಮುದಾಯದ ಮಕ್ಕಳಿಗೇ ಮೀಸಲಾಗಿರಬೇಕು.
- ಸಹಶಿಕ್ಷಣ (co-education) ಹೊಂದಿರುವ ಶಾಲೆಗಳಲ್ಲಿ ಒಟ್ಟು ವಿದ್ಯಾರ್ಥಿಗಳಲ್ಲಿ ಕನಿಷ್ಠ 50% ಸ್ಥಾನಗಳು ಹೆಣ್ಣುಮಕ್ಕಳಿಗಾಗಿರಬೇಕು.
ಇಲ್ಲದೆ, ಈ ಹೊಸ ನಿಯಮಗಳನ್ನು ಪಾಲಿಸದ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.ಇದನ್ನು ಓದಿ –ತುಂಗಭದ್ರಾ ಡ್ಯಾಂ ಬಳಿ ಗುಡ್ಡದಲ್ಲಿ ಭಾರೀ ಅಗ್ನಿಕಾಂಡ
ಈ ನಿರ್ಧಾರದಿಂದ ಪೋಷಕರು ಹೆಚ್ಚಿನ ಖರ್ಚು ಮತ್ತು ಒತ್ತಡದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.