- ಏಪ್ರಿಲ್‌ನಿಂದ ಜಾರಿಗೆ ಬರುವ ಆರ್‌ಬಿಐ ಕ್ರಮ
ಮುಂಬೈ: ಡಿಜಿಟಲ್ ಪಾವತಿಯಲ್ಲಿ ಸುರಕ್ಷತೆ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಒಟಿಪಿ (OTP) ಪಡೆಯುವ ವಿಧಾನಕ್ಕೆ ಹೊಸ ಪರ್ಯಾಯ ನಿಯಮಗಳನ್ನು ಪರಿಚಯಿಸಲು ಮುಂದಾಗಿದೆ. ಈ ನಿಯಮಗಳು ಬರುವ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.
ಪ್ರಸ್ತುತ ಡಿಜಿಟಲ್ ಪಾವತಿಗೆ ಒಟಿಪಿ ಸಾಮಾನ್ಯವಾಗಿ ಎಸ್‌ಎಂಎಸ್ ಮೂಲಕ ಮಾತ್ರ ಬರುತ್ತದೆ. ಆದರೆ ಹೊಸ ನಿಯಮ ಜಾರಿಗೆ ಬಂದ ಬಳಿಕ ಒಟಿಪಿ ಹಾಗೂ ದೃಢೀಕರಣಕ್ಕಾಗಿ ಹಲವು ಪರ್ಯಾಯ ಮಾರ್ಗಗಳನ್ನು ಬಳಸಲು ಅವಕಾಶ ಸಿಗಲಿದೆ.
ದ್ವಿಪಕ್ಷೀಯ ದೃಢೀಕರಣಕ್ಕಾಗಿ ಪಾಸ್ವರ್ಡ್, ಪಾಸ್‌ಫ್ರೇಸ್, ಪಿನ್, ಕಾರ್ಡ್ ಆಧಾರಿತ ಹಾರ್ಡ್ವೇರ್ ಸಾಧನ, ಸಾಫ್ಟ್‌ವೇರ್ ಟೋಕನ್, ಬೆರಳಚ್ಚು (ಫಿಂಗರ್ ಪ್ರಿಂಟ್) ಆಧಾರಿತ ವ್ಯವಸ್ಥೆ, ಆಧಾರ್ ಆಧಾರಿತ ಬಯೋಮೆಟ್ರಿಕ್ಸ್ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ.
ಮುಂದುವರೆದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಡಿಜಿಟಲ್ ಪಾವತಿಯನ್ನು ಇನ್ನಷ್ಟು ಸುರಕ್ಷಿತ ಮತ್ತು ಸುಲಭಗೊಳಿಸುವುದು ಈ ಹೊಸ ನಿಯಮದ ಉದ್ದೇಶವಾಗಿದೆ. ಇದರಿಂದ ಪಾವತಿ ವ್ಯವಸ್ಥೆಯಲ್ಲಿ ಭದ್ರತೆ ಹೆಚ್ಚುವೊಂದಿಗೆ, ಬಳಕೆದಾರರಿಗೆ ಹೆಚ್ಚು ಆಯ್ಕೆಗಳು ಲಭ್ಯವಾಗಲಿವೆ.ಇದನ್ನು ಓದಿ –ಇಂದಿನಿಂದ 5 ದಿನಗಳ ಕಾವೇರಿ ಆರತಿ ಆರಂಭ
ಆರ್‌ಬಿಐ ಈ ಕ್ರಮವನ್ನು ಕೈಗೊಂಡಿರುವುದರಿಂದ ದೇಶದ ಡಿಜಿಟಲ್ ವ್ಯವಹಾರ ವ್ಯವಸ್ಥೆಗೆ ನೂತನ ಮೆರುಗು ಸೇರುವ ನಿರೀಕ್ಷೆಯಿದೆ.








