ಮೈಸೂರು : ತಮ್ಮ ಇಬ್ಬರು ಗಂಡು ಮಕ್ಕಳಾದ ರವಿಶಂಕರ್ ಮತ್ತು ಉದಯ ಶಂಕರ್ ಅವರುಗಳು ನನ್ನ ಅಂತ್ಯ ಸಂಸ್ಕಾರ ಮಾಡಕೂಡದು.
ಇದು ಸಾಹಿತಿ ಎಸ್ ಎಲ್ ಭೈರಪ್ಪ ಅವರ ತಿದ್ದುಪಡಿ ಉಯಿಲಿನಲ್ಲಿ ದಾಖಲಾಗಿರುವ ಪ್ರಮುಖ ಅಂಶ.

ತಮ್ಮನ್ನು ನೋಡಿಕೊಂಡ ಮಹಿಳೆ ಸಂಸ್ಕಾರ ಮಾಡಲಿ :
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಾ, ತಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವ ಸಹನಾ ವಿಜಯ ಕುಮಾರ್ ಅವರೇ ತಮ್ಮ ಅಂತ್ಯಕ್ರಿಯೆಯನ್ನು ಹಿಂದೂ ಧರ್ಮದ ಪ್ರಕಾರ ವಿಧಿವತ್ತಾಗಿ ನೆರವೇರಿಸಬೇಕು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅಂತ್ಯ ಸಂಸ್ಕಾರ ನೆರವೇರಿಸಲು ಯಾವ ನಿಷೇಧವೂ ಇಲ್ಲ ಎಂಬ ಕ್ರಾಂತಿಕಾರಿ ವಿಷಯವನ್ನು ದಾಖಲಿಸಿದ್ದಾರೆ.








