ಮೈಸೂರು:ಬಿಡದಿ ಟೌನ್ ಶಿಪ್ಎಚ್.ಡಿ.ಕುಮಾರಸ್ವಾಮಿ ಕಾಲದಲ್ಲೇ ತೀರ್ಮಾನದ ಯೋಜನೆಯಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಬೇಡ ಯಾರು ಎನೇ ವಿರೋಧ ಮಾಡಿದರು ಗ್ರೇಟರ್ ಬೆಂಗಳೂರು ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಬಿಡದಿ ಟೌನ್ ಶಿಪ್ ಗೆ ರೈತರ ಭೂಮಿ ಕೈಬಿಡುವಂತೆ ಸಿಎಂ ಗೆ ದೇವೇಗೌಡರ ಪತ್ರ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಕಾಲದಲ್ಲೇ 7ಟೌನ್ ಶಿಪ್ ಮಾಡಬೇಕು. ಅಂತ ತೀರ್ಮಾನ ಆಗಿದ್ದು, ಅದಕ್ಕಾಗಿ 300 ಕೋಟಿ ಹಣ ಕೊಟ್ಟಿದ್ದರು. ಟೌನ್ ಶಿಪ್ ಪ್ಲಾನ್ ಅವರ ಕಾಲದಲ್ಲೇ ಆಗಿದ್ದು, ನಾನು ಡೈನೋಟಿಫಿಕೇಶ್ ಮಾಡಲು ಹೋಗಲ್ಲ. ಈ ಹಿಂದೆ ನನ್ನ ಮೇಲೆ ಏನೆಲ್ಲಾ ಹೇಳಿದ್ರು. ಅದೆಲ್ಲ ಇತಿಹಾಸ ಎಂದರು.
ಟೌನ್ ಶಿಪ್ ಪಿತಾಮಹ ದೇವೇಗೌಡ ಹಾಗೂ ಕುಮಾರಸ್ವಾಮಿ: ಯಾರು ಏನೇ ಹೇಳಿದ್ರು ಗ್ರೇಟರ್ ಬೆಂಗಳೂರು ಮಾಡೇ ಮಾಡುತ್ತೇವೆ. ಬೆಂಗಳೂರಿಗಿಂತ ಚೆನ್ನಾಗಿ 10 ಸಾವಿರ ಎಕರೆಯಲ್ಲಿ ಉತ್ತಮ ಸಿಟಿ ಮಾಡುತ್ತೇವೆ. ಇದು ಮಾಡೆಲ್ ಸಿಟಿ ಆಗುತ್ತದೆ. ರೈತರು ಜಮೀನಿನ ಬದಲಾಗಿ ದುಡ್ಡು ತೆಗೆದುಕೊಳ್ಳಬಹುದು. ಇಲ್ಲದಿದ್ರೆ ಅಭಿವೃದ್ದಿ ಪಡಿಸಿದ ಲ್ಯಾಂಡ್ ತೆಗೆದುಕೊಳ್ಳಬಹುದು. ಎರಡು ಬಾರಿ ಕುಮಾರಸ್ವಾಮಿ ಸಿಎಂ ಆದ್ರೂ ಯಾಕೆ ರೈತರ ಭೂಮಿ ಸ್ವಾಧೀನದಿಂದ ಕೈ ಬಿಡಲಿಲ್ಲ. ಈ ಬಗ್ಗೆ ದೇವೇಗೌಡರೇ ಹೇಳಲಿ ಎಂದರು.
ಇದರಲ್ಲಿ ರಾಜಕೀಯ ಬೇಡ ಇದೆಲ್ಲ ನಿಮ್ಮ ಮಗನೆ ಮಾಡಿದ್ದು, ನಿಮ್ಮ ಕಾಲದಲ್ಲೇ ಆಗಿದೆ ಎಂದರು. ಕಾವೇರಿ ನಮ್ಮ ಜೀವನದಿ ತಾಯಿಯ ಆರತಿ ಮಾಡಬೇಕು. ಹೀಗಾಗಿ ಕಾವೇರಿ ಆರತಿ ಮಾಡಲು ಮುಂದಾಗಿದ್ದೇವೆ. ವ್ಯವಸಾಯ ಕುಡಿಯಲು ನೀರು ಎಲ್ಲವನ್ನೂ ತಾಯಿ ಕೊಡುತ್ತಿದ್ದಾಳೆ. ರಾಜ್ಯಕ್ಕೆ ಎಲ್ಲರಿಗೂ ಒಳಿತಾಗಲಿ ಎಂದು ಆರತಿ ಮಾಡುತ್ತೇವೆ ಎಂದರು.
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದಲ್ಲಿ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರದ ಒಪ್ಪಿಗೆ ವಿಚಾರವಾಗಿ ಮಾತನಾಡಿ, ನಾನು ಇಲ್ಲಿ ಬ್ಲೇಮ್ ಗೇಮ್ ಮಾಡುವುದಿಲ್ಲ.ಯಾರ ವಿರುದ್ದವೂ ಮಾತನಾಡುವುದಿಲ್ಲ. ಇದು ರಾಜಕೀಯ ಮಾಡುವ ವಿಚಾರ ಅಲ್ಲ. ಯಾರು ಈ ವಿಚಾರದಲ್ಲಿ ಯಾರೂ ಕೂಡಾ ರಾಜಕೀಯ ಮಾಡಬಾರದು. ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಆಗಿ ಹೇಳುತ್ತಿದ್ದೇನೆ. ಈ ವಿಚಾರದಲ್ಲಿ ರಾಜಕೀಯ ಯಾವುದೇ ಕಾರಣಕ್ಕೂ ಮಾಡಬಾರದು. ಹೊರದೇಶದಿಂದ ಬಂದು ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಅವರನ್ನು ಮುಗಿಸುವ ಕೆಲಸ ಆಗಬೇಕು. ಕೇಂದ್ರ ಸರ್ಕಾರ ಈಗಾಗಲೇ ಆ ಕೆಲಸ ಮಾಡಿದೆ. ಈ ವಿಚಾರವಾಗಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದರು.
ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಯಿಸಿ, ಅದನ್ನು ಹೇಗೆ ಮಾಡಬೇಕು ಅಂತಾ ನನಗೆ ಗೊತ್ತು. ಅದನ್ನು ಮಾಡೇ ಮಾಡುತ್ತೇನೆ.ನಾವೇನು ಹೊರಗಿನಿಂದ ಬಂದವರಲ್ಲ. ನಮ್ಮ ಭೂಮಿ ನಮ್ಮ ನೆಲದ ಬಗ್ಗೆ ನಮಗೆ ಗೊತ್ತು. ಯಾರು ಅಪ್ಪ ಅಮ್ಮನ ಹೆಸರು ಬದಲಾಯಿಸಲ್ಲ.ಇದನ್ನು ಓದಿ –ರಾಜ್ಯದಾದ್ಯಂತ ಚದುರಿದ ಪೂರ್ವ ಮುಂಗಾರು ಮಳೆಯ ಮುನ್ಸೂಚನೆ
ಅಫಿಡೆವಿಟ್ ಮಾಡಿಸಿಕೊಳ್ಳಬಹುದು ಅಷ್ಟೇ ಎಂದರು. ಡಿ.ಕೆ.ಶಿವಕುಮಾರ್ ಬಗ್ಗೆ ಭಯನಾ ಅಸೂಯೆನಾ ಪ್ರಶ್ನೆಗೆ ಏನು ಅಂತಾ ಗೊತ್ತಿಲ್ಲ ಆದರೆ, ನನ್ನ ಮೇಲೆ ಅತಿಯಾದ ಪ್ರೀತಿ ಎಂದು ವ್ಯಂಗ್ಯವಾಡಿದರು.