– ಭಾರತೀಯ ವಾಯುಪಡೆಯ ಅಧಿಕೃತ ಪ್ರಕಟಣೆ
ದೆಹಲಿ: ಪಾಕಿಸ್ತಾನದ ಮರುದಾಳಿಯ ಹಿನ್ನೆಲೆಯಲ್ಲಿ ಭಾರತ ಆರಂಭಿಸಿದ ಆಪರೇಷನ್ ಸಿಂಧೂರ ಮುಂದುವರಿಯಲಿದೆ ಎಂದು ಭಾರತೀಯ ವಾಯುಪಡೆ (IAF) ಅಧಿಕೃತವಾಗಿ ಘೋಷಿಸಿದೆ.
ವಾಯುಪಡೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಾರ್ಯಾಚರಣೆಗಳು ಇನ್ನೂ ಪ್ರಗತಿಯಲ್ಲಿದ್ದು, ಸೂಕ್ತ ಸಮಯದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ನಡುವೆ ಪರಿಶೀಲನೆಗೊಳಪಡದ ಸುದ್ದಿ ಅಥವಾ ವದಂತಿಗಳಿಗೆ ಕಿವಿಗೊಡಬಾರದು ಎಂಬ ಮನವಿಯನ್ನೂ ಮಾಡಲಾಗಿದೆ.
ಭಾರತೀಯ ವಾಯುಪಡೆಯು ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ನಿಖರತೆ, ನಿಯೋಜನೆ ಹಾಗೂ ವೃತ್ತಿಪರತೆ ಸಹಿತ ತನ್ನ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ತಿಳಿಸಿದೆ. ಈ ಕಾರ್ಯಾಚರಣೆಗಳು ರಾಷ್ಟ್ರದ ಉದ್ದೇಶಗಳೊಂದಿಗೆ ಹೊಂದಿಕೆಯಾಗಿವೆ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಡಿಜಿಎಂಒ ಮನವಿಯ ಮೇರೆಗೆ ಭಾರತ ಕದನ ವಿರಾಮಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಶನಿವಾರ ರಾತ್ರಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿ ಆ ಒಪ್ಪಂದವನ್ನು ಉಲ್ಲಂಘಿಸಿತು. ಇದರ ಪರಿಣಾಮವಾಗಿ ದೇಶದಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.ಇದನ್ನು ಓದಿ –ನಾಪತ್ತೆಯಾಗಿದ್ದ ಕೃಷಿ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ಶವವಾಗಿ ಪತ್ತೆ
ಈಗ, ಭಾರತೀಯ ವಾಯುಪಡೆ ಆಪರೇಷನ್ ಸಿಂಧೂರ ಮುಂದುವರಿಯಲಿದೆ ಎಂಬ ಅಧಿಕೃತ ಘೋಷಣೆಯ ಮೂಲಕ ಭಾರತದ ನಿಲುವಿಗೆ ಸ್ಪಷ್ಟತೆ ದೊರಕಿದೆ.