- ಉರಿ ಸೇನಾ ಕ್ಯಾಂಪ್ ಮೇಲಿನ ದಾಳಿಗೆ ಸರ್ಜಿಕಲ್ ಸ್ಟ್ರೈಕ್
- ಪುಲ್ವಾಮಾ ದಾಳಿಗೆ ಬಾಲಾಕೋಟ್ ಏರ್ಸ್ಟ್ರೈಕ್ ನಡೆದಿತ್ತು
- ಪಹಲ್ಗಾಮ್ ದಾಳಿಗೆ ಯಾವಾಗ ನಡೆಯುತ್ತೆ ಸ್ಟ್ರೈಕ್?
ನವದೆಹಲಿ:ಪಹಲ್ಗಾಮ್ ದಾಳಿ ಬೆನ್ನಲ್ಲೇ ದೇಶವಾಸಿಗಳ ಹೃದಯ ಕಲುಕಿದೆ. ಪ್ರತೀಕಾರದ ಮಾತುಗಳು ಜೋರಾಗಿದೆ.
26 ಪ್ರವಾಸಿಗರ ರಕ್ತ ಹೀರಿದ ರಾಕ್ಕಸರ ವಿರುದ್ಧ ಸೇಡು ತೀರಿಸಿಕೊಳ್ಳುವ ಆಗ್ರಹ ಶುರುವಾಗಿದೆ. ಹಾಗಾಗಿ ಭಾರತೀಯ ಸೇನೆಯ ಪ್ರತೀಕಾರದ ದಾಳಿ ಏನಾಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಈ ಹಿಂದೆ ಏನಾಗಿತ್ತು ?
ಅಂದು ಉರಿ ಸೇನಾ ಕ್ಯಾಂಪ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. 2019, ಫೆಬ್ರವರಿ 14ರ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ಏರ್ ಸ್ಟ್ರೈಕ್ ನಡೆದಿತ್ತು. ಈಗ 2025ರ ಏಪ್ರಿಲ್ 22 ಪೆಹಲ್ಗಾಮ್ ಪ್ರವಾಸಿಗರ ಮೇಲಿನ ದಾಳಿ. ಈ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಯಾವ ದಾಳಿ ನಡೆಸಲಿದೆ ಎಂಬ ಕುತೂಹಲ ಮೂಡಿದೆ.
ಮತ್ತೊಮ್ಮೆ ಪಾಕಿಸ್ತಾನದ ಭಯೋತ್ಪಾದಕರಿಂದ ಭಾರತದ ಮೇಲೆ ದಾಳಿಯಾಗಿದೆ. ಈಗಾಗಲೇ ದಾಳಿ ನಡೆಸಿದ ಉಗ್ರ ಸಂಘಟನೆ ಯಾವುದೆಂದು ಸ್ಪಷ್ಟವಾಗಿದೆ.
ಈ ದಾಳಿ ನಡೆಸಿದ ಉಗ್ರರ ಫೋಟೋ ರೀಲೀಸ್ ಆಗಿದೆ. ದಾಳಿ ನಡೆಸಿದ ಉಗ್ರರಿಗೆ ಅವರದ್ದೇ ಮಾರ್ಗದಲ್ಲಿ ಉತ್ತರ ನೀಡಲು ಇದು ಸರಿಯಾದ ಸಮಯ. ಭಯೋತ್ಪಾದನಾ ಸಂಘಟನೆಗಳ ಜಂಘಾಬಲ ಅಡಗಿಸುವ ಪ್ರತಿ ದಾಳಿ ನಡೆಸಬೇಕೆಂದು ಅನೇಕರು ಒತ್ತಾಯಿಸುತ್ತಿದ್ದಾರೆ.ಇದನ್ನು ಓದಿ –ಪಹಲ್ಗಾಮ್ ದಾಳಿ: NIA ಬಿಡುಗಡೆ ಮಾಡಿದ ನಾಲ್ವರು ಶಂಕಿತ ಉಗ್ರರ ಚಿತ್ರಗಳು
15 ದಿನದಲ್ಲಿ ಅಟ್ಯಾಕ್..?
ಮುಂದಿನ 10-15 ದಿನಗಳಲ್ಲೇ ಪಾಕ್ ಉಗ್ರರು, ಪಾಕ್ ಮೇಲೆ ಭಾರತದ ಸೇನೆ ಪ್ರತಿ ದಾಳಿಯ ಸಾಧ್ಯತೆ ಹೆಚ್ಚಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉನ್ನತ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಖುದ್ದಾಗಿ ಪೆಹಲ್ಗಾಮ್ಗೆ ಭೇಟಿ ಕೊಟ್ಟಿದ್ದಾರೆ. ಈಗ ಇಡೀ ದೇಶ ಪೆಹಲ್ಗಾಮ್ ದಾಳಿಗೆ ಪ್ರತಿ ದಾಳಿ ನಡೆಸಬೇಕು ಎಂಬ ಒತ್ತಾಯ ಜೋರಾಗಿದೆ.