ನ್ಯೂಯಾರ್ಕ್: ಭಾರತ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತುರ್ತು ಸಭೆ ಕೇಳಿಸಿದ್ದ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದೆ.
ಪಾಕಿಸ್ತಾನದ ಮನವಿಯ ಮೇರೆಗೆ ನಡೆದ ಈ ರಹಸ್ಯ ಸಭೆಯಲ್ಲಿ ಯಾವುದೇ ನಿರ್ಧಾರ ಅಥವಾ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿ ಸಭೆ ಕರೆಯಿಸಿತ್ತು. ಆದರೆ ಚರ್ಚೆಯ ನಂತರ ಯಾವ ಅಧಿಕೃತ ಪ್ರತಿಕ್ರಿಯೆ ಅಥವಾ ನಿರ್ಧಾರ ಪ್ರಕಟವಾಗದೆ ಸಭೆ ಮುಕ್ತಾಯಗೊಂಡಿದೆ.
ಇದೀಗ ಮೊದಲು ಈ ರೀತಿ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಮುಖಭಂಗವಾಗುವುದು ಹೊಸದಲ್ಲ. 2019ರ ಆಗಸ್ಟ್‌ನಲ್ಲಿ ಭಾರತ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರವೂ ಪಾಕಿಸ್ತಾನ, ಚೀನಾದ ಮೂಲಕ ಭದ್ರತಾ ಮಂಡಳಿಯಲ್ಲಿ ಚರ್ಚೆ ನಡೆಸಲು ಪ್ರಯತ್ನಿಸಿತ್ತು. ಆದರೆ, ಆಗಲೂ ಯಾವುದೇ ನಿರ್ಧಾರ ಅಥವಾ ಹೇಳಿಕೆ ಪ್ರಕಟವಾಗಲಿಲ್ಲ.
ಬಹುಪಾಲು ರಾಷ್ಟ್ರಗಳು ಕಾಶ್ಮೀರ ವಿಚಾರವನ್ನು ಭಾರತ–ಪಾಕಿಸ್ತಾನದ ದ್ವಿಪಕ್ಷೀಯ ವಿಷಯವೆಂದು ಸ್ಪಷ್ಟಪಡಿಸಿವೆ. ಪಾಕಿಸ್ತಾನದ ಅಂತಾರಾಷ್ಟ್ರೀಯ ಪ್ರಯತ್ನಗಳು ಮತ್ತೆ ವಿಫಲವಾಗಿರುವುದು ಸ್ಪಷ್ಟವಾಗಿದೆ.
ಸಭೆಯಲ್ಲಿ ಭಾಗವಹಿಸಿದ ದೇಶಗಳು:
ಶಾಶ್ವತ ಸದಸ್ಯರಾಗಿ ಚೀನಾ, ಫ್ರಾನ್ಸ್, ರಷ್ಯನ್ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ ಇದ್ದರೆ, ಅವಧಿ ನಿಯಮಿತ ಸದಸ್ಯರಾಗಿ ಅಲ್ಜೀರಿಯಾ, ಡೆನ್ಮಾರ್ಕ್, ಗ್ರೀಸ್, ಗಯಾನಾ, ಪಾಕಿಸ್ತಾನ, ಪನಾಮಾ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಹಾಗೂ ಸೊಮಾಲಿಯಾ ಭಾಗವಹಿಸಿದ್ದವು.ಇದನ್ನು ಓದಿ –ಕೊರೋನಾ ತರ ಮತ್ತೊಂದು ರೋಗ, ಯುದ್ಧ, ಸಾವು ನೋವುಗಳು ಸಂಭವಿಸುವ ಭಯಾನಕ ಭವಿಷ್ಯವಾಣಿ
ಪಾಕಿಸ್ತಾನದ ಅಂತರಾಷ್ಟ್ರೀಯ ಮಟ್ಟದ ದೂರು ಪೂರಿಗೂ ವಿಶ್ವಸಂಸ್ಥೆಯ ಉತ್ಥರ ಇಲ್ಲದಿರುವುದು, ಭಾರತದ ಸ್ಥಾನದ ಬಲವನ್ನೇ ಮತ್ತೊಮ್ಮೆ ಸ್ಪಷ್ಟಪಡಿಸಿದೆ.