ನವದೆಹಲಿ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆಯಿಂದ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಪಾಕಿಸ್ತಾನಿ ಸೇನೆ ಬಾಲ ಬಿಚ್ಚಿದ್ದು, ಜಮ್ಮು ಮತ್ತು ರಾಜಸ್ಥಾನದ ಹಲವೆಡೆ ಶಕ್ತಿಶಾಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ.
ಜಮ್ಮು ಪ್ರದೇಶದಲ್ಲಿ ಅಖ್ನೂರ್, ಕನಾಚಕ್, ಪರ್ಗ್ವಾಲ್, ರಾಮನಗರ ವಲಯಗಳಲ್ಲಿ ಪಾಕಿಸ್ತಾನದ ದಾಳಿಯಿಂದ ಸ್ಫೋಟದ ಭೀಕರ ಶಬ್ದಗಳು ಸುತ್ತಮುತ್ತದ ಜನರಲ್ಲಿ ಆತಂಕ ಮೂಡಿಸಿದೆ. ಸ್ಫೋಟಗಳು ಕದನ ವಿರಾಮದ ಉಲ್ಲಂಘನೆಯಾಗಿದೆ ಎಂದು ಭಾರತೀಯ ಸೇನೆ ದೃಢಪಡಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಕೂಡ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು, ಗಡಿಯಲ್ಲಿ ಕಟ್ಟುನಿಟ್ಟಾದ ಭದ್ರತಾ ಕ್ರಮ ಕೈಗೊಂಡಿದೆ. ಇನ್ನೊಂದೆಡೆ ರಾಜಸ್ಥಾನ ಗಡಿಯಲ್ಲಿ ಕೂಡಾ ವಿಸ್ತಾರವಾದ ಸ್ಫೋಟದ ಸದ್ದುಗಳು ಕೇಳಿಬಂದಿರುವ ಮಾಹಿತಿ ಲಭ್ಯವಾಗಿದೆ.ಇದನ್ನು ಓದಿ –ಭಾರತ-ಪಾಕ್ ತಕ್ಷಣವೇ ಕದನ ವಿರಾಮ ಘೋಷಣೆಗೆ ಸಮ್ಮತಿಸಿವೆ: ಟ್ರಂಪ್ ಟ್ವೀಟ್
ಪ್ರಸ್ತುತ ಗಡಿಭಾಗದಲ್ಲಿ ತೀವ್ರ ಉದ್ವಿಗ್ನತೆ ಮನೆಮಾಡಿದ್ದು, ಪಾಕಿಸ್ತಾನದ ಈ ಕೃತ್ಯವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಯಾವುದೇ ಆಕ್ರಮಣಶೀಲತೆಯನ್ನು ಸುಮ್ಮನೆ ನೋಡುವುದಿಲ್ಲ ಎಂದು ಸೈನಿಕ ಮೂಲಗಳು ಸ್ಪಷ್ಟಪಡಿಸಿವೆ.