ನವದೆಹಲಿ: ಭಾರತಕ್ಕೆ ಸಂಬಂಧಿಸಿದ ಭದ್ರತಾ ಮಾಹಿತಿಗಳು ಮತ್ತು ಮೊಬೈಲ್ ಸಿಮ್‌ಗಳ ಮಾಹಿತಿ ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಪಾಕಿಸ್ತಾನಿ ಗೂಢಚಾರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ರಾಜಸ್ಥಾನದ ದೀಗ್ ಜಿಲ್ಲೆಯ ಗಂಗೋರಾ ಗ್ರಾಮದ ನಿವಾಸಿ ಕಾಸಿಂ (34). ಈತನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಕಾಸಿಂ 2024ರ ಆಗಸ್ಟ್ ಮತ್ತು 2025ರ ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಮತ್ತು ಅಲ್ಲಿ ಐಎಸ್‌ಐ ಅಧಿಕಾರಿಗಳನ್ನು ಭೇಟಿ ಮಾಡಿ ಭದ್ರತಾ ಮಾಹಿತಿ ಹಂಚಿಕೊಂಡಿದ್ದನು. ಅಲ್ಲದೆ ಪಾಕ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು ಎಂಬ ಮಾಹಿತಿ ಲಭಿಸಿದೆ.
ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಪಾಕ್ ಗುಪ್ತಚರರು ಭಾರತೀಯ ಮೊಬೈಲ್ ಸಿಮ್‌ಗಳನ್ನು ದುರುಪಯೋಗಪಡಿಸಿಕೊಂಡು ಗಡಿಯಾಚೆ ಸಂವೇದನಾಶೀಲ ಮಾಹಿತಿ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ದೆಹಲಿ ಪೊಲೀಸರು ಕಾಸಿಂನನ್ನು ಬಂಧಿಸಿ, ನ್ಯಾಯಾಲಯದಿಂದ ರಿಮ್ಯಾಂಡ್‌ನಲ್ಲಿ ಇರಿಸಿದ್ದಾರೆ.ಇದನ್ನು ಓದಿ –KRS ಜಲಾಶಯದಲ್ಲಿ ನಾಲ್ಕು ದಿನದಲ್ಲಿ 11 ಅಡಿ ನೀರಿನ ಹೆಚ್ಚಳ
ದೇಶದ ಭದ್ರತೆಗೆ ಬೆದರಿಕೆ ಉಂಟುಮಾಡುವ ಈ ರೀತಿಯ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ತನಿಖೆ ನಡೆಯುತ್ತಿದೆ.








