ಕೆ.ಆರ್ ಪೇಟೆ: ತಾಲ್ಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಯ್ಯದ್ ಮುಜಾಕೀರ್ ಹಾಗೂ ಬಿಲ್ ಕಲೆಕ್ಟರ್ ನಾಗೇಶ ಅವರು ೨೦ ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.


ಅವರು ಗ್ರಾಮಸ್ಥರೊಬ್ಬರಿಗೆ ಮನೆಯ ಇ ಸ್ವತ್ತು ಮಾಡಿಕೊಡಲು ೫೦ ಸಾವಿರ ಲಂಚ ಕೇಳಿದ್ದರು. ಇದರಲ್ಲಿ ೨೦ ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿ ಬ್ಯಾಟರಾಯಗೌಡ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ.