ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ 11ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ದೇಹದಾರ್ಢ್ಯ ಮತ್ತು ಫಿಟ್ನೆಸ್ ಸಂಸ್ಥೆ ರಾಕ್ ಜಿಮ್ ಮತ್ತು ಅರ್ನೆಸ್ಟ್ ಜಿಮ್ ಇವರ ಆಶ್ರಯದಲ್ಲಿ 4ನೇ ವರ್ಷದ ಮೋದಿ ಕಪ್-2025 ಅಂತರ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ-2025 ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 11 ವರ್ಷ ಉತ್ತಮ ಆಡಳಿತ ನಡೆಸಿರುವುದಕ್ಕೆ ಅದರ ನೆನಪಿಗಾಗಿ ದೇಹದಾಡ್ಯ ಸ್ಪರ್ಧೆ ಮಾಡುತ್ತಿರುವುದಾಗಿ ಸ್ವಾಗತಾರ್ಹವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಮೆಚ್ಚಿದ ನಾಯಕರಾಗಿದ್ದು, ಅವರ ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಆಯೋಜಕರಾದ ಬಿಜೆಪಿ ನಗರ ಯುವ ಮೋರ್ಚ ಮಾಜಿ ಅಧ್ಯಕ್ಷ ಎಂ.ಜೆ.ಕಿರಣ್ ಗೌಡ ಮಾತನಾಡಿ, ನಾಲ್ಕು ಜಿಲ್ಲೆಗಳಾದ ಮೈಸೂರು, ಕೊಡಗು, ಹಾಸನ, ಮಂಡ್ಯ, ಚಾಮರಾಜನಗರದಿಂದ ಒಟ್ಟು 50ಕ್ಕೂ ಹೆಚ್ಚು ಕ್ರೀಡಾಪಟುಗಳು ಬರಲಿದ್ದು, ಹೆಚ್ಚು ಅಸಕ್ತರು ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಪ್ರಥಮ ಬಹುಮಾನ 20ಸಾವಿರ ರೂ., ದ್ವಿತೀಯ 15ಸಾವಿರರೂ. ಹಾಗೂ ತೃತೀಯ 10ಸಾವಿರ ನಗದು ನೀಡಲಾಗುವುದು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಬುಕ್ ವಿತರಣೆ, ಆಟೋ ಚಾಲಕರಿಗೆ ಸಮವಸ್ರ ವಿತರಣೆ, ಎಸ್ ಎಸ್ ಎಲ್ ಸಿ ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ ಕಾರ್ಯಕ್ರಮ ಇರಲಿದೆ. ನಗರದ ಹೆಬ್ಬಾಳು ಬಡಾವಣೆಯ ವಾರ್ಡ್ ನಂ.1ರ ಲಕ್ಮಿಕಾಂತ ನಗರದ ವೃತ್ತದಲ್ಲಿ ನಡೆಯಲಿದೆ. ಜು.5ರ ಸಂ.5ಗಂಟೆಗೆ ಶುರುವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ.೭೨೦೪೮೭೩೯೧೫, ೯೮೪೪೧೦೨೧೭೩, ೯೮೮೦೮೩೩೯೮೦, ೯೧೧೩೯೨೩೬೮೯ ಎಂದು ತಿಳಿಸಿದರು.ಇದನ್ನು ಓದಿ –ಬೆಟ್ಟದ ಸೇವೆ ಶುಲ್ಕ ಏರಿಕೆ ಖಂಡಿಸಿ ಪ್ರತಿಭಟನೆ
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಅಧ್ಯಕ್ಷ ನಾಗೇಂದ್ರ, ಶಾಸಕ ಶ್ರೀವತ್ಸ, ರಾಜ್ಯ ಹಿಂದುಳಿದ ಮೋರ್ಚ ಅಧ್ಯಕ್ಷ ರಘು ಕೌಟಿಲ್ಯ, ಅಲ್ಪ ಸಂಖ್ಯಾತ ಮೋರ್ಚಾ ಅದ್ಯಕ್ಷ ಅನಿಲ್ ಥಾಮಸ್, ನಗರಪಾಲಿಕೆ ಮಾಜಿ ಸದಸ್ಯ ಸುಬ್ಬಯ್ಯ, ಉಮೇಶ್, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಉಪಾಧ್ಯಕ್ಷ ಕಾರ್ತಿಕ್, ಪುನೀತ್ ಉಪಸ್ಥಿತರಿದ್ದರು.