By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಜಿಪಂ–ತಾಪಂ ಚುನಾವಣೆಗೆ : ಏ.2026ರ ಒಳಗೆ ಸಿದ್ಧತೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Belgavi > ಜಿಪಂ–ತಾಪಂ ಚುನಾವಣೆಗೆ : ಏ.2026ರ ಒಳಗೆ ಸಿದ್ಧತೆ
BelgaviKarnatakaMain News

ಜಿಪಂ–ತಾಪಂ ಚುನಾವಣೆಗೆ : ಏ.2026ರ ಒಳಗೆ ಸಿದ್ಧತೆ

Team Varthaman
Last updated: December 12, 2025 12:42 PM
Team Varthaman
Published: December 12, 2025
Share
SHARE

ಬೆಳಗಾವಿ: ಬಹುಕಾಲದಿಂದ ಸ್ಥಗಿತಗೊಂಡಿದ್ದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮತ್ತೊಮ್ಮೆ ಚೈತನ್ಯ ಸಿಕ್ಕಿದೆ. ಸಂಪುಟ ಸಭೆಯಲ್ಲಿ, ಚುನಾವಣಾ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು 2026ರ ಏಪ್ರಿಲ್ ಒಳಗೆ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಈ ಮೂಲಕ ಸುಮಾರು ಐದು ವರ್ಷಗಳಿಂದ ವಿಳಂಬಗೊಂಡಿದ್ದ ಜಿಪಂ–ತಾಪಂ ಚುನಾವಣೆಗಳು 2026ರ ಬೇಸಿಗೆಗೂ ಮುನ್ನ ನಡೆಯುವ ದಾರಿ ಸುಗಮಗೊಂಡಿದೆ.

Contents
  • ಬೆಳಗಾವಿ: ಬಹುಕಾಲದಿಂದ ಸ್ಥಗಿತಗೊಂಡಿದ್ದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮತ್ತೊಮ್ಮೆ ಚೈತನ್ಯ ಸಿಕ್ಕಿದೆ. ಸಂಪುಟ ಸಭೆಯಲ್ಲಿ, ಚುನಾವಣಾ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು 2026ರ ಏಪ್ರಿಲ್ ಒಳಗೆ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ.
  • ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು

ರಾಜ್ಯದಲ್ಲಿ ಕೊನೆಯ ಬಾರಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆ 2016ರ ಏಪ್ರಿಲ್‌ನಲ್ಲಿ ನಡೆದಿತ್ತು. ಆಗ ಆಯ್ಕೆಯಾದ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಗಿದಿತ್ತು. ಆದಾಗ್ಯೂ, ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಚುನಾವಣೆ ನಡೆಯದೇ, ಸ್ಥಳೀಯ ಸ್ವರಾಜ್ಯ ವ್ಯವಸ್ಥೆ ಐದು ವರ್ಷಗಳ ಕಾಲ ಕಾರ್ಯನಿರ್ವಹಣೆಯಲ್ಲಿಯೇ ಉಳಿದಿದೆ.

Join WhatsApp Group

ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಕ್ಷೇತ್ರ ಪುನರ್‌ವಿಂಗಡಣೆ, ಮತದಾರರ ಅಂತಿಮ ಪಟ್ಟಿಗಳು ಮತ್ತು ಮೀಸಲಾತಿ ಕರಡುವನ್ನು ಪ್ರಕಟಿಸಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ, ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು, ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ವರ್ಗಾಯಿಸಿತ್ತು. ಇದರಿಂದಾಗಿ ಚುನಾವಣಾ ಸಿದ್ಧತೆಗಳು ಮತ್ತಷ್ಟು ವಿಳಂಬಕ್ಕೆ ಒಳಗಾದವು.

ಈ ನಿರ್ಧಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೊರೆಹೋಗಿತ್ತು. ಸರ್ಕಾರವು ಹೈಕೋರ್ಟ್‌ಗೆ 2023ರ ಡಿಸೆಂಬರ್‌ನಲ್ಲೇ “ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ” ಎಂದು ಪ್ರಮಾಣ ಪತ್ರ ಸಲ್ಲಿಸಿತ್ತು. ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿ ಕುರಿತ ಅಧಿಸೂಚನೆ ಹೊರಡಿಸಿತ್ತು. ಆದರೆ ಮೀಸಲಾತಿಯ ಅಂತಿಮ ಪ್ರಕಟಣೆ ಆಗದೆ ಉಳಿದಿತ್ತು.

ಈಗ ಸಂಪುಟದ ತಾಜಾ ನಿರ್ಧಾರದಿಂದ, ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಚುನಾವಣೆಗಳು 2026ರೊಳಗೆ ನಡೆಯುವುದು ಬಹುತೇಕ ಖಚಿತವಾಗಿದೆ.

ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು

  • ಅಥಣಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ.
  • ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗಾಗಿ ₹94.38 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ:
    • 268 ಹೊಸ ತರಗತಿ ಕೊಠಡಿಗಳು
    • 123 ಶೌಚಾಲಯ ಬ್ಲಾಕ್‌ಗಳು
    • 264 ತರಗತಿಗಳ ದುರಸ್ತಿ
  • ಜಿಲ್ಲಾ–ತಾಲ್ಲೂಕು ಮಟ್ಟದ ಪ್ರಜಾಸೌಧಗಳ ನಿರ್ಮಾಣಕ್ಕೆ ಅನುಮೋದನೆ:
    • ಬೆಳಗಾವಿಯಲ್ಲಿ ₹55 ಕೋಟಿಗೆ ಜಿಲ್ಲಾ ಪ್ರಜಾಸೌಧ
    • ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನಲ್ಲಿ ₹10.85 ಕೋಟಿ ವೆಚ್ಚದ ತಾಲ್ಲೂಕು ಪ್ರಜಾಸೌಧ
    • ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ₹10.80 ಕೋಟಿ ವೆಚ್ಚದ ತಾಲ್ಲೂಕು ಪ್ರಜಾಸೌಧ
  • ವಿಧಾನಮಂಡಲದಲ್ಲಿ ಎರಡು ಮಹತ್ವದ ಮಸೂದೆಗಳನ್ನು ಮಂಡಿಸಲು ಅನುಮತಿ:
    • ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ
    • ಬಾಂಬೆ ಸಾರ್ವಜನಿಕ ನ್ಯಾಸ ಮಸೂದೆ
    • ನಾಡಪ್ರಭು ಕೆಂಪೇಗೌಡ ಪಾರಂಪರಿಕ ಮಸೂದೆ
  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ಇಂದಿನಿಂದ 5 ದಿನಗಳ ಕಾವೇರಿ ಆರತಿ ಆರಂಭ
‘ನಾನು ಮುಖ್ಯಮಂತ್ರಿ ಆಗುವುದಕ್ಕೆ ಕಾಲವೇ ಉತ್ತರ ನೀಡಲಿದೆ’ : ಡಿಸಿಎಂ ಡಿ.ಕೆ.ಶಿ
ಈ ವರ್ಷದ ದಸರಾ ಆಚರಣೆ ಕಳವಳಕಾರಿ – ಪ್ರಮೋದಾದೇವಿ ಒಡೆಯರ್
ಬೆಳಗಾವಿಯಲ್ಲಿ ಡಿಕೆಶಿಯ ಭೋಜನಕೂಟ ಶಕ್ತಿ ಪ್ರದರ್ಶನ
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ: ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ
TAGGED:latestnewsZP electionZP-GPಚುನಾವಣೆಜಿಪಂ–ತಾಪಂ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

“ಆರೋಗ್ಯ, ಆಧ್ಯಾತ್ಮದ ಮೂಲ ಯೋಗ”

Team Varthaman
Team Varthaman
June 21, 2025
KRS ಡ್ಯಾಂನಿಂದ ನೀರು ಬಿಡುಗಡೆ – ತಗ್ಗು ಪ್ರದೇಶದ ಜನರಿಗೆ ಪ್ರವಾಹ ಎಚ್ಚರಿಕೆ
ಕೆಂಪೇಗೌಡ ಜಯಂತಿ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ  
ರಾಜ್ಯದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಆಗಸ್ಟ್ 28ರಿಂದ ರಾಜ್ಯದಲ್ಲಿ ಭಾರೀ ಮಳೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?