ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್! ಭಾರತೀಯ ರೈಲ್ವೆ ಇಲಾಖೆಯಿಂದ 30,307 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಕುರಿತ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ ಮತ್ತು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಖಾಲಿ ಹುದ್ದೆಗಳ ವಿವರ:
- ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ – 6,235 ಹುದ್ದೆಗಳು
- ಸ್ಟೇಷನ್ ಮಾಸ್ಟರ್ – 5,623 ಹುದ್ದೆಗಳು
- ಸರಕು ರೈಲು ವ್ಯವಸ್ಥಾಪಕ – 3,562 ಹುದ್ದೆಗಳು
- ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ – 7,520 ಹುದ್ದೆಗಳು
- ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 7,367 ಹುದ್ದೆಗಳು
ಅರ್ಹತೆಗಳು:
ಪ್ರತಿ ಹುದ್ದೆಗೆ ಸಂಬಂಧಿಸಿದ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆ ಓದಿ ಅರ್ಜಿ ಸಲ್ಲಿಸಬೇಕು.
ವಯೋಮಿತಿ:
ಅರ್ಜಿದಾರರ ವಯಸ್ಸು ಕನಿಷ್ಟ 18 ರಿಂದ ಗರಿಷ್ಟ 32 ವರ್ಷದೊಳಗಿರಬೇಕು.
ವೇತನ ವಿವರ:
- ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ – ₹35,400
- ಸ್ಟೇಷನ್ ಮಾಸ್ಟರ್ – ₹35,400
- ಸರಕು ರೈಲು ವ್ಯವಸ್ಥಾಪಕ – ₹29,200
- ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ – ₹29,200
- ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – ₹29,200
ಅರ್ಜಿಯ ವಿಧಾನ:
ಅರ್ಜಿ ಸಲ್ಲಿಕೆ ಆನ್ಲೈನ್ ಮೂಲಕ ಮಾತ್ರ. ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಶುಲ್ಕ ಪಾವತಿಸಿ.
ಪ್ರಮುಖ ದಿನಾಂಕಗಳು:
- ಅರ್ಜಿಗಳ ಆರಂಭ: ಆಗಸ್ಟ್ 30, 2025
- ಅಂತಿಮ ದಿನಾಂಕ: ಸೆಪ್ಟೆಂಬರ್ 29, 2025
ಹೆಚ್ಚಿನ ಮಾಹಿತಿಗೆ ಮತ್ತು ಅಧಿಸೂಚನೆಗೆ ಭೇಟಿ ನೀಡಲು, ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.