ಬೆಂಗಳೂರು, ಮೇ 19: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಮದ್ಯದ ದರವನ್ನು ಈಗಾಗಲೇ ಮೂರು ಬಾರಿ ಏರಿಸಲಾಗಿದೆ. ಇದರ ಪರಿಣಾಮವಾಗಿ ಮದ್ಯ ಪ್ರಿಯರು ಮತ್ತು ಮದ್ಯ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಇತ್ತೀಚೆಗೆ ಮದ್ಯ ಮಾರಾಟ ಪರವಾನಗಿ ದರವನ್ನು ಕೂಡ ಹೆಚ್ಚಿಸಲಾಗಿದೆ. ಈ ಎಲ್ಲ ಕ್ರಮಗಳ ನಡುವೆಯೇ, ಇದೀಗ ಆರ್ಮಿ ಕ್ಯಾಂಟೀನ್‌ಗಳಿಗೆ ಪೂರೈಕೆ ಮಾಡುತ್ತಿರುವ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಬಗ್ಗೆ ರಾಜ್ಯ ಅಬಕಾರಿ ಇಲಾಖೆ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮೂಲಗಳ ಪ್ರಕಾರ, ರಾಜ್ಯದಲ್ಲಿ ಹಾಲಿ ಹಾಗೂ ನಿವೃತ್ತ ಯೋಧರಿಗೆ ಮದ್ಯವನ್ನು ರಿಯಾಯಿತಿದರದಲ್ಲಿ ನೀಡುವ ಆರ್ಮಿ ಕ್ಯಾಂಟೀನ್‌ಗಳ ಮೂಲಕ ಕೆಲವರು ದುರ್ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮದ್ಯದ ತೆರಿಗೆ ಹೆಚ್ಚಿಸಿದರೆ, ಅವ್ಯವಹಾರಗಳಿಗೆ ಬ್ರೇಕ್ ಬೀಳಬಹುದು ಎಂಬ ಆಶಯ ಸರ್ಕಾರಕ್ಕೆ ಇದೆ.
ಆರ್ಮಿ ಕ್ಯಾಂಟೀನ್‌ಗಳ ಸ್ಥಿತಿ ಮತ್ತು ದರ ವ್ಯತ್ಯಾಸ
ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 70 ಆರ್ಮಿ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಕ್ಯಾಂಟೀನ್‌ಗಳಲ್ಲಿ ಅಬಕಾರಿ ಇಲಾಖೆ ಮದ್ಯವನ್ನು ರಿಯಾಯಿತಿದರದಲ್ಲಿ ಪೂರೈಕೆ ಮಾಡುತ್ತದೆ. ಸಾಮಾನ್ಯ ಮಾರುಕಟ್ಟೆಯಲ್ಲಿ (ಬಾರ್, ವೈನ್ ಸ್ಟೋರ್, ಎಂಆರ್ಪಿ ಅಥವಾ ಎಂಎಸ್‌ಐಎಲ್) ಒಂದು ಫುಲ್ ಬಾಟಲ್ ಮದ್ಯದ ಬೆಲೆ ₹2300 ರಿಂದ ₹2500 ವರೆಗೆ ಇರುತ್ತದೆ. ಆದರೆ ಆರ್ಮಿ ಕ್ಯಾಂಟೀನ್‌ನಲ್ಲಿ ಇದೇ ಬಾಟಲ್ ₹500 ರಿಂದ ₹600 ರುಪಾಯಿಗೆ ದೊರೆಯುತ್ತದೆ. ಯೋಧರಿಗೆ ಪ್ರತಿ ತಿಂಗಳು 2 ರಿಂದ 4 ಬಾಟಲ್‌ಗಳನ್ನು ಮಾತ್ರ ರಿಯಾಯಿತಿದರದಲ್ಲಿ ನೀಡಲಾಗುತ್ತದೆ.ಇದನ್ನು ಓದಿ –ಏಷ್ಯಾ ಕಪ್ ಟೂರ್ನಿಯಿಂದ ಹಿಂದೆ ಸರಿದ ಭಾರತ
ಮದ್ಯ ಪ್ರಿಯರ ಆಕ್ರೋಶ
ಯೋಧರಿಗಾಗಿ ನೀಡುವ ಮದ್ಯದ ಮೇಲಿನ ತೆರಿಗೆಯನ್ನು ಕೂಡಾ ಹೆಚ್ಚಿಸಲು ಸರ್ಕಾರ ಚಿಂತನೆ ಮಾಡುತ್ತಿರುವ ವಿಚಾರವನ್ನು ಖಂಡಿಸಿ ಮದ್ಯ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದೇನು ನ್ಯಾಯವೇ? ಈಗಾಗಲೇ ನಮ್ಮ ಮೇಲೆ ಮದ್ಯದ ದರ ಏರಿಕೆ ಹೊರೆ ಬಿದ್ದಿದೆ. ದೇಶ ರಕ್ಷೆ ಮಾಡುವ ಯೋಧರಿಗೂ ಸರ್ಕಾರ ಮಿಡಿತವಿಲ್ಲವೇ?” ಎಂದು ಪ್ರಶ್ನಿಸುತ್ತಿದ್ದಾರೆ.