ಬೆಂಗಳೂರು: ಬಹುಚರ್ಚಿತ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ನಟ ದರ್ಶನ್ ಹೊಸ ಅರ್ಜಿ ಸಲ್ಲಿಸಿದ್ದು, ತಾನು ಪ್ರಕರಣದಿಂದ ಕೈಬಿಡುವಂತೆ ಕೋರ್ಟಿಗೆ ಮನವಿ ಮಾಡಿದ್ದಾರೆ.
ದರ್ಶನ್ ಅವರು ಬೆಂಗಳೂರಿನ ಸಿಟಿ ಸಿವಿಲ್ 57ನೇ ಕೋರ್ಟ್‌ಗೆ ಈ ಸಂಬಂಧ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ.
ಈ ನಡುವೆ, ಪ್ರಕರಣದಲ್ಲಿ ಜೈಲಲ್ಲಿರುವ ದರ್ಶನ್ ಹಾಗೂ ಅವರೊಂದಿಗೆ ಆರೋಪಿಗಳಾದ ಗ್ಯಾಂಗ್ ಮೇಲೆ ಮತ್ತೊಂದು ಹೊಸ ಸಂಕಷ್ಟ ಎದುರಾಗುತ್ತಿದೆ. ಇಂದು ಕೋರ್ಟ್‌ನಲ್ಲಿ ಇವರ ವಿರುದ್ಧ ದೋಷಾರೋಪ (Charge Sheet) ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.
ದೋಷಾರೋಪದ ನಂತರ ಸಾಕ್ಷಿದಾರರ ವಿಚಾರಣೆಗೆ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಬೇಕಿದೆ.
57ನೇ ಸಿಸಿಎಚ್ ಕೋರ್ಟ್ ಇಂದು ಆರೋಪಿಗಳಿಗೆ ಅಧಿಕೃತವಾಗಿ ಚಾರ್ಜ್‌ಗಳನ್ನು ಹೊರಿಸಲು ಸಜ್ಜಾಗಿದೆ. ಆರೋಪಿಗಳ ಹಾಜರಾತಿ ನಂತರ ಚಾರ್ಜ್ ಫ್ರೇಮಿಂಗ್ ಪ್ರಕ್ರಿಯೆ ಆರಂಭವಾಗಲಿದೆ.ಇದನ್ನು ಓದಿ –ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆಗೆ ಶರಣು
ಎ-1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಎಲ್ಲರಿಗೂ ನ್ಯಾಯಾಧೀಶರು ಐಪಿಸಿ ಸೆಕ್ಷನ್ 302 (ಕೊಲೆ), 364 (ಕಿಡ್ನ್ಯಾಪ್), 202 (ಸಾಕ್ಷಿ ನಾಶ) ಆರೋಪಗಳನ್ನು ಓದಿ ಕೇಳಿಸಲಿದ್ದಾರೆ. ಬಳಿಕ, ಆರೋಪಿಗಳು ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ ಅಥವಾ ತಳ್ಳಿಹಾಕುತ್ತೀರಾ ಎಂಬುದನ್ನು ಸ್ಪಷ್ಟಪಡಿಸಬೇಕಿದೆ.








