ಭಾರತೀಯ ರೂಪಾಯಿ 12 ವರ್ಷಗಳ ಬಳಿಕ ಒಂದೇ ದಿನದಲ್ಲಿ ಡಾಲರ್ ವಿರುದ್ಧ ಅತಿದೊಡ್ಡ ಏರಿಕೆಯನ್ನು ದಾಖಲಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಊಹಾಪೋಹದ ವಹಿವಾಟುಗಳಿಗೆ ಕಡಿವಾಣ ಹಾಕಿದ ಹಿನ್ನೆಲೆ ರೂಪಾಯಿ ಮೌಲ್ಯದಲ್ಲಿ ಸುಮಾರು 1.8% ಏರಿಕೆ ಕಂಡಿದೆ.
ಮಾರ್ಚ್ 31ರಂದು ಡಾಲರ್ಗೆ ₹95 ದಾಟಿದ್ದ ರೂಪಾಯಿ ಮೌಲ್ಯ, ಇಂದು ₹93.14 ಸುತ್ತಮುತ್ತ ವ್ಯವಹಾರ ನಡೆಸುತ್ತಿದೆ.
ಟ್ರಂಪ್ ಭಾಷಣದ ಬಳಿಕ ಜಾಗತಿಕ ಷೇರು ಮಾರುಕಟ್ಟೆ ಕುಸಿತ ಕಂಡಿದ್ದರೂ, ರೂಪಾಯಿ ಚೇತರಿಕೆ ಹಾಗೂ ಐಟಿ ಷೇರುಗಳ ಏರಿಕೆಯಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಮರುಚೇತರಿಕೆ ಕಂಡವು. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 73,319.55 (+185) ಅಂಕಗಳಿಗೆ ಏರಿದರೆ, ನಿಫ್ಟಿ 22,713.10 (+33) ಅಂಕಗಳಲ್ಲಿ ಮುಕ್ತಾಯಗೊಂಡಿತು.
ಆರ್ಬಿಐ ಕ್ರಮ:
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ಯಾಂಕ್ಗಳ ಊಹಾಪೋಹದ ವಹಿವಾಟುಗಳಿಗೆ ಆರ್ಬಿಐ ಕಡಿವಾಣ ಹಾಕಿದೆ. ಹಿಂದೆ ಬ್ಯಾಂಕ್ಗಳಿಗೆ ತಮ್ಮ ಬಂಡವಾಳದ 25% ವರೆಗೆ ಮಿತಿ ಇತ್ತು. ಈಗ ಎಲ್ಲಾ ಬ್ಯಾಂಕ್ಗಳಿಗೆ ಸಮಾನವಾಗಿ 100 ಮಿಲಿಯನ್ ಡಾಲರ್ ಮಿತಿ ವಿಧಿಸಲಾಗಿದೆ.
ಈ ನಿಯಮದಿಂದ ಬ್ಯಾಂಕ್ಗಳು ಹೆಚ್ಚುವರಿ ಡಾಲರ್ಗಳನ್ನು ಮಾರಾಟ ಮಾಡಬೇಕಾಗಿ ಬಂದಿದ್ದು, ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಹೆಚ್ಚಾಗಿದೆ. ಇದರಿಂದ ರೂಪಾಯಿ ಮೌಲ್ಯ ಬಲಗೊಂಡಿದೆ.
ಆದರೆ, ಈ ಹಠಾತ್ ಬದಲಾವಣೆಯಿಂದ ಬ್ಯಾಂಕ್ಗಳಿಗೆ ಅಲ್ಪಾವಧಿಯಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಸುಮಾರು 18ರಿಂದ 30 ಶತಕೋಟಿ ಡಾಲರ್ಗಳ ಮಾರಾಟ ಅಗತ್ಯವಾಗಬಹುದು ಎಂದು ಅಂದಾಜಿಸಲಾಗಿದೆ.ಇದನ್ನು ಓದಿ –ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಐಪ್ಯಾಕ್ ಕಚೇರಿಗಳ ಮೇಲೆ ಇಡಿ ದಾಳಿ
ಬ್ಯಾಂಕ್ಗಳು ಈ ನಿಯಮ ಜಾರಿಗೆ ಕನಿಷ್ಠ 3 ತಿಂಗಳ ಅವಧಿ ನೀಡಬೇಕೆಂದು ಆರ್ಬಿಐಗೆ ಮನವಿ ಮಾಡಿವೆ ಎಂದು ತಿಳಿದುಬಂದಿದೆ.








