ಮಾಸ್ಕೋ: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ಮಧ್ಯೆ, ರಷ್ಯಾ ಅಮೆರಿಕಗೆ ಕಡು ಎಚ್ಚರಿಕೆ ನೀಡಿದ್ದು, ಇರಾನ್ ವಿರುದ್ಧ ಯಾವುದೇ ಮಿಲಿಟರಿ ಕ್ರಮ ಕೈಗೊಳ್ಳಬಾರದೆಂದು ಸೂಚಿಸಿದೆ.
ಇರಾನ್-ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಅಮೆರಿಕದ ನೇರ ಅಥವಾ ಪರೋಕ್ಷ ಮಿಲಿಟರಿ ಹಸ್ತಕ್ಷೇಪ ಸಾಧ್ಯವೆಂಬ ಊಹಾಪೋಹಗಳ ನಡುವೆ, ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಖರೋವಾ ಮಾತನಾಡಿದ್ದು, “ಈ ಪರಿಸ್ಥಿತಿಯಲ್ಲಿ ಯಾವುದೇ ಮಿಲಿಟರಿ ಚಟುವಟಿಕೆಗೆ ತಕ್ಷಣ ತಡೆ ನೀಡಬೇಕು. ಅಮೆರಿಕ ಈ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದು ಹೇಳಿದ್ದಾರೆ.
Contents
ಇತ್ತೀಚಿನ ಹಿನ್ನಲೆ:
- ಇಸ್ರೇಲ್ ಇತ್ತೀಚೆಗಷ್ಟೆ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು.
- ಇದಕ್ಕೆ ಪ್ರತಿಯಾಗಿ ಇರಾನ್ ನೂರಾರು ಕ್ಷಿಪಣಿ ಮತ್ತು ಡ್ರೋನ್ಗಳ ಮೂಲಕ ಪ್ರತಿದಾಳಿ ನಡೆಸಿತು.
- ಈ ಘಟನೆಗಳು ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿವೆ.
ರಷ್ಯಾ–ಇರಾನ್ ನ ಸಂಬಂಧ
- ರಷ್ಯಾ ಮತ್ತು ಇರಾನ್ ನಡುವಿನ ಸಂಬಂಧ ಬಹುಬಲಿಷ್ಠವಾಗಿದೆ.
- ಇತ್ತೀಚೆಗಷ್ಟೆ ಇಬ್ಬರೂ ಮಿಲಿಟರಿ ಸಹಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
- ಇರಾನ್ಗೆ ಈವರೆಗೆ ಯಾವುದೇ ನೇರ ಮಿಲಿಟರಿ ಬೆಂಬಲ ನೀಡದಿದ್ದರೂ, ರಷ್ಯಾ ಸಧ್ಧವಾಗಿದೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಇದನ್ನು ಓದಿ –ಏಕಕಾಲಕ್ಕೆ 11 ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಮಧ್ಯಸ್ಥಿಕೆಗೆ ರಷ್ಯ ಸಿದ್ಧ
ಈ ಬೆಳವಣಿಗೆಯ ಹಿನ್ನಲೆಯಲ್ಲಿ ರಷ್ಯಾ, ಈ ಬಿಕ್ಕಟ್ಟಿನ ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. “ಅಮೆರಿಕ ಅಥವಾ ಇಸ್ರೇಲ್ ಯಾವುದೇ ತುರ್ತು ಕ್ರಮ ಕೈಗೊಂಡರೆ, ಅದು ಪರಿಸ್ಥಿತಿಯನ್ನು ಮತ್ತಷ್ಟು ಉದ್ರೇಕಗೊಳಿಸಲಿದೆ” ಎಂಬುದಾಗಿ ರಷ್ಯಾ ಎಚ್ಚರಿಸಿದೆ.