ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನೂತನ ಉಪಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
ಪ್ರಸ್ತುತ ಉಪಗವರ್ನರ್ ರಾಜೇಶ್ವರ್ ರಾವ್ ಅವರ ಅವಧಿ ಅಕ್ಟೋಬರ್ 8ರಂದು ಮುಗಿಯಲಿದೆ. ಬಳಿಕ, ಅಕ್ಟೋಬರ್ 9ರಿಂದ ಶಿರೀಶ್ ಚಂದ್ರ ಮುರ್ಮು ನೂತನ ಉಪಗವರ್ನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಪ್ರಸ್ತುತ RBIನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
RBIನಲ್ಲಿ ಒಟ್ಟು ನಾಲ್ಕು ಉಪಗವರ್ನರ್‌ಗಳಿದ್ದಾರೆ. ಪ್ರತಿಯೊಬ್ಬರೂ ಹಣಕಾಸು ನೀತಿ, ಬ್ಯಾಂಕಿಂಗ್ ಮೇಲ್ವಿಚಾರಣೆ ಮತ್ತು ಹಣಕಾಸು ಮಾರುಕಟ್ಟೆಗಳ ನಿಯಂತ್ರಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.
ಶಿರೀಶ್ ಚಂದ್ರ ಮುರ್ಮು ಅವರು ಒಂದು ಅಥವಾ ಹೆಚ್ಚು ಖಾತೆಗಳ ನಿರ್ವಹಣೆ ವಹಿಸಿಕೊಳ್ಳುವ ನಿರೀಕ್ಷೆ ಇದೆ, ಆದರೆ ಖಾತೆಗಳ ಉಸ್ತುವಾರಿ ಕುರಿತು ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.ಇದನ್ನು ಓದಿ –ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ
ಈ ನೇಮಕಾತಿಗೆ ಸಂಪುಟದ ಅನುಮೋದನೆ ಲಭ್ಯವಾಗಿದ್ದು, ಶಿರೀಶ್ ಚಂದ್ರ ಮುರ್ಮು RBI ಉಪಗವರ್ನರ್ ಆಗಿ ಅಧಿಕೃತವಾಗಿ ನೇಮಕ ಹೊಂದಿದ್ದಾರೆ.








