By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ದಸರಾ ಅಥವಾ ನವರಾತ್ರಿ ಹಬ್ಬದ ಮಹತ್ವ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ದಸರಾ ಅಥವಾ ನವರಾತ್ರಿ ಹಬ್ಬದ ಮಹತ್ವ
Articles

ದಸರಾ ಅಥವಾ ನವರಾತ್ರಿ ಹಬ್ಬದ ಮಹತ್ವ

Team Varthaman
Last updated: October 2, 2025 10:53 AM
Team Varthaman
Published: October 2, 2025
Share
SHARE

ನವರಾತ್ರಿ ಹಬ್ಬ ಎಂದರೆ ಒಂಬ್ಬತ್ತು ದಿನಗಳು ನವ ವಿಧ ಭಕ್ತಿಯಲ್ಲಿ, ನವವಿಧ ಅಲಂಕಾರದಿಂದ ದೇವರು-ದೇವತೆಯರನ್ನು ಪೂಜಿಸುವ ನಮ್ಮ ನಾಡ ಹಬ್ಬ. ಮಾತೆ ದುರ್ಗಾದೇವಿಯನ್ನು ಹೆಚ್ಚು ಆರಾಧಿಸುವ ಹಬ್ಬ. ನಮ್ಮ ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷ ಗೌರವವಿದೆ.

ಆದರೆ ನವರಾತ್ರಿಯ ವಿಜಯದಶಮಿಯಂದು ಶಮೀ ವೃಕ್ಷವನ್ನು ಪೂಜಿಸುವರು. ಅದರ ಪತ್ರೆ ಅಥವಾ ಎಲೆಗಳನ್ನು ತಂದು ದೇವರಿಗೆ ಅರ್ಪಿಸಿ, ಪೂಜಿಸುವುದು ಪದ್ಧತಿ. ಅಂದಿನ ದಿನ ಅನೇಕ ಸಂಪ್ರದಾಯಗಳನ್ನು ಪಾಲಿಸಬೇಕು.

Join WhatsApp Group

ಮುಖ್ಯವಾಗಿ ಬನ್ನಿ ಎಲೆಯನ್ನು ಕೊಟ್ಟು ಬನ್ನಿ ಬಂಗಾರವಾಗಲಿ ಎಂದು ಹಾರೈಸಲಾಗುತ್ತದೆ. ನವರಾತ್ರಿಯ ೯ ದಿನಗಳ ಕಾಲ ದೇವಿಯನ್ನು ಪೂಜಿಸಲಾಗುತ್ತದೆ. ಇದರ ನಂತರ ೧೦ನೇ ದಿನದಂದು ಎಲ್ಲರೂ ವಿಜಯದಶಮಿ ಅಂದರೆ
ದಸರಾ ಹಬ್ಬವನ್ನು ಆಚರಿಸುತ್ತಾರೆ.

ಎಲ್ಲರ ಮನೆಮನೆಗಳಲ್ಲೂ ಘಟಸ್ಥಾಪನೆ ಅಂದರೆ ಅಖಂಡ ದೀಪ ದೇವರ ಮನೆಯಲ್ಲಿ ೯ದಿನಗಳು ಬೆಳಗುವಂತೆ ಅವರವರ ಪದ್ಧತಿಯಂತೆ ಬೆಳಗಿ ಪೂಜಿಸುವರು ಮತ್ತು ಗೊಂಬೆಗಳನ್ನು(ಮರದ ಗೊಂಬೆ), ಅನೇಕ ವಿಧ-ವಿಧ ಗೊಂಬೆಗಳನ್ನು ಇಟ್ಟು ನಿತ್ಯವೂ ಅಂದರೆ ನವರಾತ್ರಿದಿನಗಳಲ್ಲಿ ದಿನನಿತ್ಯ ತರ-ತರದ ಹೂಗಳಿಂದ ಅಲಂಕರಿಸಿ ಪೂಜಿಸಿ ವಿಧ-ವಿಧ ತಿಂಡಿಗಳನ್ನು ತಯಾರಿಸಿ ಮಕ್ಕಳಿಗೆ ಹಂಚುವರು.

ಈ ಸಂದರ್ಭದಲ್ಲಿ ತಾಯಿ ಸರಸ್ವತಿಯನ್ನು ಪೂಜಿಸುವರು. ನಮ್ಮ ಕರ್ನಾಟಕ ರಾಜ್ಯದಲ್ಲಿ ನಮ್ಮ ಹಿಂದೂಗಳಿಗೆ ಅತ್ಯಂತ ದೊಡ್ಡಹಬ್ಬ ಇದು ನಮ್ಮ ನಾಡ ಚರಿತೆಯ ಮೆರೆಸುವ-ನೆನಪಿಸುವ ಅತ್ಯಂತ ವೈಭವಯುತ ಒಂದು ಸಾಂಪ್ರಾದಾಯಿಕ, ಸಾಂಸ್ಕ್ರತಿಕ ವಿಜೃಂಭಣೆಯಿಂದ ನಡೆಯುವ ತಾಯಿ ಭುವನೇಶ್ವರಿ, ಜಗನ್ಮಾತೆ ಚಾಮುಂಡೇಶ್ವರಿಯನ್ನು ನಮ್ಮ ಮೈಸೂರು ರಾಜರ ಮನೆತನದವರು ಅಂಬಾರಿಯಲ್ಲಿ ಆ ತಾಯಿ ಚಾಮುಂಡೇಶ್ವರಿಯ ಉತ್ಸವದ ಮೂಲಕ ನೆರವೇರಿಸುವರು. ನಮ್ಮ ನಾಡಿನ ಹಿರಿಮೆ-ಗರಿಮೆ ಇಡೀ ವಿಶ್ವವೇ ಹೆಮ್ಮೆ ಪಡುವ ಹಾಗೆ ಆಚರಿಸುವ ನಮ್ಮ ಹೆಮ್ಮೆಯ ನಾಡಹಬ್ಬವೂ ಹೌದು! ನಮ್ಮ ಭೂವೈಕುಂಟ ಎನ್ನುವ ತಿರುಮಲದಲ್ಲಿ ಶ್ರೀನಿವಾಸನಿಗೆ ವಿಶೇಷವಾಹನಗಳ ಮೂಲಕ ಪ್ರತಿದಿನವೂ ಅಲಂಕರಿಸಿ(ಶೇಷ, ಗರುಡ, ಸರಸ್ವತಿ)ಹೀಗೆ ಹಲವು ಬಗೆಯ ಅಲಂಕರಣೆಯಿಂದ ಉತ್ಸವ ನೆರವೇರಿಸುವರು, ಇದರಲ್ಲಿ ಆ ಸ್ವಾಮಿಗೆ ಚಕ್ರಸ್ನಾನ ಸ್ವಾಮಿ ಪುಕ್ಷರಣಿಯಲ್ಲಿ ಮಾಡಿಸಿ, ಭಕ್ತರನ್ನು ಪುನೀತಗೊಳಿಸುವರು.

ನಮ್ಮ ಪುರಾಣಗಳಲ್ಲಿ ನವರಾತ್ರಿಯ ಹಬ್ಬಕ್ಕೆ ವಿಶೇಷತೆಯಿದೆ. ನವರಾತ್ರಿಯಲ್ಲಿ ತಾಯಿ ಚಾಮುಂಡೇಶ್ವರಿ/ ದುರ್ಗಾದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿ(ಆ ಒಂಬತ್ತು) ದಿನದರಾತ್ರಿ
ಆ ರಾತ್ರಿ-ಹಗಲು ಒಂದೊಂದು ದಿನ ಒಂದೊಂದು ಅವತಾರವೆತ್ತಿ ಹತ್ತನೇ ದಿನ ಆ ರಾಕ್ಷಸನನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ಹಾಗೆ ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ್ದು ವಿಜಯದಶಮಿಯ ದಿನವೆಂದು
ಪುರಾಣಗಳಲ್ಲಿ ಉಲ್ಲೇಖವಾಗಿದೆ. ದ್ವಾಪರಯುಗದಲ್ಲಿ ಮಹಾಭಾರತದಲ್ಲಿ ಪಾಂಡವರು ಒಂದು ವರ್ಷದ ಅಜ್ಞಾತವಾಸಕ್ಕೆ ತೆರಳುವಾಗ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಾರೆ. ಅಜ್ಞಾತವಾಸದಿಂದ ಮರಳಿದಾಗ ಅವರು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ನೋಡುತ್ತಾರೆ. ಯಾರೊಬ್ಬರೂ ಅದನ್ನು ಮುಟ್ಟಿರುವುದಿಲ್ಲ.

ಹೀಗಾಗಿ ತಮ್ಮ ಆಯುಧಗಳನ್ನು ಕಾಪಾಡಿದರ ಫಲವಾಗಿ ಕೌರವರ ಜೊತೆಗಿನ ಯುದ್ಧದಲ್ಲಿ ವಿಜಯ ಸಾಧಿಸುತ್ತಾರೆ. ಹೀಗಾಗಿ ವಿಜಯ ದಶಮಿಯ ದಿನ ಬನ್ನಿ ಪೂಜೆ ಮಾಡುತ್ತಾರೆ. ಅಂದಿನಿಂದ ಬನ್ನಿಯ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಬನ್ನಿಯನ್ನು ಬಂಗಾರ ಎನ್ನಲು ಕಾರಣ. ಬನ್ನಿ ಮರವೆಂದರೇ ಚಿನ್ನ, ಬಂಗಾರ ಎನ್ನುವ ನಂಬಿಕೆ ಮೂಡಿಬಂದಿದೆ. ಹೀಗೆ ದಸರಾ ಹಬ್ಬವು ಒಂದು ಸಂಭ್ರಮದಾಚರಣೆಯ ಹಬ್ಬವಾಗಿದೆ.

ಎಲ್ಲೆಲ್ಲೂ ಅತ್ಯಂತ ಸಂತೋಷ, ಸಂಭ್ರಮದ ಜೊತೆಗೆ ದೀಪಾಲಂಕಾರ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಆರಾಧನೆ ದುರ್ಗಾಹೋಮ, ಸಹಸ್ರನಾಮಾರ್ಚನೆ, ವಿಷ್ಣುಸಹಸ್ರನಾಮ ಪಠಣೆ, ದುರ್ಗಾನಮಸ್ಕಾರ, ಮಹಾನವಮಿ ಅಥವಾ ಆಯುಧಪೂಜೆ ದಿನ ತಮ್ಮ ತಮ್ಮ ವಾಹನ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ, ಆಯುಧಪೂಜೆಗೆ ಸಜ್ಜುಗೊಳಿಸುವರು, ಬೀದಿ-ಬೀದಿಗಳಲ್ಲಿ ದೀಪಾಲಂಕಾರ, ಮಾವಿನ ತೋರಣ, ಹಬ್ಬದ ವಿಶೇಷತೆಯ ಫಲಕಗಳು, ಅಂಗಡಿ ಬೀಡುಗಳು ವರ್ಣರಂಜಿತವಾಗಿರುವುದು.

ಆಯುಧ ಪೂಜೆ ದಿನ ಎಲ್ಲಾ ವಾಹನಗಳು, ವಸ್ತುಗಳು, ಆಯುಧಗಳು ಪೂಜಿಸಲ್ಪಟ್ಟು ಎಲ್ಲೆಲ್ಲೂ ರಂಗುರಂಗಿನ ವಾತಾವರಣ ಅದನ್ನು ಕಣ್ತುಂಭಿಸಿಕೊಂಡು, ಮೈ ರೋಮಾಂಚನದಂತಹ ಅನುಭವವೇ ಆಹಾ! ಎನ್ನುವಂತೆ ಇರುತ್ತದೆ. ದಸರಾ ಇದೊಂದು ಸಾಮಾಜಿಕ, ಸಾಂಪ್ರಾದಾಯಿಕ, ಸಾಂಸ್ಕೃತಿಕವಾದ ನಾಡ ಹಬ್ಬ. ವಿಜಯದಶಮಿ ಹೆಸರೇ ಸೂಚಿಸುವಂತೆ ಪೌರಾಣಿಕ ಹಿನ್ನೆಲೆ
ಹೊಂದಿರುವ ವಿಜಯದ ಸಂಕೇತದ ಹಬ್ಬ, ಕೆಟ್ಟದರಲ್ಲಿ ಒಂದೊಳ್ಳೆದು ಎಂಬಂತೆ, ವಿಜಯದ ಹಬ್ಬ. ಇನ್ನೂ ಈ ನವರಾತ್ರಿ ತಾಯಿ ನವ ಅವತಾರ ತಾಳಿ ತಾಯಿ ದುರ್ಗೆ ಈ ಭೂಲೋಕದ ವಿವಿಧ ರೂಪಗಳಿಂದ ಆರಾಧಿತಳಾಗಿ ಭಕ್ತರು ಬೇಡಿದಿಷ್ಟಾರ್ಥಗಳ
ನೀಡುತಾ ಆಶೀರ್ವದಿಸುವಳು. ಆಕೆಯು ತನ್ನ ನವದುರ್ಗೆಯರ ಅವತಾರಗಳ ಮಹತ್ವವನ್ನು ಇಡೀ ವಿಶ್ವಕ್ಕೆ ತಿಳಿಸಿದ್ದಾರೆ.

ನವಶಕ್ತಿ ರೂಪಗಳು ಮತ್ತು ಮಹತ್ವ:- ಮಹಾಶಕ್ತಿ ದುರ್ಗೆ, ಸರಸ್ವತಿ, ಲಕ್ಷ್ಮಿ, ಯರ ಸ್ವರೂಪಿಣಿ ಈ ಆದಿಶಕ್ತಿ ದೇವಿ ಭಾಗವತ ಸಪ್ತಶತಿಯಲ್ಲಿ ” ಯಾ ದೇವಿ ಸರ್ವಭೂತೇಶು ವಿಷ್ಣುಮಾಯೇತಿ ಶಬ್ಧಿತಾ ನಮಸ್ಥಸ್ಯೆೈ,ನಮಸ್ಥಸ್ಯೆೈ ನಮೋ ನಮಃ|| ಎಂದು
ಆರಾಧಿಸುವರು. ಇನ್ನು ಪುರಾಣದ ಪ್ರಕಾರ ದೇವಿ ಭಾಗವತ ಸಪ್ತಶತದ ಏಕಾದಶದಲ್ಲಿ ಹೇ ಜಗನ್ಮಾತೆ!! ಜಗದಲ್ಲಿ ಯಶೋದೆಯ ಮಗಳಾಗಿ ಶ್ರೀಕೃಷ್ಣನಿಗೆ ತಂಗಿಯಾಗಿ ಜನಿಸಿ ಮುಂದೆ ನಡೆಯುವ ದುಷ್ಠರ ಸಂಹಾರ ಮಾಡಿ ಶಿಷ್ಠರ ರಕ್ಷಣೆ ಮಾಡುವ ಮೂಲಕ ಭೂಲೋಕವ ರಕ್ಷಿಸು ಎಂದು ಭಗವಂತ ಶ್ರೀಹರಿಯು ತಿಳಿಸುತ್ತಾರೆ. ಆಗ ನವಶಕ್ತಿ ರೂಪಗಳಾದಂತಹ “ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತ, ಕಾಳರಾತ್ರಿ, ಕಾತ್ಯಾಯಿನಿ, ಮಹಾಗೌರಿ ಮತ್ತು ಸಿದ್ಧಿರಾತ್ರಿ”, ಎಂಬುದಾಗಿ
ನವವಿಧ ಭಕ್ತಿಯಿಂದ ಪೂಜಿಸಲ್ಪಡುವಳು. ಈ ನವವಿಧ ಶಕ್ತಿಯ ಆರಾಧನೆಯಿಂದ ಮಾನವನ ದೇಹ ನವದ್ವಾರಗಳಿಂದ ಕೂಡಿದ ಪಿಂಡಾಂಡವು ಪ್ರಕೃತಿಬದ್ಧತೆಯಿಂದ ಶುದ್ಧಿಗೊಳ್ಳುತ್ತದೆ. ವೈಜ್ಞಾನಿಕವಾಗಿ ಋತುಮಾನಕ್ಕೆ ಹೋಲಿಸಿ ನೋಡಿದರೆ, ಮಳೆಗಾಲ
ಮುಗಿದು, ಸೂರ್ಯರಷ್ಮಿಯ ಪ್ರಖರತೆ ಹೆಚ್ಚಾಗಿರುವಾಗ, ಪ್ರಕೃತಿಯ ಋತುಮಾನದಲ್ಲಿ ಸಮತೋಲನ ತಂದು, ರೋಗ-ರುಜಿನಗಳ, ಪ್ರಕೃತಿಯ ಅಸಮತೋಲನೆಯಿಂದಾಗುವ ತೊಂದರೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ದೇವಿ ಆರಾಧನೆ ಬಹುಮುಖ್ಯ.

ನಮ್ಮ ಇಡೀ ಭಾರತದೇಶವೇ ಅವರವರ ಅನುಷ್ಠಾನದಂತೆ ಆಚರಿಸುವರು. ಹೀಗೆ ಇಡೀ ಭಾರತಾದ್ಯಂತ ಅತ್ಯಂತ ವಿಜೃಂಭಣೆಯಿಂದ ಅವರವರ ಸಾಂಪ್ರಾದಾಯಿಕ ಅನುಷ್ಠಾನದಂತೆ ಆಚರಿಸುವರು.

ವೀಣಾ ರವಿಕುಮಾರ್.

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಅಭಯಪ್ರದಾಯಿನಿ ಕಾಲರಾತ್ರಿ ದೇವಿ
ಸೊಪ್ಪು ತರಕಾರಿ ಕೊಂಡು ಫೋನ್ ಪೇ ಮಾಡುವ‌ ಮುನ್ನ…!!
ಮೈಸೂರು ದಸರಾ 2025: ಇಂದು ಐದು ಆನೆಗಳ ಎರಡನೇ ಗಜಪಡೆ ಆಗಮನ
ಆಹಾರಕ್ಕೆ ರುಚಿ ಹಾಗೂ ವಿಶಿಷ್ಟ ಸುವಾಸನೆ ನೀಡುವ ಜಾಯಿಕಾಯಿ
ನಾಲಿಗೆಯೆಂಬ ಅಪಾಯಕಾರಿ ಆಯುಧ….!!
TAGGED:Dasara 2025DussehraKannada ArticleNavarathriNavratri
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruJobsKarnataka

KGB ಬ್ಯಾಂಕ್‌ನಲ್ಲಿ 1,425 ಹುದ್ದೆಗಳ ಭರ್ಜರಿ ಉದ್ಯೋಗಾವಕಾಶ

Team Varthaman
Team Varthaman
September 4, 2025
ಲೋಕಾಯುಕ್ತ ದಾಳಿ: ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ಅಕ್ರಮ ಆಸ್ತಿ ತನಿಖೆ
ಭಯೋತ್ಪಾದಕ ಬೆದರಿಕೆಯಿಂದ ಜಮ್ಮು-ಕಾಶ್ಮೀರದ 48 ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಆನ್‌ಲೈನ್ ಗೇಮಿಂಗ್ ಮಸೂದೆ: ನಿಯಮ ಉಲ್ಲಂಘನೆಗೆ 3 ವರ್ಷ ಜೈಲು, 1 ಕೋಟಿ ರೂ. ದಂಡ
ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ₹25,000 ದಂಡ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?