-ಪೋಷಕರಿಂದ ಗಂಭೀರ ಆರೋಪ
ಬೆಂಗಳೂರು: ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಮೂಲಕ ಪ್ರಖ್ಯಾತಿಯಾಗಿರುವ ಗಾಯಕಿ ಪೃಥ್ವಿ ಭಟ್ ಮನೆ ಬಿಟ್ಟು ಓಡಿಹೋಗಿ ಅಭಿಷೇಕ್ ಎಂಬ ಯುವಕನೊಂದಿಗೆ ದೀರ್ಘಕಾಲದ ಸ್ನೇಹಿತನಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿರುವ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಪೃಥ್ವಿಯ ಪೋಷಕರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪೃಥ್ವಿ ಭಟ್ ಮೂಲತಃ ಕಾಸರಗೋಡು ಜಿಲ್ಲೆಯವರಾಗಿದ್ದು, ಹಲವಾರು ಕನ್ನಡ ಸಿನಿಮಾಗಳಲ್ಲಿ ಹಾಗೂ ಸ್ಟೇಜ್ ಕಾರ್ಯಕ್ರಮಗಳಲ್ಲಿ ಗಾಯನ ಮಾಡಿದ್ದಾರೆ. ಆದರೆ ಮಾರ್ಚ್ 27ರಂದು ಪುಟ್ಟ ದೇವಾಲಯದಲ್ಲಿ ಪೃಥ್ವಿ ಮತ್ತು ಅಭಿಷೇಕ್ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪೋಷಕರ ಆಘಾತ ಮತ್ತು ಆರೋಪಗಳು:
ಪೃಥ್ವಿಯ ತಂದೆ ಹೇಳುವಂತೆ, ಮದುವೆಯ ದಿನವೇ ಅವರು ಅವಳನ್ನು ರೆಕಾರ್ಡಿಂಗ್ ಸ್ಟುಡಿಯೋಗೆ ಬಿಟ್ಟು ಬಂದಿದ್ದರು. ಮಧ್ಯಾಹ್ನದ ಹೊತ್ತಿಗೆ ಪೊಲೀಸರ ಕಾಲ್ ಬಂದಿದ್ದು, “ನಿಮ್ಮ ಮಗಳು ಪೃಥ್ವಿ ಭಟ್ ಅಭಿಷೇಕ್ ಎಂಬವರನ್ನು ಮದುವೆಯಾಗಿದ್ದಾರೆ. ಅವರು ನಿಮ್ಮ ಮನೆಗೆ ಬರುತ್ತಾರೆ ಎಂದು ಹೇಳಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿದು ತೀವ್ರ ಆಘಾತಗೊಂಡ ಪೋಷಕರು, “ಅವನನ್ನು ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದ ಮಗಳು ಈ ರೀತಿ ಮನೆ ಬಿಟ್ಟು ಹೋಗಿದ್ದಾಳೆ” ಎಂದು ಕೊಂಡಿದ್ದಾರೆ. ಜೊತೆಗೆ, “ಪೃಥ್ವಿಯ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ. ಇದರ ಹಿಂದೆ ಜೀ ಕನ್ನಡದ ಜ್ಯೂರಿ ನರಹರಿ ದೀಕ್ಷಿತ್ ಅವರ ಕೈವಾಡವಿದೆ” ಎಂಬ ಭಾರೀ ಆರೋಪವನ್ನು ಪೃಥ್ವಿಯ ತಂದೆ ಮಾಡಿದ್ದಾರೆ.ಇದನ್ನು ಓದಿ –ಜಮ್ಮು-ಕಾಶ್ಮೀರದಲ್ಲಿ ಭೀಕರ ಮಳೆ, ಪ್ರವಾಹ ಮತ್ತು ಭೂ ಕುಸಿತ
ಪೃಥ್ವಿ ಮದುವೆಯಾಗಿದ್ದರೂ ಪೋಷಕರೊಂದಿಗೆ ಸಕ್ರಿಯ ಸಂಪರ್ಕದಲ್ಲಿಲ್ಲ ಎಂಬುದನ್ನು ಅವರು ವ್ಯಕ್ತಪಡಿಸಿದ್ದಾರೆ. ಮದುವೆಯ ನಂತರ ಕೇವಲ ಎರಡು ಬಾರಿ “ತಪ್ಪಾಯ್ತು ಅಪ್ಪ, ಅಮ್ಮ” ಎಂಬ ಸಂದೇಶವಷ್ಟೇ ಬಂದಿದೆ. ಈ ಕುರಿತಾದ ಪೃಥ್ವಿಯ ತಂದೆಯ ಮಾತುಗಳ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.