-NIA ಶೋಧ ಕಾರ್ಯಾಚರಣೆ ತೀವ್ರಗೊಳಿಕೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದ ಸ್ಥಿತಿಯಲ್ಲಿ, ಎನ್‌ಐಎ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಮೂವರು ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ದಾಳಿಯ ನಂತರ ನಾಲ್ವರು ಉಗ್ರರ ರೇಖಾಚಿತ್ರಗಳನ್ನು ಸಾರ್ವಜನಿಕಪಡಿಸಲಾಗಿದ್ದು, ಇವರ ಬಂಧನಕ್ಕೆ ಬಹುಮಾನವೂ ಘೋಷಿಸಲಾಗಿದೆ. ಇದರಲ್ಲಿ ಇತ್ತೀಚೆಗೆ ಗುರುತಿಸಲಾಗಿರುವ ಮೂವರು ಭಯೋತ್ಪಾದಕರನ್ನು ಆಸೀಫ್, ಸುಲೇಮಾನ್ ಹಾಗೂ ಅಬು ಎಂದು ಗುರುತಿಸಲಾಗಿದೆ. ಈ ಕುರಿತು ಭದ್ರತಾ ಪಡೆಗಳು ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಈ ದಾಳಿ ಪೂರ್ವನಿಯೋಜಿತವಾಗಿತ್ತು. ಮಂಗಳವಾರ ಮಧ್ಯಾಹ್ನದ ವೇಳೆ ಪ್ರವಾಸಿಗರು ಬೈಸರನ್ ಕಣಿವೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ದಾಳಿಕೋರರು ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು. ಈ ಆಕ್ರಮಣದ ಪರಿಣಾಮ ಪರಿಸರದಲ್ಲಿ ಭೀತಿ ಸೃಷ್ಟಿಯಾಯಿತು ಹಾಗೂ ಜನರು ಜೀವ ರಕ್ಷಣೆಗಾಗಿ ಹಿತಾಹಿತವನ್ನೇ ಅರಿಯದೆ ಓಡಾಟ ಆರಂಭಿಸಿದರು.ಇದನ್ನು ಓದಿ –ಪಹಲ್ಗಾಮ್ ದಾಳಿಯ ಬೆನ್ನಲ್ಲೇ URIಯಲ್ಲಿ ಸೇನೆಯ ಪ್ರತಿದಾಳಿ: ಇಬ್ಬರು ಪಾಕ್ ಉಗ್ರರು ಹತ್ಯೆ
ಈ ಭೀಕರ ಘಟನೆಯ ನಂತರ ಭದ್ರತಾ ಪಡೆಗಳು ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದು, ಶಂಕಿತ ಉಗ್ರರ ನೆಲೆಗಳನ್ನು ಪತ್ತೆ ಹಚ್ಚಲು ಗುಪ್ತಚರ ಸಂಸ್ಥೆಗಳು ಎಲ್ಲಾ ದಿಕ್ಕುಗಳಿಂದ ತನಿಖೆ ನಡೆಸುತ್ತಿವೆ. ಈ ದಾಳಿಯ ಹಿಂದಿರುವ ಉದ್ದೇಶ, ಸಂಘಟನೆ ಹಾಗೂ ಸಂಪರ್ಕಗಳನ್ನು ಪತ್ತೆ ಹಚ್ಚುವುದು ಭದ್ರತಾ ಸಂಸ್ಥೆಗಳ ಮುಂದಿನ ಹಂತದ ಗುರಿಯಾಗಿರಲಿದೆ.