ನಾನು ಬಹುವಾಗಿ ಇಷ್ಟಪಡುವ ಕೆಲವೇ ರಾಜಕೀಯ ನಾಯಕರಲ್ಲಿ ಒಬ್ಬರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಕೇವಲ ರಾಜಕಾರಣಿ ಮಾತ್ರವಲ್ಲ, ಬದಲಿಗೆ ಅತ್ಯುತ್ತಮ ವಾಗ್ಮಿ ಹಾಗೂ ಕವಿ ಹೃದಯದ ವ್ಯಕ್ತಿ ಆಗಿದ್ದರು. ಸಂಧರ್ಭಕ್ಕನುಸಾರವಾಗಿ ಅಸ್ಖಲಿತವಾಗಿ ಅವರ ಬಾಯಿಂದ ಬರುತ್ತಿದ್ದ ಕವಿತ್ವದ ನುಡಿಮುತ್ತುಗಳನ್ನು ಕೇಳುವುದೇ ಚಂದ .
ಒಮ್ಮೆ ಹೀಗೆ ಕಾರ್ಯಕ್ರಮವೊಂದರಲ್ಲಿ ಖ್ಯಾತ ಗಾಯಕಿ ಲತಾಮಂಗೇಶ್ಕರ್ ರನ್ನು ವೇದಿಕೆ ಮೇಲೆ ನೋಡಿದ ಅಟಲ್ ಜಿ, ಅವರತ್ತ ತಿರುಗಿ ” ಲತಾಜೀ…ನೀವು ತಿರುಗಿದರೆ ನಾನು ” ಎಂದರಂತೆ ! ಅದಕ್ಕೆ ಆಶ್ಚರ್ಯಚಕಿತರಾದ ಲತಾ ಮಂಗೇಶ್ಕರ್ ಏನೊಂದೂ ಅರ್ಥವಾಗದೇ ” ಹಾಗೆಂದರೇನು ಸರ್ ” ಎಂದು ಕೇಳಿದರಂತೆ.
” ನೋಡಿ ನಿಮ್ಮ ಹೆಸರು LATA ಅಲ್ಲವೇ ? ಅದನ್ನು ತಿರುಗಿಸಿ ಬರೆದರೆ ನಾನು.. ಎಂದು ಹೇಳಿ ಅವರ ಮೊಗದಲ್ಲಿ ನಗು ಮೂಡಿಸಿದ್ದರಂತೆ.!

LATA ಉಲ್ಟಾ ಬರೆದರೆ ATAL ಆಗುವುದನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ಹಾಸ್ಯಭರಿತವಾಗಿ ಲತಾರಿಗೆ ವಾಜಪೇಯಿಯವರು ಹೇಳಿದ್ದರಂತೆ.

ಇದನ್ನು ತುಂಬಾ ಹಿಂದೆ ಯಾವುದೋ ಪತ್ರಿಕೆಯಲ್ಲಿ ಓದಿದ್ದ ನೆನಪು. ಅಟಲ್ ಬಿಹಾರಿ ವಾಜಪೇಯಿಯವರ ಅಸ್ಖಲಿತ ಭಾಷಣದ ಹಳೆಯ ತುಣುಕೊಂದನ್ನು ಹಾಗೇ ನೋಡುತ್ತಿದ್ದಾಗ ಈ ಘಟನೆ ನೆನಪಾಗಿತ್ತು.
ಸಾರ್ವಜನಿಕ ಜೀವನದ ಕೆಲವು ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಮರೆಯೋಕೆ ಸಾಧ್ಯವೇ ಇಲ್ಲದಷ್ಟು ಆಳವಾಗಿ ನಮ್ಮನ್ನು ಆವರಿಸಿಕೊಂಡು ಹಾಗೇ ಸುಮ್ಮನೇ ಹೀಗೆ ಬಂದು ಹಾಗೆ ತಂಗಾಳಿಯಂತೆ ನೆನಪಾಗುತ್ತಾರೆ.
ಅಷ್ಟೇ ಅಲ್ಲ…ಇವರಿನ್ನೂ ಇರಬೇಕಿತ್ತು ಎನಿಸುವಂಥಾ
ಮಹಾನ್ ವ್ಯಕ್ತಿತ್ವಗಳಲ್ಲಿ ವಾಜಪೇಯಿಯವರು ಒಬ್ಬರು.

ಹಿರಿಯೂರ್ ಪ್ರಕಾಶ್.