ಮೈಸೂರು: ಪತ್ನಿಯನ್ನು ಕೊಲೆ ಮಾಡಲು ಪತಿಯೇ ಸುಪಾರಿ ಕೊಟ್ಟಿದ್ದು, ಕೊಲೆ ಯತ್ನದಲ್ಲಿ ಗಾಯಗೊಂಡ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರಿನ ಬಿಎಂಶ್ರೀ ನಗರ ಬಡಾವಣೆ ನಿವಾಸಿ ನಾಗರತ್ನ ಗಾಯಗೊಂಡವರು. ಪತಿ ಮಹೇಶ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆಗಿದ್ದೇನು?
ಮಹೇಶ್ ಹಾಗೂ ನಾಗರತ್ನ 18 ವರ್ಷಗಳ ಹಿಂದೆ ಮದುವೆ ಆಗಿದ್ದರು. ಮಹೇಶ್ ಬಂಗಾರಪೇಟೆ ಪಾನೀಪುರಿ ಅಂಗಡಿ ಮಾಲೀಕನಾಗಿದ್ದು, ವಹಿವಾಟು ಚನ್ನಾಗಿಯೇ ಇತ್ತು. ಪತ್ನಿ ಜತೆಗೂಡಿ ಪಾನಿಪುರ ಮಾಡುವ ತರಬೇತಿ ನೀಡಿ ಫ್ರಾಂಚೈಸಿ ಕೂಡ ಕೊಡುತ್ತಿದ್ದ. ದಂಪತಿಗೆ ಮಕ್ಕಳು ಇರಲಿಲ್ಲ.
ಪ್ರಾರಂಭದಲ್ಲಿ ಅನ್ಯೋನ್ಯವಾಗಿಯೇ ಇದ್ದ ದಂಪತಿ ಇತ್ತೀಚೆಗೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಪತ್ನಿ ನಾಗರತ್ನ ಗಂಡನ ಸಂಪಾದನೆಯ ಹಣವನ್ನು ಬಡ್ಡಿಗೆ ಕೊಟ್ಟು ಲೇವಾದೇವಿ ವ್ಯವಹಾರ ಮಾಡುತ್ತಿದ್ದಳು. ದುಡ್ಡು ಕಾಸಿನ ವಿಚಾರದ ಬಗ್ಗೆ ಪ್ರಶ್ನಿಸಿದರೆ ಎಲ್ಲರ ಮುಂದೆಯೇ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಳು ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಮಹೇಶ್, ಫ್ರಾಂಚೈಸಿ ಪಡೆಯಲು ಬಂದಿದ್ದ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಭಾಸ್ಕರ್ ಹಾಗೂ ಅಭಿಷೇಕ್ ಎಂಬವರಿಗೆ ಪತ್ನಿಯನ್ನು ಕೊಲೆ ಮಾಡುವಂತೆ ಸುಪಾರಿ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ. ನಾಗರತ್ನ ಬಿಎಂಶ್ರೀ ನಗರದ ಮನೆಯಲ್ಲಿ ಒಬ್ಬಂಟಿಯಾಗಿ ಇದ್ದ ವೇಳೆ ಬಂದ ಆರೋಪಿಗಳಾದ ಅಭಿಷೇಕ್ ಹಾಗೂ ಭಾಸ್ಕರ್, ಏಕಾಏಕಿ ಹಲ್ಲೆ ನಡೆಸಿದ್ದರು. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಕೊಲೆ ಮಾಡಲು ಯೋಜನೆ ರೂಪಿಸಲಾಗಿತ್ತು. ಹೊಗೆ ತುಂಬಿಕೊಂಡ ಪರಿಣಾಮ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಿ ಗಾಯಗೊಂಡಿದ್ದ ನಾಗರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ



