By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಮೊಟ್ಟೆಗಳಲ್ಲಿ ‘ನೈಟ್ರೋಫ್ಯೂರಾನ್’ ಅವಶೇಷಗಳ ಶಂಕೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > New Delhi > ಮೊಟ್ಟೆಗಳಲ್ಲಿ ‘ನೈಟ್ರೋಫ್ಯೂರಾನ್’ ಅವಶೇಷಗಳ ಶಂಕೆ
New DelhiTrending

ಮೊಟ್ಟೆಗಳಲ್ಲಿ ‘ನೈಟ್ರೋಫ್ಯೂರಾನ್’ ಅವಶೇಷಗಳ ಶಂಕೆ

Team Varthaman
Last updated: December 17, 2025 11:23 AM
Team Varthaman
Published: December 17, 2025
Share
SHARE
  • ದೇಶಾದ್ಯಂತ ಮಾದರಿ ಪರೀಕ್ಷೆಗೆ ಎಫ್‌ಎಸ್‌ಎಸ್‌ಎಐ ಆದೇಶ

ನವದೆಹಲಿ: ಮೊಟ್ಟೆಗಳ ಗುಣಮಟ್ಟ ಮತ್ತು ಆಹಾರ ಸುರಕ್ಷತೆ ಕುರಿತು ಆತಂಕಕಾರಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೇಶಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವಂತೆ ತನ್ನ ಪ್ರಾದೇಶಿಕ ಕಚೇರಿಗಳಿಗೆ ನಿರ್ದೇಶನ ನೀಡಿದೆ.

ಮೊಟ್ಟೆಗಳಲ್ಲಿ ನಿಷೇಧಿತ ನೈಟ್ರೋಫ್ಯೂರಾನ್ ಪ್ರತಿಜೀವಕಗಳ ಅವಶೇಷಗಳಿರುವ ಸಾಧ್ಯತೆ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Join WhatsApp Group

ಇತ್ತೀಚೆಗೆ ಎಗ್ಗೋಜ್ ವಿತರಿಸಿದ ಕೆಲವು ಮೊಟ್ಟೆಗಳ ಗುಣಮಟ್ಟದ ಬಗ್ಗೆ ವಿವಾದ ಉಂಟಾದ ನಂತರ, ನೈಟ್ರೋಫ್ಯೂರಾನ್ ಗಳ ಅಕ್ರಮ ಬಳಕೆಯ ಶಂಕೆ ವ್ಯಕ್ತವಾಗಿತ್ತು. ನೈಟ್ರೋಫ್ಯೂರಾನ್ ಗಳು ಆಹಾರ ಉತ್ಪಾದಿಸುವ ಪ್ರಾಣಿಗಳಲ್ಲಿ ಬಳಸಲು ನಿಷೇಧಿತ ಪ್ರತಿಜೀವಕಗಳಾಗಿದ್ದು, ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವು ದೇಶಗಳಲ್ಲಿ ಇವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಅಕ್ರಮ ಬಳಕೆಯಿಂದಾಗಿ ಕೆಲವೊಮ್ಮೆ ಮೊಟ್ಟೆಗಳಲ್ಲಿ ಅವಶೇಷಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಎಎನ್‌ಐ ಮೂಲಗಳ ಪ್ರಕಾರ, ಬ್ರಾಂಡೆಡ್ ಹಾಗೂ ಬ್ರಾಂಡೆಡ್ ಅಲ್ಲದ ಮೊಟ್ಟೆಗಳ ಮಾದರಿಗಳನ್ನು ದೇಶದ ಹತ್ತು ಪ್ರಯೋಗಾಲಯಗಳಿಗೆ ಕಳುಹಿಸಿ ಪರೀಕ್ಷೆ ನಡೆಸುವಂತೆ ಎಫ್‌ಎಸ್‌ಎಸ್‌ಎಐ ಸೂಚನೆ ನೀಡಿದೆ. ಈ ಪರೀಕ್ಷೆಗಳ ಮೂಲಕ ನೈಟ್ರೋಫ್ಯೂರಾನ್ ಗಳ ಉಪಸ್ಥಿತಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಆರೋಗ್ಯ ತಜ್ಞರು ಈ ವಿಚಾರದ ಗಂಭೀರತೆಯನ್ನು ಎತ್ತಿ ತೋರಿಸಿದ್ದು, ಮಕ್ಕಳ ಆರೋಗ್ಯದ ಮೇಲೆ ಇದರ ಪರಿಣಾಮ ಹೆಚ್ಚು ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ. ಶಾಲಿಮಾರ್ ಬಾಗ್ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಮಕ್ಕಳ ವೈದ್ಯ ಡಾ. ವಿವೇಕ್ ಜೈನ್ ಮಾತನಾಡಿ, “ನೈಟ್ರೋಫ್ಯೂರಾನ್ ಕಲುಷಿತ ಮೊಟ್ಟೆಗಳ ಸೇವನೆಯು ವಿಷಕಾರಿ, ಕ್ಯಾನ್ಸರ್ ಕಾರಕ ಮತ್ತು ಜೀನೋಟಾಕ್ಸಿಕ್ ಪರಿಣಾಮಗಳಿಗೆ ಕಾರಣವಾಗಬಹುದು. ಮಕ್ಕಳ ಅಂಗಾಂಗಗಳು ಮತ್ತು ರೋಗನಿರೋಧಕ ವ್ಯವಸ್ಥೆ ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ ಅವರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ. ದೀರ್ಘಕಾಲ ಸೇವನೆಯಿಂದ ಯಕೃತ್ತಿನ ಹಾನಿ, ರೋಗನಿರೋಧಕ ಶಕ್ತಿಯ ಕುಸಿತ ಮತ್ತು ಬೆಳವಣಿಗೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ” ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ತಪಾಸಣೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ನಿಯಂತ್ರಿತ, ವಿಶ್ವಾಸಾರ್ಹ ಮೂಲಗಳಿಂದಲೇ ಮೊಟ್ಟೆಗಳನ್ನು ಖರೀದಿಸುವಂತೆ ಅವರು ಸಲಹೆ ನೀಡಿದರು.ಇದನ್ನು ಓದಿ –ಸುಳ್ಳು ಪ್ರಕರಣದ ನೆಪದಲ್ಲಿ ವಸೂಲಿ: ಪಿಎಸ್‌ಐ ಅಮಾನತು

ವಿವಾದಕ್ಕೆ ಪ್ರತಿಕ್ರಿಯಿಸಿದ ಎಗ್ಗೋಜ್ ಸಂಸ್ಥೆ, ತನ್ನ ಉತ್ಪನ್ನಗಳ ಸುರಕ್ಷತೆ ಬಗ್ಗೆ ಗ್ರಾಹಕರಿಗೆ ಭರವಸೆ ನೀಡಲು ಇತ್ತೀಚಿನ ಪ್ರಯೋಗಾಲಯ ವರದಿಗಳನ್ನು ಡಿಸೆಂಬರ್ 25ರ ದಿನಾಂಕದೊಂದಿಗೆ ತನ್ನ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಿದೆ. “ನಮ್ಮ ಗ್ರಾಹಕರ ಸುರಕ್ಷತೆ ಮತ್ತು ನಂಬಿಕೆಯೇ ನಮ್ಮ ಮೊದಲ ಆದ್ಯತೆ. ನಮ್ಮ ಫಾರ್ಮ್‌ಗಳು ಮತ್ತು ಪ್ರಕ್ರಿಯೆಗಳಲ್ಲಿ ಅತ್ಯುನ್ನತ ಮಾನದಂಡಗಳನ್ನು ನಾವು ಪಾಲಿಸುತ್ತಿದ್ದೇವೆ” ಎಂದು ಕಂಪನಿ ಸ್ಪಷ್ಟಪಡಿಸಿದೆ.

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳ
RTE ಅಡಿಯಲ್ಲಿ ವಿಶೇಷ ದಾಖಲಾತಿ ಆಂದೋಲನಕ್ಕೆ ಆದೇಶ
ಜಾತಿಗಣತಿ ವಿಚಾರದಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ
ನವರಾತ್ರಿಯ ಮಹಾಗೌರಿ
ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ ದುರಂತ – 9 ಭಕ್ತರ ದುರ್ಮರಣ
TAGGED:breakingnewsEgglatestnewsNitrofuranನೈಟ್ರೋಫ್ಯೂರಾನ್
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಜಗತ್ತಿನಲ್ಲಿರುವ ಎಲ್ಲಾ ವೃತ್ತಿಗಳನ್ನು ಸೃಷ್ಟಿಸುವ ವೃತ್ತಿ ಶಿಕ್ಷಕ

Team Varthaman
Team Varthaman
September 5, 2025
ರಾಜ್ಯದ ಹಲವೆಡೆ ವಾರಪೂರ್ತಿ ಮಳೆಯ ಮುನ್ಸೂಚನೆ
ಮಂಡ್ಯ : ಡೈರಿಯಲ್ಲಿ ಭ್ರಷ್ಟಾಚಾರ ಆರೋಪ
ಅತಿಥಿ ದೇವೋಭವ 
ಸರ್ವಪಕ್ಷ ಸಭೆ ಮಾಡಿ ಕದನ ವಿರಾಮ ಘೋಷಣೆ ಮಾಡಬೇಕಿತ್ತು: ಸಿಎಂ ಸಿದ್ದರಾಮಯ್ಯ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?