- ಅದ್ದೂರಿ ಮದುವೆ ಕೈಬಿಟ್ಟು, ಸರಳ ಮದುವೆ ಮಾಡಲು ಶಾಸಕ ಜಿ.ಟಿ.ದೇವೇಗೌಡ ಕರೆ
ಮೈಸೂರು, ಜ.17- ಜನಸಾಗರದ ಜಯಘೋಷಗಳ ನಡುವೆ ವೈಭವದ ರಥೋತ್ಸವ ಸಾಗುವ ಮೂಲಕ ನಂಜನಗೂಡು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಯ ಜಾತ್ರೆ ಮಹೋತ್ಸವ ಸಂಭ್ರಮ ಹೆಚ್ಚಿಸಿತು.
ಶನಿವಾರ ಬೆಳಿಗ್ಗೆ 11ಕ್ಕೆ ರಥೋತ್ಸವಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಲಕ್ಷಾಂತರ ಜನ ರಥೋತ್ಸವಕ್ಕೆ ಹಣ್ಣು ದವನ ಎಸೆದು ಪುನೀತರಾದರು.

ರಥೋತ್ಸವದ ಜಾತ್ರಾ ಮಹೋತ್ಸವದಲ್ಲಿ ಜಾನಪದ ಕಲಾತಂಡ, ನಾದಸ್ವರ, ವೀರಗಾಸೆ, ಡೊಳ್ಳು ಕುಣಿತ, ಜಾಂಜ್ ಮೇಳ,ಪೂಜಾ ಕುಣಿತ, ಗಾರುಡಿ ಗೊಂಬೆ , ತಮಟೆ ನಗಾರಿ, ಮ್ಯೂಸಿಕ್ ಡ್ರಮ್ಸ್, ಕೋಲಾಟ, ಮರಗಾಲು, ಕಂಸಾಳೆ, ದಾನಪಟ್ಟ, ವೀರಾಮಕ್ಕಳ, ತಮಟೆ, ಮಹಿಳಾ & ಪುರುಷರು ಚೆಂಡೆ, ದಾಳಪಟ, ಕರಡಿ ಮಜಲು, ಸುಗ್ಗಿ ಕುಣಿತ, ಗೊರವರ ಕುಣಿತ, ನಾಸಿಕ್ ಡ್ರಮ್ಸ್, ಹುಲಿವೇಶ, ಜಾನ್ ಪಥಕ್, ಸೇರಿ ಒಟ್ಟು 33 ತಂಡಗಳು ಸಾಂಸ್ಕೃತಿಕ ವೈಭವ ನಡೆಸಿಕೊಟ್ಟವು.
ಬಳಿಕ ನಡೆದ ಧಾರ್ಮಿಕ ವೇದಿಕೆ ಕಾರ್ಯಕ್ರಮವನ್ನು ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ ಸೇರಿ ಅನೇಕರು ಉದ್ಘಾಟಿಸಿದರು.

ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ ಪ್ರತಿವರ್ಷದಂತೆ ಪರಂಪರೆಯಿಂದ ಜಾತ್ರಾ ಮಹೋತ್ಸವ ನಡೆಸಿಕೊಂಡು ಬುದ್ಧ , ಅಂಬೇಡ್ಕರ್, ಬಸವಣ್ಣರ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು, ಎಲ್ಲರ ಸಮಾನ ಸಮಾನತೆಯನ್ನು ನಡೆಸಿಕೊಂಡು ಶ್ರೀ ಸುತ್ತೂರು ಮಠ ಸ್ವಾಮೀಜಿ ಬರುತ್ತಿರುವುದು ಸಂತಸದ ವಿಷಯ ಎಂದರು. ಈ ಮಠಕ್ಕೆ ಸೇವಕನಾಗಿ ಕೆಲಸ ಮಾಡುತ್ತೇನೆ. ಈ ಮಠ ಶ್ರೇಷ್ಠವಾದ ಮಹತ್ವ ಪಡೆದಿದೆ. ಸಮಾಜದ ಸುಧಾರಣೆ ತರಲು ದಾರಿದೀಪವಾಗಿದೆ ಎಂದು ಗುಣಗಾನ ಮಾಡಿದರು.
ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಸಾವಿರಾರು ವರ್ಷಗಳ ಪರಂಪರೆಯಿಂದ ನಡೆದುಕೊಂಡು ಶಿವರಾತ್ರಿಶ್ವರ ಸ್ವಾಮೀಜಿ ದೂರದೃಷ್ಟಿ ಪಾಲನೆ ಮತ್ತು ಬಸವಣ್ಣರ 12ನೇ ಶತಮಾನದ ವಿಚಾರಗಳನ್ನು ಹಂಚಿಕೊಂಡು ಬಂದಿರುವ ಸುತ್ತೂರು ಜಾತ್ರೆ ಮಹೋತ್ಸವ ಪ್ರಪಂಚವನ್ನು ಸೆಳೆದಿದೆ. ಹಳ್ಳಿಯಲ್ಲಿ ಜಾನಪದ ಹಿಂದಿನ ಪರಂಪರೆಯಿಂದ ಬಂದಹಂತಹ ಕಲೆಯ ನೆನಪುಗಳನ್ನು ಮಾಡುತ್ತಿರುವುದು ಶ್ರೀ ಸುತ್ತೂರು ಮಠವಾಗಿದೆ. ಶಿಕ್ಷಣ ಜೊತೆಗೆ ಆರೋಗ್ಯ ಒತ್ತು ಕೊಟ್ಟು ನಿರ್ಮಾಣ ಮಾಡಿಕೊಂಡು ಬರುತ್ತಿರುವ ಶ್ರೀ ಮಠ, ರೈತರಿಗೆ ಕೃಷಿಗೆ ಹೆಚ್ಚು ಹೊತ್ತು ಕೊಡಬೇಕೆಂದು ತಜ್ಞರನ್ನು ಕರೆಸಿ ರೈತರಿಗೆ ತರಬೇತಿ ಕೊಡುತ್ತಾರೆ. ರೈತರಿಗೆ ಕೃಷಿಯ ಹೆಚ್ಚು ಅರಿವು ಮೂಡಿಸುವ ಶ್ರೀ ಸುತ್ತೂರು ಮಠ ದಿಂದ ಮಾತ್ರ ಸಾಧ್ಯ, ಸುತ್ತೂರು ಮಠದಲ್ಲಿ ಮದುವೆ ಆದವರು ಪುಣ್ಯವಂತರು, ಈ ಪುಣ್ಯ ಕ್ಷೇತ್ರದಲ್ಲಿ ಸರಳವಾಗಿ ಮದುವೆಯಾದರೆ ಬದುಕನ್ನು ಕಟ್ಟಿಕೊಳ್ಳಬಹುದು. ತಲೆಮಾರಿನಿಂದ ಜಮೀನನ್ನು ಉಳಿಸಿಕೊಳ್ಳಬಹುದು. ಆದರೆ ಇತ್ತೀಚಿಗೆ ಮದುವೆ ಮಾಡುತ್ತೇನೆ ಅಂತ ತಮ್ಮ ಜಮೀನನ್ನು ಉಳಿಸಿಕೊಳ್ಳದೆ ಮಾರಾಟ ಮಾಡಿ ಅದ್ದೂರಿಯಾಗಿ ಮದುವೆ ಮಾಡುವ ಪರಿಸ್ಥಿತಿಗಳನ್ನು ನೋಡುತ್ತಿದ್ದೇನೆ. ಆದರೆ ನನ್ನ ಇಬ್ಬರ ಮಕ್ಕಳನ್ನು ಧರ್ಮಸ್ಥಳದಲ್ಲಿ ಸರಳವಾಗಿ ಮದುವೆ ಮಾಡಿದ್ದೇನೆ. ಜಮೀನು ಮಾರ ಬದಲು ತಮ್ಮ ಹೆಣ್ಣು ಮಕ್ಕಳಿಗೆ ಕೊಟ್ಟರೆ ಜಮೀನು ಉಳಿತಾಯವಾಗುತ್ತದೆ ಎಂದು ಜಾತ್ರೆಗೆ ಬಂದಂತಹ ಭಕ್ತರಿಗೆ ಕಿವಿಮಾತು ಹೇಳಿದರು.

ಮೈಸೂರು ಪ್ರಾದೇಶಿಕ ಆಯುಕ್ತರು ನಿತೇಶ್ ಪಾಟೀಲ್ ಮಾತನಾಡಿ, ಅನೇಕ ವೈಶಿಷ್ಟತೆ ಮೂಲ ಕಾರಣ, ಸುತ್ತೂರು ಸುತ್ತಿದರೆ ಕರ್ನಾಟಕದ ಅನೇಕ ವಿಚಾರಗಳು ಗೊತ್ತಾಗುವುದು, ಜಗತ್ತು ಪರಿಚಯ ಪಡೆದರೆ ಶ್ರೀ ಮಠಗಳಿಂದ ಮಾತ್ರ ಸಾಧ್ಯ, ಪರಂಪರೆ ಉಳಿಸಿಕೊಂಡು ಬರುತ್ತಿರುವ ಸಂಸ್ಥೆ ಸುತ್ತೂರು ಮಠ, ಸುತ್ತೂರುಮಠ ಶ್ರೀ ರಕ್ಷೆಯಾಗಿದೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ ಸೋಮಶೇಖರ್ ಮಾತನಾಡಿ ವೈಶಿಷ್ಟತೆ ಕ್ಷೇತ್ರ, ಧಾರ್ಮಿಕ ಕ್ಷೇತ್ರ . ಪರಂಪರೆ ನಡೆದುಕೊಂಡು ಬಂದಿರುವ ಸಮ್ಮೇಳನ ಭಜನಾಮೇಳ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ ಎಂದರು.ಇದನ್ನು ಓದಿ –ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ
ಕಾರ್ಯಕ್ರಮದಲ್ಲಿ ಶಿವನಂದ್, ಕುಮಾರ್ ರಾಜಶೇಖರ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.








