By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಮನೆ ಮನ ಬೆಳಗಿಸುವ ಹಬ್ಬ ಈ ದೀಪಾವಳಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಮನೆ ಮನ ಬೆಳಗಿಸುವ ಹಬ್ಬ ಈ ದೀಪಾವಳಿ
Articles

ಮನೆ ಮನ ಬೆಳಗಿಸುವ ಹಬ್ಬ ಈ ದೀಪಾವಳಿ

Team Varthaman
Last updated: October 21, 2025 11:32 AM
Team Varthaman
Published: October 21, 2025
Share
SHARE

ನಮ್ಮ ಭಾರತ ಸಂಪ್ರದಾಯಗಳ ನಾಡು. ಇತ್ತೀಚಿನ ದಿನಗಳಲ್ಲಿ ಹಳ್ಳಿಗಳನ್ನು ತೊರೆದು ಕೆಲಸವನ್ನರಸಿ ದೊಡ್ಡ ದೊಡ್ಡ ಪಟ್ಟಣಗಳನ್ನು ಸೇರಿರುವ ನಮ್ಮ ಯುವಕರು, ದೀಪಾವಳಿ ಹಬ್ಬದ ಮಹತ್ವವನ್ನು ಮರೆತು ಬಿಟ್ಟಿದ್ದಾರೆ. ಕೇವಲ ಆಡಂಬರಕ್ಕೆ ಸೀಮಿತವಾಗಿರುವ ಜನರು ಈ ಹಬ್ಬವನ್ನು ಅಗತ್ಯಕ್ಕೂ ಮೀರಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸುವುದನ್ನೇ ಕಾಣುತ್ತೇವೆ. ಆದರೆ ಅದರ ಹಿಂದಿನ ವಿಶೇಷತೆ ಮತ್ತು ಮಹತ್ವವನ್ನು ಕೇಳಿದಾಗ ಅದೆಷ್ಟೋ ಜನರು ತಡವರಿಸುತ್ತ ಹೇಳುವ ಉತ್ತರ ಒಂದೆಡೆ ಆದರೇ, ಬೆರಳೆಣಿಕೆಯಷ್ಟು ಜನರು ಅದರ ಬಗ್ಗೆ ಹೇಳುವುದು ಕಂಡು ಬರುತ್ತದೆ.

Join WhatsApp Group

ದೀಪಾವಳಿಯೆಂದರೆ ಕತ್ತಲನ್ನು ದೂರ ಮಾಡಿ ಬೆಳಕಿನೆಡೆಗೆ ಸಾಗುವ ಶುಭ ಸಂಕೇತವಾಗಿದೆ. ಈ ಹಬ್ಬವು ಭಾರತದಲ್ಲಿ ಹಿಂದೂ ಧರ್ಮದವರು ಮಾತ್ರವಲ್ಲದೇ ಸಿಖ್,ಬುದ್ಧ,ಜೈನರು ಆಚರಿಸುವ ಹಬ್ಬವಾಗಿದೆ. ಸಾಮಾನ್ಯವಾಗಿ ಎಲ್ಲ ಭಾರತೀಯರು ತಿಳಿದಂತೆ ಈ ಹಬ್ಬವು ರಾಮಾಯಣದ ಹಿನ್ನೆಲೆಯನ್ನು ಹೊಂದಿದೆ. ರಾಮ ಲಕ್ಷ್ಮಣರು ರಾವಣನನ್ನು ಸಂಹರಿಸಿ ಸೀತೆಯೊಂದಿಗೆ ಅಯೋಧ್ಯಕ್ಕೆ ಹಿಂದಿರುಗುವಾಗ ಅಲ್ಲಿನ ಜನರೆಲ್ಲರೂ ನಗರವನ್ನು ದೀಪಾಲಂಕಾರ ಮಾಡಿ ಅವರ ಸ್ವಾಗತವನ್ನು ಕೋರುವ ಪ್ರತೀತಿಯನ್ನು ಸೂಚಿಸುತ್ತದೆ.

ಇನ್ನೊಂದು ರೀತಿಯಲ್ಲಿ ಬಲಿಚಕ್ರವರ್ತಿಯು ಗರ್ವದಿಂದ ಸಾಗುವಂತಹ ಸಮಯದಲ್ಲಿ ಅವನ ಅಟ್ಟಹಾಸವನ್ನು ಅಡಗಿಸಲು ವಾಮನ ಅವತಾರದಲ್ಲಿ ವಿಷ್ಣುವು ಅವತರಿಸಿ ಬಲಿಚಕ್ರವರ್ತಿಯನ್ನು ಸಂಹರಿಸಿದ ದಿನವನ್ನು ಬಲಿಪಾಡ್ಯ ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ಮಾಡುವ ಪ್ರತೀತಿಯು ಇದೆ.

ಹೀಗೆ ಅನೇಕ ಹಿನ್ನೆಲೆ ಹೊಂದಿರುವ ಈ ಹಬ್ಬವು ಎಲ್ಲರ ಮನೆ ಮನಗಳಲ್ಲಿ ಹೊಸ ಹುಮ್ಮಸ್ಸು ಉತ್ಸಾಹದೊಂದಿಗೆ ಉತ್ಸವದ ಸಂಭ್ರಮವನ್ನು ಹಬ್ಬದ ಎರಡು ಮೂರು ದಿನಗಳ ಮುಂಚೆಯೇ ತನ್ನೊಟ್ಟಿಗೆ ಹೊತ್ತು ತರುತ್ತದೆ. ಹಬ್ಬಕ್ಕೆ ಎಂದೇ ಕುಟುಂಬ ಸದಸ್ಯರೆಲ್ಲರೂ ಕೂಡಿಕೊಂಡು ತರತರಹದ ಉಡುಗೆ ಖರೀದಿ ಮಾಡುವುದು. ಮನೆಯ ಅಲಂಕಾರಕ್ಕೆ ಬಣ್ಣ ಬಣ್ಣದ ದೀಪಾಲಂಕಾರಕಗಳು, ವಿದ್ಯುತ ದೀಪಗಳು ಒಂದೆಡೆಯಾದರೆ ತರತರಹದ ತಿಂಡಿ ತಿನಿಸುಗಳನ್ನು ತಯಾರಿ ಮಾಡುವುದು ಮತ್ತೊಂದೆಡೆ.

ಮನೆಯ ಅಕ್ಕಪಕ್ಕದವರೆಲ್ಲರೂ ಸೇರಿ ಚಕ್ಕುಲಿ,ಕೊಡಬೇಳೆ, ಕಜ್ಜಾಯ ಹಾಗೂ ಇನ್ನಿತರ ಸಿಹಿ ತಿನಿಸುಗಳನ್ನು ತಯಾರಿ ಮಾಡುವ ಸುಂದರ ಅನುಭವಗಳನ್ನು ತರುವ ಹಬ್ಬ ಇದಾಗಿದೆ. ಈ ಹಬ್ಬವು ರಾತ್ರಿ ವೇಳೆ ರಂಗು ರಂಗಿನ ದೀಪಾಲಂಕಾರ ಮಾಡುವಲ್ಲಿ ಹಣತೆಯನ್ನು ಬಳಸುವುದು ವಿಶೇಷ ಅದರೊಂದಿಗೆ ನವನವೀನ ಸಿಡಿಮದ್ದು ಮತ್ತೊಂದೆಡೆ. ಹಿರಿಯರ ಆಶೀರ್ವಾದ ಅವರ ಮಾರ್ಗದರ್ಶನದಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಈ ಹಬ್ಬವು ಎದುರಲ್ಲಿ ಬರುವ ಸಂಕಷ್ಟವನ್ನು ದೂರಮಾಡಿ ಪ್ರಗತಿಯೆಡೆಗೆ ಸಾಗುವ ಸಂಕೇತವನ್ನು ತಿಳಿಸುತ್ತದೆ. ಕೊನೆಯಲ್ಲಿ ಎಲ್ಲರೂ ಸುರಕ್ಷಿತವಾಗಿ ಈ ಹಬ್ಬವನ್ನು ಸಂಪ್ರದಾಯಬದ್ದವಾಗಿ ಆಚರಣೆ ಮಾಡೋಣ ಎನ್ನುತ್ತಾ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.

ಆನಂದ ಜಿ.ಎನ್.
ದಾಂಡೇಲಿ.(ಉ.ಕ.)

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
ಆಚಾರ್ಯಶಂಕರರೆಂಬ ಭಾಷ್ಯಕೇಸರಿ
ವಿಟಮಿನ್ ಬಿ 12 ಕೊರತೆಯಾದ್ರೆ ಹಲವು ಆರೋಗ್ಯ ತಾಪತ್ರಯ
ಮೂಲಂಗಿಯೆಂದು ಮೂಗು ಮುರಿಯದಿರಿ
ಪವಿತ್ರ ಪುರಿ: ಜಗತ್ತಿಗೆ ಜಗನ್ನಾಥನ ದರ್ಶನ
ಕರುಣೆಯ ವಾರಿಧಿ ನಮ್ಮ ಗುರುನಾಥ
TAGGED:deepavalidiwali 2025Kannada Articleದೀಪಾವಳಿಹಬ್ಬ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Main NewsNationalTrending

UPSC ಫಲಿತಾಂಶ 2025 ಪ್ರಕಟ: ಶಕ್ತಿ ದುಬೆಗೆ ಮೊದಲ ಸ್ಥಾನ

Team Varthaman
Team Varthaman
April 22, 2025
ಅಮರನಾಥ ಯಾತ್ರೆ ಮಾರ್ಗಗಳಿಗೆ ಹಾರಾಟ ನಿಷೇಧ
ಕಾಲ್ತುಳಿತ ದುರಂತ: RCB ಮತ್ತು KSCA ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ತೀರ್ಮಾನ
ಮೈಸೂರು: ಹೈಟೆಕ್ ವೇಶ್ಯಾವಾಟಿಕೆ ದಂಧೆ ಬಹಿರಂಗ
4.9 ಲಕ್ಷ BPL ಕಾರ್ಡ್‌ಗಳು ರದ್ದು – ದಂಡ ವಿಧಿಸಲು ಆಹಾರ ಇಲಾಖೆ ಸಜ್ಜು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?