By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    “ಈ ಸಮಯ ಕಳೆದು ಹೋಗುತ್ತದೆ”
    March 29, 2026
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
    ರಾಮ ನಾಮ ಜಪದ ಮಹಿಮೆ
    March 27, 2026
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
  • Sports
  • National
  • International
  • Crime
Reading: “ಈ ಸಮಯ ಕಳೆದು ಹೋಗುತ್ತದೆ”
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > “ಈ ಸಮಯ ಕಳೆದು ಹೋಗುತ್ತದೆ”
Articles

“ಈ ಸಮಯ ಕಳೆದು ಹೋಗುತ್ತದೆ”

Team Varthaman
Last updated: March 29, 2026 10:25 AM
Team Varthaman
Published: March 29, 2026
Share
SHARE

ಸಮಯವೆಂಬುದು ನಿಲ್ಲದ ನದಿ. ಅದು ಯಾವಾಗಲೂ ಹರಿಯುತ್ತಲೇ ಇರುತ್ತದೆ. ನಾವು ಸಂತೋಷದಲ್ಲಿರಲಿ, ದುಃಖದಲ್ಲಿರಲಿ, ಯಶಸ್ಸಿನ ಶಿಖರದಲ್ಲಿರಲಿ ಅಥವಾ ಸೋಲಿನ ತಳದಲ್ಲಿರಲಿ – ಸಮಯ ತನ್ನ ದಾರಿಯಲ್ಲಿ ಸಾಗುತ್ತಲೇ ಇರುತ್ತದೆ. ಈ ಒಂದು ವಾಕ್ಯ ಜೀವನದ ಬದಲಾವಣೆ, ಸಹನೆ, ಮತ್ತು ನಿರಂತರ ಪ್ರಯತ್ನದ ಮಹತ್ವವನ್ನು ನಮಗೆ ಬೋಧಿಸುತ್ತದೆ.

Join WhatsApp Group

ನಮ್ಮ ಜೀವನದಲ್ಲಿ ಅನೇಕ ಕ್ಷಣಗಳು ಬರುತ್ತವೆ. ಕೆಲವೊಮ್ಮೆ ನಾವು ಅಪಾರ ಸಂತೋಷವನ್ನು ಅನುಭವಿಸುತ್ತೇವೆ. ಆ ಸಮಯದಲ್ಲಿ ನಮಗೆ ಅದು ಎಂದಿಗೂ ಮುಗಿಯಬಾರದೆಂದು ಅನಿಸುತ್ತದೆ. ಆದರೆ ನಿಜವೆಂದರೆ, ಆ ಸಂತೋಷದ ಕ್ಷಣವೂ ಕಳೆದು ಹೋಗುತ್ತದೆ. ಇದೇ ರೀತಿ, ದುಃಖದ ಸಮಯದಲ್ಲಿ ನಾವು ನಿರಾಶೆಯಾಗುತ್ತೇವೆ, ನಮ್ಮ ಜೀವನವೇ ಕತ್ತಲೆಯಾಗಿದೆ ಎಂದು ಭಾವಿಸುತ್ತೇವೆ. ಆದರೆ ಈ ಮಾತು ನಮಗೆ ಧೈರ್ಯ ನೀಡುತ್ತದೆ – “ಈ ಸಮಯವೂ ಕಳೆದು ಹೋಗುತ್ತದೆ”.

ಸಮಯದ ಮಹತ್ವವನ್ನು ಅರಿತವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಅವರು ಪ್ರತಿಯೊಂದು ಕ್ಷಣವನ್ನೂ ಉಪಯೋಗಿಸಿಕೊಳ್ಳುತ್ತಾರೆ. ಏಕೆಂದರೆ ಒಮ್ಮೆ ಕಳೆದುಹೋದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಹಣವನ್ನು, ಆಸ್ತಿ ಸಂಪತ್ತನ್ನು ಮತ್ತೆ ಗಳಿಸಬಹುದು, ಆದರೆ ಸಮಯವನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಮಯವನ್ನು ಗೌರವಿಸಬೇಕು.

ಇದೇ ವೇಳೆ, ಈ ಮಾತು ನಮಗೆ ಅಹಂಕಾರವನ್ನು ಬಿಡುವಂತೆ ಮಾಡುತ್ತದೆ. ನಾವು ಯಶಸ್ಸಿನ ಶಿಖರದಲ್ಲಿ ಇದ್ದಾಗ, “ಈ ಸಮಯ ಕಳೆದು ಹೋಗುತ್ತದೆ” ಎಂದು ನೆನಪಿಸಿಕೊಂಡರೆ, ನಾವು ವಿನಯವನ್ನು ಕಾಪಾಡಿಕೊಳ್ಳಬಹುದು. ಏಕೆಂದರೆ ಯಾವುದೇ ಸ್ಥಾನ ಶಾಶ್ವತವಲ್ಲ. ಇಂದು ಇದ್ದ ಸ್ಥಾನ ನಾಳೆ ಇರದಿರಬಹುದು. ಆದ್ದರಿಂದ ನಾವು ಸದಾ ಸರಳತೆ ಮತ್ತು ವಿನಯದಿಂದ ಬದುಕಬೇಕು.

ಸಮಸ್ಯೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ಆ ಸಮಸ್ಯೆಗಳು ನಮ್ಮನ್ನು ಕುಗ್ಗಿಸುತ್ತವೆ. ಆದರೆ ಈ ಮಾತು ನಮಗೆ ಪ್ರೇರಣೆ ನೀಡುತ್ತದೆ – “ಈ ಕಷ್ಟವೂ ಶಾಶ್ವತವಲ್ಲ”. ಇದರಿಂದ ನಾವು ಧೈರ್ಯವಾಗಿ ಮುಂದೆ ಸಾಗಲು ಸಾಧ್ಯವಾಗುತ್ತದೆ. ಕಷ್ಟಗಳನ್ನು ತಾತ್ಕಾಲಿಕವಾಗಿ ನೋಡಿ, ನಾವು ನಮ್ಮ ಗುರಿಯ ಕಡೆಗೆ ಪ್ರಯತ್ನಿಸಬೇಕು.

ಸಮಯ ನಮ್ಮ ಗುರು ಕೂಡ ಆಗಿದೆ. ಅದು ನಮಗೆ ಪಾಠಗಳನ್ನು ಕಲಿಸುತ್ತದೆ. ಸಂತೋಷದ ಸಮಯದಲ್ಲಿ ನಾವು ಕೃತಜ್ಞತೆಯನ್ನು ಕಲಿಯುತ್ತೇವೆ. ದುಃಖದ ಸಮಯದಲ್ಲಿ ಸಹನೆ ಮತ್ತು ಧೈರ್ಯವನ್ನು ಕಲಿಯುತ್ತೇವೆ. ಪ್ರತಿಯೊಂದು ಕ್ಷಣವೂ ನಮ್ಮ ಜೀವನವನ್ನು ರೂಪಿಸುತ್ತದೆ. ಆದ್ದರಿಂದ ನಾವು ಪ್ರತಿಯೊಂದು ಅನುಭವದಿಂದ ಏನಾದರೂ ಕಲಿಯಬೇಕು.

ಇಂದಿನ ಯುವಕರಾದ ನಾವು ಸಮಯವನ್ನು ವ್ಯರ್ಥ ಮಾಡುವ ಪ್ರವೃತ್ತಿಯನ್ನು ಹೊಂದಿದ್ದೇವೆ. ಸಾಮಾಜಿಕ ಜಾಲತಾಣಗಳು, ಅನಗತ್ಯ ವ್ಯಸನಗಳು ಮುಂತಾದ ಬೇಡದ ಕಾರ್ಯಗಳು ನಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದೇವೆ. ಆದರೆ ನಾವೆಲ್ಲ ಈ ಸತ್ಯವನ್ನು ಅರಿಯಬೇಕು – “ಈ ಸಮಯ ಕಳೆದು ಹೋಗುತ್ತದೆ”.
ಈ ವಯಸ್ಸಿನಲ್ಲಿ ಕಳೆದುಹೋದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನಾವೆಲ್ಲ ನಮ್ಮ ಗುರಿ ಸಾಧನೆಗೆ ಸಮಯವನ್ನು ಸರಿಯಾಗಿ ಬಳಸಬೇಕು.

ಸಮಯದ ಬೆಲೆ ಅರಿತವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಅವರು ತಮ್ಮ ದಿನಚರಿಯನ್ನು ಸರಿಯಾಗಿ ಯೋಜಿಸುತ್ತಾರೆ. ಅವರು ಸಮಯಕ್ಕೆ ಮಹತ್ವ ನೀಡಿ, ಪ್ರತಿಯೊಂದು ಕ್ಷಣವನ್ನೂ ಫಲಪ್ರದವಾಗಿಸುತ್ತಾರೆ. ಇಂತಹವರು ಮಾತ್ರ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ಸಮಯವೂ ಬಹುಮುಖ್ಯ. ನಾವು ಪ್ರೀತಿಸುವ ಜನರೊಂದಿಗೆ ಕಳೆದ ಕ್ಷಣಗಳು ಮತ್ತೆ ಮರಳಿ ಬರುವುದಿಲ್ಲ. ಆದ್ದರಿಂದ ನಾವು ಅವರೊಂದಿಗೆ ಸಮಯ ಕಳೆಯಬೇಕು. ಏಕೆಂದರೆ ಜೀವನದ ಕೊನೆಯಲ್ಲಿ ನಾವು ಸಂಗ್ರಹಿಸಿದ ಸಂಪತ್ತಿಗಿಂತ, ನಮ್ಮ ಸಂಬಂಧಗಳೇ ಮುಖ್ಯವಾಗುತ್ತವೆ.

“ಈ ಸಮಯ ಕಳೆದು ಹೋಗುತ್ತದೆ” ಎಂಬುದು ಕೇವಲ ಒಂದು ವಾಕ್ಯವಲ್ಲ, ಅದು ಜೀವನದ ದಾರಿದೀಪ. ಅದು ನಮಗೆ ಸಮತೋಲನವನ್ನು ಕಲಿಸುತ್ತದೆ. ಸಂತೋಷದಲ್ಲೂ ಅತಿಯಾಗಿ ತೇಲಬಾರದು, ದುಃಖದಲ್ಲೂ ಮುಳುಗಬಾರದು. ಎಲ್ಲವೂ ತಾತ್ಕಾಲಿಕವೆಂದು ಅರಿತು, ನಾವು ಶಾಂತ ಮನಸ್ಸಿನಿಂದ ಬದುಕಬೇಕು.

ಕೊನೆಯಲ್ಲಿ, ಸಮಯವೇ ಜೀವನ. ಅದನ್ನು ಗೌರವಿಸಿ, ಅದನ್ನು ಸರಿಯಾಗಿ ಬಳಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಂದು ಕ್ಷಣವೂ ಅಮೂಲ್ಯ. ಅದನ್ನು ವ್ಯರ್ಥ ಮಾಡದೆ, ನಾವು ನಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸಬೇಕು. ಏಕೆಂದರೆ “ಈ ಸಮಯ ಕಳೆದು ಹೋಗುತ್ತದೆ”.

ಪ್ರಶಾಂತ್ ಎಂ. ಕಂಬಳಿ
ಎಸ್.ಸಿ.ಎಸ್.ಜಿ ಮಹಾವಿದ್ಯಾಲಯ ಲಕ್ಷ್ಮೇಶ್ವರ

  • “ಈ ಸಮಯ ಕಳೆದು ಹೋಗುತ್ತದೆ”
    by Team Varthaman
  • ಮೈಸೂರಿನಲ್ಲಿ ಡ್ರಗ್ಸ್ ದಾಳಿ: 25 ಕೆಜಿ ಸಿಂಥೆಟಿಕ್ ವಶ
    by Team Varthaman
  • ಬೆಂ–ತಿರುಪತಿ ಮಾರ್ಗದಲ್ಲಿ ಭೀಕರ ಅಪಘಾತ: ಮೂವರ ದುರ್ಮರಣ
    by Team Varthaman
  • ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    by Team Varthaman
  • ಜನರ ಜೀವಕ್ಕಿಂತ VIP ಟಿಕೆಟ್‌ಗಳೇ ಮುಖ್ಯವೇ? ನಿಖಿಲ್ ಆಕ್ರೋಶ
    by Team Varthaman
ಅಭಿಮಾನದ ಪೊರೆ ಕಣ್ಣಿಗೆ ಕಟ್ಟಿದಾಗ……‌‌!
ಬೂದು ಕುಂಬಳಕಾಯಿನಲ್ಲಿವೆ ಹತ್ತಾರು ಆರೋಗ್ಯ ಲಾಭ
ನಾಗರ ಚೌತಿ ಮತ್ತು ಪಂಚಮಿ
ವೇದ ಉಪನಿಷತ್ತು ಪುರಾಣಗಳಲ್ಲಿ ದೀಪಾವಳಿ 
ಹೆಣ್ಣು ಮಕ್ಕಳ ವ್ಯಥೆ
TAGGED:ArticletimeTime Table
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrending

ಜಿ.ಬಿ.ಎ ಚುನಾವಣೆ : ಜೂ.30ರೊಳಗೆ ನಡೆಸಲು ಸುಪ್ರೀಂ ಆದೇಶ

Team Varthaman
Team Varthaman
January 12, 2026
ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು
“ಅಪ್ಪ” ನೆಂಬ ಆಸರೆ ಇಲ್ಲದ ಬದುಕು!!
ತಿರುಪತಿ ಹುಂಡಿ ಹಣ ಲೂಟಿ: 100 ಕೋಟಿಗೂ ಅಧಿಕ ಮೊತ್ತ ಕಳ್ಳತನ, CCTVಯಲ್ಲಿ ಸೆರೆ
ಆತ್ಮಹತ್ಯೆ …. ಆಯ್ಕೆಯೇ ಅಲ್ಲ.
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?