By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಮೂರು ದಿನಗಳ ದೇಸಿ ಎಣ್ಣೆ ಮೇಳಕ್ಕೆ ಚಾಲನೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಮೂರು ದಿನಗಳ ದೇಸಿ ಎಣ್ಣೆ ಮೇಳಕ್ಕೆ ಚಾಲನೆ
KarnatakaMysoreTrending

ಮೂರು ದಿನಗಳ ದೇಸಿ ಎಣ್ಣೆ ಮೇಳಕ್ಕೆ ಚಾಲನೆ

Team Varthaman
Last updated: January 9, 2026 6:21 PM
Team Varthaman
Published: January 9, 2026
Share
SHARE

ಮೈಸೂರು: ಸಹಜ ಸಮೃದ್ಧ ಮತ್ತು  ದೇಸಿರಿ ನ್ಯಾಚುರಲ್ಸ್ ಆಶ್ರಯದಲ್ಲಿ ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ‘ದೇಸಿ ಎಣ್ಣೆ ಮೇಳ’ಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಎತ್ತಿನ ಗಾಣ ಗೋವಿನೊಂದಿಗೆ ಸುತ್ತು ಹಾಕಿ ವಿಭಿನ್ನವಾಗಿ ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು, ಸಾಂಪ್ರದಾಯಿಕವಾಗಿ ಉತ್ಪಾದನೆಯಾಗುತ್ತಿದ್ದ ದೇಸಿ ಗಾಣದ ಎಣ್ಣೆ ನಮ್ಮ ಹಿರಿಯರ ಆರೋಗ್ಯವನ್ನು ಕಾಪಾಡಿದ್ದವು. ಗ್ರಾಹಕರಿಗೆ ಇದರ ಮಹತ್ವ ತಿಳಿಸಲು, ಗಾಣದ ಎಣ್ಣೆಯಲ್ಲಿರುವ  ಪೋಷಕಾಂಶಗಳ ಬಗ್ಗೆ ಅಧ್ಯಯನ ಮಾಡಿ, ಅದರ ಪ್ರಯೋಜನಗಳನ್ನು ಗ್ರಾಹಕರಿಗೆ ತಿಳಿಸುವಂತೆ ಅವರು ಕೇಂದ್ರೀಯ ಆಹಾರ ತಂತ್ರಜ್ಣಾನ ಸಂಶೋಧನಾಲಯವನ್ನು ಕೋರಿದರು.

Join WhatsApp Group


ಇವತ್ತಿನ ಜೀವನ ಶೈಲಿಯಲ್ಲಿ ಆಹಾರ ಎಲ್ಲರಿಗೂ ಸಿತಿದೆ. ಆದರೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆರ್ಥಿಕತೆ ಸಾಧಿಸುವ ಭರದಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಂಪ್ರದಾಯಿಕ ಆಹಾರಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಗಳಿಸಿಕೊಳ್ಳಬೇಕಾಗಿದೆ. ಗಾಣದ ಎಣ್ಣೆ ಬಳಕೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬೇಕು” ಎಂದರು.


ದೇಸಿ ಎಣ್ಣೆ ಮೇಳವನ್ನು ಸಾನಿಧ್ಯವಹಿಸಿದ್ದ ಶ್ರೀ ಮಂಟೇಸ್ವಾಮಿ ಮಠ ಮತ್ತು ಶ್ರೀ  ಕಪ್ಪಡಿ ಕ್ಷೇತ್ರದ ಮಠಾಧಿಪತಿ ಶ್ರೀಕಂಠ ಸಿದ್ಧಲಿಂಗ ರಾಜೇ ಅರಸ್ ಮಾತನಾಡಿ “ ಗಾಣದ ಎಣ್ಣೆಗಳು ಸ್ಥಳೀಯ ಆಹಾರ ಸಂಸ್ಕೃತಿಗೆ ಪೂರಕವಾಗಿವೆ. ಇವುಗಳ ಬಳಕೆಯಿಂದ ರೈತರ ಜೀವನ  ಮಟ್ಟ ಸುಧಾರಿಸುತ್ತದೆ, ಸ್ಥಳೀಯರಿಗೆ ಉದ್ಯೋಗ ಲಭಿಸುತ್ತದೆ. ದೇಸಿರಿ ನ್ಯಾಚುರಲ್ಸ್ ಗಾಣದ ಗುಣಮಟ್ಟದ ಎಣ್ಣೆಗಳನ್ನು ಉತ್ಪಾದಿಸಿ , ಗ್ರಾಹರಿಗೆ ಕೊಡುವ ಕೆಲಸ ಮಾಡುತ್ತಿರುವುದು ಶ್ಳಾಘನೀಯ” ಎಂದರು.


ಸಿಎಫ್ ಟಿ ಆರ್ ಐ ನಿರ್ದೇಶಕರಾದ ಡಾ.ಗಿರಿಧರ್ ಪಾರ್ವತಮಂ ದೇಸಿರಿ ನ್ಯಾಚುರಲ್ಸ್  ಅಭಿವೃದ್ಧಿಪಡಿಸಿರುವ ಎಣ್ಣೆಯ ಗುಣಮಟ್ಟ ಮತ್ತು ಅದರ ವಿವರಗಳನ್ನು ನೀಡುವ ಕ್ಯೂಆರ್ ಕೋಡ್ ಇರುವ  ಎಣ್ಣೆಯ ಬಾಟಲ್ ಬಿಡುಗಡೆ ಮಾತನಾಡಿ, “ ಇತ್ತೀಚಿನ ದಿನಗಳಲ್ಲಿ ಗಾಣದ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ ದೇಶಿಯ ಮಾರುಕಟ್ಟೆ ಬೇಡಿಕೆಯ ಶೇಕಡ 45 ರಷ್ಟು ಖಾದ್ಯ ತೈಲ ಮಾತ್ರ ಉತ್ಪಾದನೆಯಾಗುತ್ತಿದೆ. 16.5 ಮಿಲಿಯ ಟನ್ ಖಾದ್ಯ ತೈಲ ಹೊರದೇಶಗಳಿಂದ ಆಮದಾಗುತ್ತಿದೆ.  ರೈತ ಗುಂಪುಗಳು, ಮಹಿಳಾ ಸಂಘಗಳು ಈ ಅವಕಾಶವನ್ನು ಬಳಸಿಕೊಂಡು ಸ್ಥಳೀಯವಾಗಿ ಎಣ್ಣೆ ಉತ್ಪಾದನೆ ಮಾಡಿ ಲಾಭಗಳಿಸಬಹುದು ‘’ ಎಂದರು.

ಡಾ.ಖಾದರ್ ವಲಿ ಅನ್ನ –ಆರೋಗ್ಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿದ್ದ ಪ್ರಿಸಿಷನ್ ಮೆಡಿಸಿನ್ ವಿಜ್ಞಾನಿ  ಡಾ.ಮಮತ ಶೇಖರ್ ಮಾತನಾಡಿದರು. ರೋಟರಿ ಕ್ಲಬ್ ಮೈಸೂರಿನ ರೊಟೇರಿಯನ್ ಡಿ.ರವಿಶಂಕರ್, ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಮಾತನಾಡಿದರು. ದೇಸಿರಿ ನ್ಯಾಚುರಲ್ಸ್ ನ ಎನ್‌.ಯೋಗಿಶ್‌, ಎಚ್‌.ಆರ್‌.ನವೀನ್ ಕುಮಾರ್, ಎಂ.ಮಹೇಶ ಮತ್ತು ಕೆ.ಎಸ್‌.ಮಂಜು ಉಪಸ್ಥಿತರಿದ್ದರು.ಇದನ್ನು ಓದಿ –ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ ಯುವಕ ಬಲಿ

ಮೂರು ದಿನಗಳ ಕಾಲ ನಡೆಯಲಿರುವ ದೇಸಿ ಎಣ್ಣೆ ಮೇಳದಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಲ್ಲಿದ್ದ 50 ಬಗೆಯ ಎಣ್ಣೆಗಳ ಪ್ರದರ್ಶನ ಮತ್ತು ಮಾಹಿತಿ ನೀಡಲಾಗಿತ್ತು. ಎತ್ತಿನ ಗಾಣದ ಎಣ್ಣೆಯ  ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನೋಡಬಹುದಾಗಿತ್ತು. ಸ್ಥಳದಲ್ಲೇ ಹರಳೆಣ್ಣೆ ಬೇಯಿಸಿ ಎಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನು ನೀಡಿದ್ದು ಎಲ್ಲರ ಗಮನ ಸೆಳೆಯಿತು.ಜತೆಗೆ ಸಿಎಫ್ ಟಿ ಆರ್ ಐ  ವಿಜ್ಞಾನಿಗಳು ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ವಿಧಾನವನ್ನು ತೋರಿಸಿದರು. ಜೆ ಎಸ್ ಎಸ್ ಆರ್ಯುವೇದ ಮಹಾವಿದ್ಯಾಲಯ ವೈದ್ಯರು ಉಚಿತ ಸಲಹೆ ನೀಡಿದರು. 52 ಮಳಿಗೆಗಳಲ್ಲಿ ಸಾವಯವ ಉತ್ಪನ್ನ, ಮೌಲ್ಯವರ್ಧಿತ ಪದಾರ್ಥಗಳು, ಬೀಜ, ಹಣ್ಣಿನ ಗಿಡ ಮತ್ತು ಸಹಜ ಸೌಂದರ್ಯವರ್ಧಕಗಳು ಮಾರಾಟಕ್ಕಿದ್ದವು.

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಹಾಸ್ಯ ನಟ ಬ್ಯಾಂಕ್ ಜನಾರ್ಧನ ಇನ್ನಿಲ್ಲ
ಸಾವಿನ ಮಾಹಿತಿ ಕೊಟ್ಟಿರಲಿಲ್ಲ: ಸಿಎಂ
ಬೆಂಗಳೂರು : ಆಗಸ್ಟ್ 1ರಿಂದ ಆಟೋ ದರ ಏರಿಕೆ
₹1 ಲಕ್ಷ ಲಂಚ ಸ್ವೀಕರಿಸಿದ PI ಮತ್ತು PSI ಲೋಕಾಯುಕ್ತ ಬಲೆಗೆ
ಭಾರತೀಯ ರೈಲ್ವೆ ಇಲಾಖೆಯಲ್ಲಿ 30,307 ಹುದ್ದೆಗಳ ನೇಮಕಾತಿ – ಅರ್ಜಿ ಆಹ್ವಾನ
TAGGED:breakingnewsDesi Oil FairlatestnewsMysore Newsದೇಸಿ ಎಣ್ಣೆ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BlogKarnatakaMysoreTrending

ಯಕ್ಷಗಾನ ವೇಷದಲ್ಲಿ ಚಾಮುಂಡಿ ದರ್ಶನ ಪಡೆದ ರವಿ ಬಸ್ಸೂರ್‌

Team Varthaman
Team Varthaman
April 21, 2025
ಹಕ್ಕಿಯ ಅಟೆಂಡೆನ್ಸ್  –  ಎಸ್ ಮಿಸ್
ಭಾರತ-ಪಾಕ್‌ ತಕ್ಷಣವೇ ಕದನ ವಿರಾಮ ಘೋಷಣೆಗೆ ಸಮ್ಮತಿಸಿವೆ: ಟ್ರಂಪ್‌ ಟ್ವೀಟ್
ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ: ನಟ ಪ್ರಕಾಶ್ ರಾಜ್ ಸೇರಿ 4 ಜನ ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್
ಜಾತಿ ಜನಗಣತಿ : ಸಿಎಂಗೆ ಬಿಸಿತುಪ್ಪ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?