By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಭಕ್ತಿಯ ಮೌಲ್ಯವನ್ನು ಸಾರಿದ ಶಬರಿ
    February 7, 2026
    ಒಬ್ಬರಿಗೆ ” ಟೇಕನ್ ಫ಼ಾರ್ ಗ್ರಾಂಟೆಡ್ ” ಆಗುವ ಮುನ್ನ
    February 7, 2026
    ಬಿಸಿಲಿನ ತಾಪಕ್ಕೆ ತಂಪು ಪಾನೀಯ ವರದಾನ
    February 7, 2026
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
  • Sports
  • National
  • International
  • Crime
Reading: ತಿರುಪತಿ ಲಡ್ಡು ಕಲಬೆರಕೆ: ನಾಯ್ಡು ಗಂಭೀರ ಆರೋಪ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Trending > ತಿರುಪತಿ ಲಡ್ಡು ಕಲಬೆರಕೆ: ನಾಯ್ಡು ಗಂಭೀರ ಆರೋಪ
Trending

ತಿರುಪತಿ ಲಡ್ಡು ಕಲಬೆರಕೆ: ನಾಯ್ಡು ಗಂಭೀರ ಆರೋಪ

Team Varthaman
Last updated: February 7, 2026 11:05 AM
Team Varthaman
Published: February 7, 2026
Share
SHARE

ಅಮರಾವತಿ: ತಿರುಪತಿ ಲಡ್ಡು ಪ್ರಸಾದ ತಯಾರಿಕೆ ಕುರಿತ ಕಲಬೆರಕೆ ವಿವಾದ ಮತ್ತೊಂದು ತಿರುವು ಪಡೆದಿದೆ. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಐದು ವರ್ಷಗಳ ಕಾಲ ಲಡ್ಡು ತಯಾರಿಕೆಗೆ ಬಾತ್‌ರೂಮ್ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳು ಬೆರೆತಿದ್ದ ಕಲಬೆರಕೆ ತುಪ್ಪವನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ಕರ್ನೂಲು ಜಿಲ್ಲೆಯ ಕಲುಗೋಟಲ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಲಬೆರಕೆ ತುಪ್ಪವನ್ನು ತಿರುಪತಿಯ ಜೊತೆಗೆ ಶ್ರೀಶೈಲಂ ದೇವಸ್ಥಾನಕ್ಕೂ ಪೂರೈಸಲಾಗುತ್ತಿತ್ತು ಎಂದು ತಿಳಿಸಿದರು. ಇದಲ್ಲದೆ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬನ್ನೂ ಬಳಸಲಾಗಿತ್ತು ಎಂಬುದನ್ನು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ವರದಿ ಉಲ್ಲೇಖಿಸಿದೆ ಎಂದು ಹೇಳಿದರು.

Join WhatsApp Group

ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಲಡ್ಡು ಪ್ರಸಾದಕ್ಕೆ ಬಳಸಿದ ತುಪ್ಪದಲ್ಲಿ ಸಸ್ಯಜನ್ಯ ರಾಸಾಯನಿಕಗಳ ಬದಲು ಕಡಿಮೆ ಬೆಲೆಯ ಪ್ರಾಣಿಜನ್ಯ ಕೊಬ್ಬು ಹಾಗೂ ಬಾತ್‌ರೂಮ್ ಸ್ವಚ್ಛಗೊಳಿಸುವ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗಿತ್ತು ಎಂದು ನಾಯ್ಡು ಆರೋಪಿಸಿದರು. ಈ ಮೂಲಕ ವೆಂಕಟೇಶ್ವರ ಸ್ವಾಮಿಯ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಅವರು ಕಿಡಿಕಾರಿದರು.

ಐದು ವರ್ಷಗಳ ಕಾಲ ಇದೇ ರೀತಿಯ ಕಲಬೆರಕೆ ತುಪ್ಪ ಬಳಕೆಯಾಗಿದೆ ಎಂದು ಆರೋಪಿಸಿದ ಅವರು, ದೇವಾಲಯಗಳ ಘನತೆ ಮತ್ತು ಭಕ್ತರ ನಂಬಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ವಿಷಯದಲ್ಲಿ ಅತಿಯಾಗಿ ಮಾತನಾಡಲು ಇಚ್ಛಿಸುವುದಿಲ್ಲ ಎಂದರು. ಆದರೆ ಕಲಬೆರಕೆ ಪ್ರಸಾದದಿಂದ ತಿರುಪತಿ ದೇವಾಲಯದ ಪಾವಿತ್ರ್ಯತೆಗೆ ಹಾನಿಯಾಗಿದೆ; ಅದನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಇನ್ನೊಂದೆಡೆ, ವೈಎಸ್‌ಆರ್‌ಸಿಪಿ ನಾಯಕರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಪ್ರಾಣಿಜನ್ಯ ಕೊಬ್ಬಿನ ಕಲಬೆರಕೆ ನಡೆದಿಲ್ಲ ಎಂದು ಸಿಬಿಐ ನೇತೃತ್ವದ ಎಸ್‌ಐಟಿ ಕ್ಲೀನ್ ಚಿಟ್ ನೀಡಿದೆ ಎಂದು ವಾದಿಸಿದ್ದಾರೆ. ಆದರೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ವಿ. ಸುಬ್ಬಾರೆಡ್ಡಿ ಅವರು ಕಲಬೆರಕೆ ನಡೆದಿದೆ ಎಂದು ಹೇಳಿರುವುದು ವಿವಾದಕ್ಕೆ ಮತ್ತಷ್ಟು ಇಂಧನ ತುಂಬಿದೆ.ಇದನ್ನು ಓದಿ –ಮ್ಯೂಲ್ ಅಕೌಂಟ್‌ ಸೈಬರ್ ದಂಧೆ ಭೇದನೆ: CID ದಾಳಿ

ಈ ನಡುವೆ, ವೈಎಸ್‌ಆರ್‌ಸಿಪಿ, ಟಿಡಿಪಿ ಮತ್ತು ಮುಖ್ಯಮಂತ್ರಿ ನಾಯ್ಡು ರಾಜಕೀಯ ಲಾಭಕ್ಕಾಗಿ ಕೋಮು ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದೆ.

  • ಮೆಟ್ರೋ ದರ ಏರಿಕೆ ಇಲ್ಲ: ತೇಜಸ್ವಿ ಸೂರ್ಯ
    by Team Varthaman
  • ಭಕ್ತಿಯ ಮೌಲ್ಯವನ್ನು ಸಾರಿದ ಶಬರಿ
    by Team Varthaman
  • ಒಬ್ಬರಿಗೆ ” ಟೇಕನ್ ಫ಼ಾರ್ ಗ್ರಾಂಟೆಡ್ ” ಆಗುವ ಮುನ್ನ
    by Team Varthaman
  • ಬಿಸಿಲಿನ ತಾಪಕ್ಕೆ ತಂಪು ಪಾನೀಯ ವರದಾನ
    by Team Varthaman
  • ಡಿಕೆಶಿ ಶೀಘ್ರವೇ ಮುಖ್ಯಮಂತ್ರಿ: ಶಾಸಕ ಇಕ್ಬಾಲ್
    by Team Varthaman
ಜೂ.೨೨ಕ್ಕೆ ಉಚಿತ ಕಣ್ಣಿನ ತಪಾಸಣಾ ಶಿಬಿರ
ರಾಜ್ಯದ ಹಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಚಾರ್ಮಡಿ ಘಾಟ್‌ನಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೊಸ ನಿಯಮ
ಜಿಲ್ಲೆಯ ಸಣ್ಣ- ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ: ಡಾ. ಕುಮಾರ
ಮೊಟ್ಟೆಗಳಲ್ಲಿ ‘ನೈಟ್ರೋಫ್ಯೂರಾನ್’ ಅವಶೇಷಗಳ ಶಂಕೆ
TAGGED:breakingnewslatestnewstirupati ladduತಿರುಪತಿ ಲಡ್ಡು
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BellaryKarnatakaTrending

ಗ್ರಾಮೀಣ ಯೋಜನಾ ಇಲಾಖೆ ಅಧಿಕಾರಿಯ ಮೇಲೆ ಲೋಕಾಯುಕ್ತ ದಾಳಿ

Team Varthaman
Team Varthaman
July 23, 2025
9 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ: ವೃದ್ಧ ಅರೆಸ್ಟ್
ಚಿನ್ನದ ಬೆಲೆ ಇಳಿಕೆ – ಖರೀದಿಗೆ ಇದೇ ಉತ್ತಮ ಸಮಯ!
WhatsApp ಲಿಂಕ್ ಮೂಲಕ 65 ಲಕ್ಷ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ
ಸಣ್ಣ ವಯಸ್ಸಿಗೆ ಹೃದಯಾಘಾತದ ಸಂಖ್ಯೆಯಲ್ಲಿ ಹೆಚ್ಚಳ: ಡಾ.ಸದಾನಂದ ಕಳವಳ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?